ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಮಟ್ಟದಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ಕೆ-ಡ್ರಾಮಾ ಸ್ಕ್ವಿಡ್ ಗೇಮ್ (Squid Game) ಮೂರನೇ ಮತ್ತು ಅಂತಿಮ ಸೀಸನ್ ಇಂದು (ಜೂನ್ 27, ಶುಕ್ರವಾರ) ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಅಪಾರ ಕುತೂಹಲವನ್ನು ಹುಟ್ಟುಹಾಕಿದೆ. ಈ ಬಹು ನಿರೀಕ್ಷಿತ ಸೀಸನ್ ಅನ್ನು ನೆಟ್‌ಫ್ಲಿಕ್ಸ್ ಇಂದು ಸ್ಟ್ರೀಮ್ ಮಾಡಿದೆ.
ಸೀಸನ್ 3: ಕಥೆಯ ಮುಂದುವರಿಕೆ
ಸ್ಕ್ವಿಡ್ ಗೇಮ್‌ನ ಹಿಂದಿನ ಸೀಸನ್‌ನ ಕಥೆಯನ್ನು ಮುಂದುವರಿಸುತ್ತಿರುವ ಈ ಮೂರನೇ ಹಂತ, ಹೊಸ ಟ್ವಿಸ್ಟ್‌ಗಳ ಜೊತೆಗೆ ಆರಂಭವಾಗುತ್ತದೆ. ಈ ಬಾರಿ ಗಿ-ಹನ್ ಅಲಿಯಾಸ್ ಪ್ಲೇಯರ್ 456, ತನ್ನ ಗೆಳೆಯನ ಸಾವಿನ ಭಾರವನ್ನು ಹೊತ್ತುಕೊಂಡು ಹೊಸ ದಾರಿಯನ್ನು ತಲುಪುತ್ತಾನೆ. ಆಟದ ಹಿಂದಿರುವ ಮರ್ಮ, ಶಕ್ತಿಶಾಲಿ ವಿಐಪಿಗಳ ರಹಸ್ಯ ಮತ್ತು ಫ್ರಂಟ್ ಮ್ಯಾನ್‌ನ ನಿಜ ರೂಪ—ಇವುಗಳ ಸುತ್ತಲೇ ಕಥೆ ಸಂಚರಿಸಲಿದೆ.
ಈ ಸೀಸನ್ ಒಟ್ಟು 6 ಎಪಿಸೋಡ್‌ಗಳನ್ನ ಒಳಗೊಂಡಿದ್ದು, ಪ್ರತಿಯೊಂದು ಕಂತುಗಳು, ನಿಷ್ಠೆ ಮತ್ತು ದ್ರೋಹದ ನಡುವೆ ನಡೆಯುವ ಘರ್ಷಣೆಗೆ ಸಾಕ್ಷಿಯಾಗಲಿದೆ. ಫ್ರಂಟ್ ಮ್ಯಾನ್ ಆಗಿ ಇನ್-ಹೋ ಮರಳಿ ಬರುವಾಗ, ಜುನ್-ಹೋ ಅವರ ಅನ್ವೇಷಣೆಯೂ ಮತ್ತಷ್ಟು ತೀವ್ರಗೊಳ್ಳುತ್ತದೆ. ಎಲ್ಲದಕ್ಕೂ ಮೀರಿದ ಪ್ರಶ್ನೆ—ಗಿ-ಹನ್ ಈ ಬಾರಿ ಆಟವನ್ನು ಮುಗಿಸುತ್ತಾರಾ? ಎನ್ನುವುದು.
ಬಿಡುಗಡೆ ವೇಳಾಪಟ್ಟಿ – ಭಾರತೀಯ ಸಮಯದಲ್ಲಿ ಯಾವಾಗ?
ಸ್ಕ್ವಿಡ್ ಗೇಮ್ ಸೀಸನ್ 3 ಭಾರತೀಯ ಸಮಯದಲ್ಲಿ ಜೂನ್ 27, ಮಧ್ಯಾಹ್ನ 12:30 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿರಲಿದೆ. ಪ್ರೇಕ್ಷಕರು ಈಗಾಗಲೇ ತಮ್ಮ ಎಕ್ಸ್‌ಪ್ಲೋರ್ ಲಿಸ್ಟ್‌ನಲ್ಲಿ ಈ ಶೋವನ್ನ ಸೆಟ್ ಮಾಡಿಕೊಂಡಿದ್ದಾರೆ.