Health Tips | ಎಷ್ಟೇ ಟ್ರೈ ಮಾಡಿದ್ರು ಕೆಲಸ ಮಾಡೋವಾಗ ನಿದ್ದೆ ಬರುತ್ತಾ? ಹಾಗಾದ್ರೆ ಈ ಆಹಾರಗಳನ್ನು ತಿನ್ಬೇಡಿ!

ಬೆಳಿಗ್ಗೆ ಕಾಫಿ ಕುಡಿದು, ಸಜ್ಜಾಗಿ ಕೆಲಸಕ್ಕೆ ಕೂತ ಕೂಡಲೇ ಮಂಪರು ಹಿಹಿಡಿಯುತ್ತಾ? ಎಷ್ಟೇ ನಿದ್ರೆ ಮಾಡಿ ಬಂದರೂ, ಕೆಲಸದ ಟೇಬಲ್ ಮೇಲೆ ತಲೆ ವಾಲುತ್ತಾ? ಇದು ಕೇವಲ ಆಯಾಸದ ಪರಿಣಾಮವಲ್ಲ, ನೀವು ಸೇವಿಸಿರುವ ಆಹಾರವೂ ಇದರ ಹಿಂದೆ ಅನ್ನೋದನ್ನು ಮರೀಬೇಡಿ. ಕೆಲವೊಂದು ಆಹಾರ ಪದಾರ್ಥಗಳು ದೇಹದಲ್ಲಿ ನಿದ್ರಾ ಹಾರ್ಮೋನ್‌ಗಳನ್ನು ಉಂಟುಮಾಡಿ, ಕೆಲಸದ ಹೊತ್ತಿನಲ್ಲಿ ಮನಸ್ಸನ್ನು ಕೇಂದ್ರೀಕರಿಸದಂತೆ ಮಾಡುತ್ತವೆ. ಹಾಗಾದರೆ ಇಂತಹ ಆಹಾರಗಳನ್ನು ತಪ್ಪಿಸಿ ಎಚ್ಚರಿಕೆಯಿಂದ ಕೆಲಸ ಮಾಡಲು ಸಾಧ್ಯವಿದೆ. ಯಾವ್ಯಾವ ಆಹಾರಗಳಿಂದ ದೂರವಿರಬೇಕು ಎಂಬ ಮಾಹಿತಿ ಇಲ್ಲಿದೆ.

ಒಂದೇ ಆಹಾರವನ್ನು ಪುನರಾವರ್ತನೆ ಮಾಡಬೇಡಿ:
ಬೆಳಗ್ಗೆ ತಿಂದ ಆಹಾರವನ್ನೇ ಮಧ್ಯಾಹ್ನ ಮತ್ತೆ ತೆಗೆದುಕೊಂಡುಬಂದರೆ ಒಂದೇ ರೀತಿಯ ಆಹಾರತಿನ್ನುವುದರಿಂದ ನಿದ್ರೆ ಬರುತ್ತದೆ. ಇದು ನಿಮ್ಮ ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತದೆ. ಆಫೀಸ್ ವೇಳೆ ವಿಭಿನ್ನ ತಿನಿಸುಗಳನ್ನು ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ.

Aloo paratha or potato stuffed flat bread on a wooden background. Served with curd and sauce. Breakfast and evening snacks. Aloo paratha or potato stuffed flat bread on a wooden background. Served with curd and sauce. Breakfast and evening snacks. breakfast stock pictures, royalty-free photos & images

ಅನ್ನ ಹೆಚ್ಚು ಸೇವನೆ ಬೇಡ:
ಅಕ್ಕಿಯಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್ ಇದ್ದು, ಅದು ಗ್ಲೂಕೋಸ್ ಆಗಿ ಇನ್ಸುಲಿನ್ ಮತ್ತು ನಿದ್ರೆ ದೇಹದಲ್ಲಿ ಮೆಲಟೋನಿನ್ ಬಿಡುಗಡೆಗೆ ಕಾರಣವಾಗುತ್ತದೆ. ಇದರಿಂದಾಗಿ ಊಟದ ನಂತರ ನಿದ್ರೆ ತೀವ್ರವಾಗುತ್ತದೆ. ಮಧ್ಯಾಹ್ನ ಅನ್ನ ಸೇವನೆ ತಪ್ಪಿಸುವುದು ಉತ್ತಮ.

