Bath Towel | ನಿಮ್ಮ ಬಾತ್‌ ಟವೆಲ್‌ಅನ್ನು ವಾರಕ್ಕೆ ಎಷ್ಟು ಬಾರಿ ತೊಳಿತೀರಾ? ಈ ಬಗ್ಗೆ ತಜ್ಞರು ಏನಂತಾರೆ?

ಅನೇಕ ಜನರು ತಮ್ಮ ಮನೆಯನ್ನು ತುಂಬಾ ಸ್ವಚ್ಛವಾಗಿಟ್ಟುಕೊಂಡರೂ ತಾವು ಪ್ರತಿನಿತ್ಯ ಬಳಸುವ ಕೆಲವೊಂದು ವಸ್ತುಗಳನ್ನು ಶುಚಿಯಾಗಿಟ್ಟುಕೊಳ್ಳುವುದನ್ನು ಮರೆತುಬಿಡುತ್ತಾರೆ. ಅದರಲ್ಲೂ ಮುಖ್ಯವಾಗಿ ಸ್ನಾನದ ಟವೆಲ್. ಇದು ದೇಹವನ್ನು ಒರೆಸುವುದಕ್ಕೆ ಮಾತ್ರವಲ್ಲ ದೇಹದ ನೈರ್ಮಲ್ಯ ಕಾಯ್ದುಕೊಳ್ಳುವ ಪ್ರಮುಖ ಭಾಗವೂ ಹೌದು. ಆದರೆ, ಅದನ್ನ ಸರಿಯಾಗಿ ತೊಳೆಯದೇ ವಾರಗಟ್ಟಲೆ ಬಳಸಿದ್ರೆ, ಅದು ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಹಾಗೂ ಇತರ ಸೂಕ್ಷ್ಮಜೀವಿಗಳ ಮನೆಯಾಗಬಹುದು. ಪರಿಣಾಮವಾಗಿ ಇದು ಚರ್ಮದ ಸೋಂಕುಗಳಿಂದ ಹಿಡಿದು ಚರ್ಮದಲ್ಲಿ ಕಿರಿಕಿರಿ, ತುರಿಕೆ, ಮೊಡವೆ ಮತ್ತಿತರ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.

Green branch plant on fresh bathroom towels Close up view of green branch on fresh bathroom towels. Concept of dry cleaning, hygiene and laundry in hotel or home. Room service preparing accommodation for new guest. Advertising, copy space Bath Towel stock pictures, royalty-free photos & images

ಟವೆಲ್‌ಗಳು ದೇಹದ ಬೆವರು, ಸತ್ತ ಚರ್ಮದ ಕೋಶಗಳು ಮತ್ತು ನೈಸರ್ಗಿಕ ಎಣ್ಣೆಗಳನ್ನು ಕ್ಲೀನ್ ಮಾಡುತ್ತವೆ ಎನ್ನೋದು ಗೊತ್ತಿದೆ. ಈ ಅಂಶಗಳು ದೇಹ ಒರೆಸುವಾಗ ಟವೆಲ್ ಒಳಗೆ ಸೇರಿಕೊಳ್ಳುತ್ತವೆ. ಈ ತೇವಾಂಶವು ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರಗಳ ಬೆಳವಣಿಗೆಗೆ ಪರಿಣಾಮಕಾರಿಯಾದ ವಾತಾವರಣವನ್ನು ಸೃಷ್ಟಿಸುತ್ತದೆ. ಇದರಿಂದ ತ್ವರಿತವಾಗಿ ಚರ್ಮದ ಸೋಂಕುಗಳು, ಕಿರಿಕಿರಿ, ಮೊಡವೆ, ಹಾಗೂ ತುರಿಕೆ ಉಂಟಾಗಬಹುದು.

ತೊಳೆಯದ ಟವೆಲ್‌ಗಳಿಂದ ತುರಿಕೆ, ಮತ್ತು ಫೋಲಿಕ್ಯುಲೈಟಿಸ್ (ಕೂದಲು ರಂಧ್ರದ ಸೋಂಕು) ಉಂಟಾಗಬಹುದು. ಟವೆಲ್ ಅನ್ನು ಹಲವಾರು ವಾರಗಳ ಕಾಲ ತೊಳೆಯದಿದ್ದರೆ ಟವೆಲ್‌ನಲ್ಲಿ ಕೊಳೆತ ವಾಸನೆ ಹರಡುತ್ತದೆ – ಇದು ಬ್ಯಾಕ್ಟೀರಿಯಾ ಇದ್ದಿರುವುದರ ಸೂಚನೆಯೂ ಆಗಿದೆ.

Clean terry towels on wooden chair with brick wall background, copy space. Clean terry towels on wooden chair with brick wall background, copy space. Bath Towel stock pictures, royalty-free photos & images

ಅಷ್ಟೇ ಅಲ್ಲದೆ, ಶಿಲೀಂಧ್ರ ಸೋಂಕುಗಳು ಪ್ರಾರಂಭವಾದರೆ ಅದರ ಚಿಕಿತ್ಸೆಯೂ ಕಷ್ಟಕರವಾಗಬಹುದು. ಹೀಗಾಗಿ, ಟವೆಲ್‌ನ ಸ್ವಚ್ಛತೆಯನ್ನು ನಿರ್ಲಕ್ಷಿಸುವುದು ನಿಮ್ಮ ನಿತ್ಯ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ.

ಚರ್ಮ ತಜ್ಞರ ಶಿಫಾರಸು ಏನೆಂದರೆ, ಟವೆಲ್‌ಗಳನ್ನು ಪ್ರತಿ 2-3 ದಿನಗಳಿಗೊಮ್ಮೆ ಕಡ್ಡಾಯವಾಗಿ ತೊಳೆಯಬೇಕು. ಇದು ಬ್ಯಾಕ್ಟೀರಿಯಾ, ಶಿಲೀಂಧ್ರ ಹಾಗೂ ಇತರ ಹಾನಿಕಾರಕ ಸೂಕ್ಷ್ಮಜೀವಿಗಳಿಂದ ಮುಕ್ತವಾಗಿರಲು ಸಹಕಾರಿಯಾಗುತ್ತದೆ.

Mission accomplished, fresh and clean towels Shot of an unrecognizable woman doing her laundry at home Bath Towel stock pictures, royalty-free photos & images

ನೈರ್ಮಲ್ಯ ಮಾತ್ರವಲ್ಲ, ಉತ್ತಮ ಚರ್ಮದ ಆರೋಗ್ಯವೂ ಒಂದು ಸರಿಯಾದ ಟವೆಲ್ ಬಳಕೆಯಿಂದ ಪ್ರಾರಂಭವಾಗುತ್ತದೆ ಎಂಬುದನ್ನು ನೆನಪಿಡಿ. (ಸಾಮಾಜಿಕ ಜಾಲತಾಣದಲ್ಲಿ ದೊರೆತ ಮಾಹಿತಿಯ ಆಧಾರದ ಮೇಲೆ ಈ ಲೇಖನ ಪ್ರಕಟವಾಗಿದೆ)

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!