ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಡಹಗಲೇ ಮಹಿಳೆಯನ್ನು ಅಟ್ಟಾಡಿಸಿದ ದುಷ್ಕರ್ಮಿಗಳು ಸರಗಳ್ಳತನಕ್ಕೆ ಯತ್ನಿಸಿರುವ ಘಟನೆ ಮುಳಬಾಗಿಲಿನ ಸಂಜಪ್ಪ ಬಡಾವಣೆಯಲ್ಲಿ ನಡೆದಿದೆ.
ಖಾಲಿ ನಿವೇಶನವೊಂದರ ಬಳಿ ಮಹಿಳೆ ಸ್ಕೂಟಿ ನಿಲ್ಲಿಸುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಓರ್ವ ಬೈಕ್ ಮೇಲೆ ಕುಳಿತಿದ್ದರೆ, ಮತ್ತೋರ್ವ ಮಹಿಳೆಯನ್ನು ಅಟ್ಟಾಡಿಸಿದ್ದು, ಕುತ್ತಿಗೆಗೆ ಹಾಕಿ ಸರ ದೋಚಲು ಯತ್ನಿಸಿದ್ದಾನೆ.
ನಂತರ ಮಹಿಳೆ ಕಿರುಚಲು ಪ್ರಾರಂಭಿಸಿದ್ದಾಗ, ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸುತ್ತಿದ್ದಂತೆಯೇ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಭಯಾನಕ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತನಿಖಾಧಿಕಾರಿಗಳು ಹಂಚಿಕೊಳ್ಳುತ್ತಿದ್ದಾರೆ.