Vege Rice A delicious and  healthy Vegetable Rice. rice stock pictures, royalty-free photos & images

ಮೆಲಟೋನಿನ್ ಹೆಚ್ಚಿರುವ ಆಹಾರಗಳು ತಪ್ಪಿಸಿ:
ಓಟ್ಸ್, ಟೊಮ್ಯಾಟೋ, ಮಶ್ರೂಮ್, ಪಿಸ್ತಾ, ಮೊಟ್ಟೆ ಇತ್ಯಾದಿ ಆಹಾರಗಳು ಮೆಲಟೋನಿನ್ ಸಮೃದ್ಧವಾಗಿವೆ. ಇದು ನಿದ್ರೆಗೆ ಉತ್ತೇಜನ ನೀಡುವ ಕಾರಣದಿಂದ, ಕೆಲಸದ ಸಮಯದಲ್ಲಿ ಇವುಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ.

bowl of porridge bowl of Oatmeal ( Porridge ) from above with spoon. oats stock pictures, royalty-free photos & images

ಹೆಚ್ಚಿನ ಪ್ರೋಟೀನ್ ಸೇವನೆಯು ಸುಸ್ತು ತರಬಹುದು:
ಸೋಯಾ ಉತ್ಪನ್ನ, ಚಿಕನ್, ಬೀಜಗಳು ಹಾಗೂ ಪಾಲಕ್ ಜೀರ್ಣವಾಗಲು ಹೆಚ್ಚು ಶಕ್ತಿ ಬೇಕಾಗುತ್ತದೆ. ಇದರಿಂದ ದೇಹದಲ್ಲಿ ಆಯಾಸ ಉಂಟಾಗಿ ವಿಶ್ರಾಂತಿ ಪಡೆಯುವ ಬಯಕೆ ಉಂಟಾಗುತ್ತದೆ.

Clean food with mixed vegetable and fruit salad on wood table background Clean healthy low fat ready to eat food with mixed vegetable and fruit salad in round shape dish on wood table background top view with copy space Protein stock pictures, royalty-free photos & images

ಸಕ್ಕರೆಯ ಆಹಾರಗಳಿಂದ ಎಚ್ಚರಿಕೆ:
ಸಿಹಿ ತಿಂಡಿಗಳಲ್ಲಿ ಅತಿಯಾದ ಸಕ್ಕರೆ ಸೇವನೆಯು ತಕ್ಷಣ ಶಕ್ತಿ ನೀಡಿದರೂ ಕೂಡ, ನಂತರ ದೇಹ ತಕ್ಷಣವೇ ಡೌನ್ ಆಗಿ ಮಂಪರಿಗೆ ಕಾರಣವಾಗುತ್ತದೆ.

Selection of food high in sugar Selection of food high in sugar, copy space sugar foods stock pictures, royalty-free photos & images

ಕಚೇರಿ ಸಮಯದಲ್ಲಿ ಇಂಥ ಆಹಾರ ಪದಾರ್ಥಗಳನ್ನು ತಪ್ಪಿಸಿ, ಹಗುರ, ತಾಜಾ, ರುಚಿಕರ ಹಾಗೂ ಪೋಷಕಾಂಶಯುಕ್ತ ಆಹಾರವನ್ನು ಆಯ್ಕೆ ಮಾಡಿ. (ಸಾಮಾಜಿಕ ಜಾಲತಾಣದಲ್ಲಿ ದೊರೆತ ಮಾಹಿತಿಯ ಆಧಾರದ ಮೇಲೆ ಈ ಲೇಖನ ಪ್ರಕಟವಾಗಿದೆ)

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!