ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಕೆಆರ್ಎಸ್ ಡ್ಯಾಂ ಐತಿಹಾಸಿಕ ದಾಖಲೆಯ ಭರ್ತಿಗೆ 1 ಅಡಿಯಷ್ಟೇ ಬಾಕಿ ಉಳಿದಿದೆ.
ಈಗಾಗಲೇ ಕೆಆರ್ಎಸ್ ಡ್ಯಾಂ 123.25 ಅಡಿ ಭರ್ತಿಯಾಗಿದೆ. 124.80 ಅಡಿ ಗರಿಷ್ಠ ಮಟ್ಟ ಇದ್ದು, ಪೂರ್ಣ ಭರ್ತಿಗೆ ಇನ್ನೊಂದು ಅಡಿಯಷ್ಟೇ ಬಾಕಿ ಉಳಿದಿದೆ. 93 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಡ್ಯಾಂ ಭರ್ತಿಗೆ ಕಾಲ ಕೂಡಿಬಂದಿದೆ. ಜೂನ್ ತಿಂಗಳಲ್ಲೇ ಅಣೆಕಟ್ಟೆ ಭರ್ತಿಯಾಗಿದ್ದು ಇದೇ ಮೊದಲು ಎನಿಸಲಿದೆ.