ದಿನಭವಿಷ್ಯ: ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ತಿಳಿದುಕೊಳ್ಳಿ

ಮೇಷ
ಕೆಲವು ಅಡ್ಡಿಗಳ ಹೊರತಾಗಿಯೂ ನಿಮ್ಮ ಉದ್ದೇಶ ಈಡೇರಲಿದೆ.  ಹಣದ ಬಿಕ್ಕಟ್ಟು ಉಂಟಾದರೂ ಬಳಿಕ ನಿವಾರಣೆ.
ವೃಷಭ
ನಿಮಗೆ ಪೂರಕ ಬೆಳವಣಿಗೆ ಕಾಣುವಿರಿ. ಕುಟುಂಬಸ್ಥರು ಜತೆ ಸೇರುವ ಅವಕಾಶ ಬರಲಿದೆ. ಆರೋಗ್ಯ ನೆಮ್ಮದಿ ನೀಡಲಿದೆ.
ಮಿಥುನ
ನಿಮ್ಮ ಸುತ್ತಲಿನ ಜನರೊಂದಿಗೆ ಉದ್ವಿಗ್ನತೆ ಶಮನಗೊಳಿಸಿ. ಮನಶ್ಯಾಂತಿ ಮುಖ್ಯ ಎಂದು ಅರಿಯಿರಿ. ಕೌಟುಂಬಿಕ ಸಹಕಾರ.
ಕಟಕ
ಇತರರ ಕುರಿತು ವದಂತಿ ಹರಡುವ ಕಾರ್ಯದಲ್ಲಿ ಸೇರದಿರಿ. ಅದರಿಂದ ಸಮಸ್ಯೆ ಉಂಟಾದೀತು. ಸ್ವಂತ ವಿಷಯಕ್ಕೆ ಗಮನ ಕೊಡಿ.
ಸಿಂಹ
ಅನಪೇಕ್ಷಿತ ಪ್ರಸಂಗ ಎದುರಿಸುವಿರಿ. ಬೇಸರ ಹುಟ್ಟಿಸುವ ಸನ್ನಿವೇಶ ಉಂಟಾದೀತು.  ಆದರೆ ಕೊನೆಯಲ್ಲಿ ಎಲ್ಲವೂ ಸರಿಯಾಗುವುದು.
ಕನ್ಯಾ
ನಿಮ್ಮ ಕೌಶಲಕ್ಕೆ ಸೂಕ್ತ ಬೆಂಬಲ ದೊರಕಲಿದೆ. ನಿಮ್ಮನ್ನು ಯಾರೂ ಗಮನಿಸುತ್ತಿಲ್ಲ ಎಂಬ ಕೊರಗು ಬಿಡಿ. ಖರ್ಚು ಹೆಚ್ಚುವ ಪ್ರಸಂಗ.
ತುಲಾ
ನಿಮ್ಮ ಭಾವವನ್ನು ಸ್ಪಷ್ಟವಾಗಿ ಅಭಿವ್ಯಕ್ತಿಸಿ. ತಪ್ಪರ್ಥ ಮೂಡುವುದನ್ನು ತಪ್ಪಿಸಲು ಇದು ಸಹಕಾರಿ. ಕೆಲಸದಲ್ಲಿ ಅವಸರ ಬೇಡ, ಸಾವಧಾನವೇ ಒಳಿತು.
ವೃಶ್ಚಿಕ
ನೆಗೆಟಿವ್ ಮನಸ್ಥಿತಿಯ ವ್ಯಕ್ತಿಗಳಿಂದ ದೂರವಿರಿ. ನಿಮ್ಮ ಮನಸ್ಸನ್ನೂ ಕೆಡಿಸಿಯಾರು. ದಂಪತಿ ಮಧ್ಯೆ ಕಲಹ ಸಂಭವ. ಸಹನೆ ಅವಶ್ಯ.
ಧನು
ನಿಮ್ಮ ಕುಟುಂಬಕ್ಕೆ ಸಂಬಂಽಸಿ ಮಹತ್ವದ ದಿನ. ಏನಾದರೊಂದು ಬೆಳವಣಿಗೆ ಉಂಟಾದೀತು. ಸಮಸ್ಯೆಯನ್ನು ದಿಟ್ಟವಾಗಿ ಎದುರಿಸಿ, ಗೆಲ್ಲಿರಿ.
ಮಕರ
ಹಣವನ್ನು ದುರ್ವಿನಿಯೋಗ ಮಾಡದಿರಿ ಎಂದು ಗ್ರಹಗತಿ ಸೂಚಿಸುತ್ತಿದೆ. ಯೋಜನೆಯೊಂದು ಬದಲಾಗಬೇಕಾದೀತು.
ಕುಂಭ
ವಿಶ್ವಾಸ ವೃದ್ಧಿಸುವ ಬೆಳವಣಿಗೆ. ನಿಮ್ಮ ಪ್ರಯತ್ನದಿಂದ ಸಮಸ್ಯೆ ಪರಿಹಾರ ಕಾಣುವುದು. ಬಂಧುಗಳು ನಿಮ್ಮ ನಿಲುವು ಮೆಚ್ಚುವರು.
ಮೀನ
ಎಲ್ಲಾ ಅನುಮಾನ ಪರಿಹರಿಸಿಕೊಂಡೇ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಿರಿ. ಮುಂದೆ ನೋವು ಪಡದಿರಲು ಇದು ಅವಶ್ಯ

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!