ಸದಾ ಚುರುಕು, ಮುಖದಲ್ಲಿ ನಗು, ವಯಸ್ಸು ಅವರ ಮೇಲೆ ಪರಿಣಾಮ ಬೀರುವಂತೆಯೇ ಕಾಣಿಸುವುದಿಲ್ಲ ಯಾರ ಬಗ್ಗೆ ಮಾತಾಡ್ತಿದ್ದೀವಿ ಗೊತ್ತಾ? ಕೊರಿಯನ್ ಮಹಿಳೆಯರ ಬಗ್ಗೆ. ಕೊರಿಯನ್ ಮಹಿಳೆಯರ ಈ ಯಂಗ್ ಲುಕ್ ಎಲ್ಲರಿಗೂ ಆಶ್ಚರ್ಯ ಹುಟ್ಟಿಸುತ್ತದೆ. ಆದರೆ ಇದಕ್ಕೆ ಹಿನ್ನಲೆಯಲ್ಲಿ ಇರುವ ಸಂಗತಿಗಳು ಆಹಾರ ಮತ್ತು ಜೀವನ ಶೈಲಿಯ ಸಮತೋಲನ. ಅವರು ದಿನನಿತ್ಯ ಸೇವಿಸುವ ಕೆಲವು ಆಹಾರ ಪದಾರ್ಥಗಳು, ಚರ್ಮದ ಆರೋಗ್ಯದಿಂದ ಹಿಡಿದು ದೇಹದ ಶಕ್ತಿವರ್ಧನೆಯವರೆಗೆ ಹಲವು ಕಡೆ ಪಾಸಿಟಿವ್ ಇಂಪ್ಯಾಕ್ಟ್ ನೀಡುತ್ತವೆ.
ಸೀವೀಡ್
ಕಡಲಿನಿಂದ ಲಭ್ಯವಿರುವ ಈ ಸಸ್ಯವು ಕೊರಿಯನ್ ಆಹಾರದಲ್ಲಿ ಅತ್ಯಂತ ಸಾಮಾನ್ಯ. ಅಯೋಡಿನ್, ವಿಟಮಿನ್ ಎ, ಸಿ, ಕ್ಯಾಲ್ಸಿಯಂ ಮುಂತಾದ ಖನಿಜಾಂಶಗಳಿಂದ ತುಂಬಿರುವ ಸೀವೀಡ್ ಥೈರಾಯ್ಡ್ ಆರೋಗ್ಯ ಸುಧಾರಣೆ ಮೂಲಕ ಚರ್ಮದ ಹೊಳೆಯು ಮತ್ತು ಶಕ್ತಿಯ ಮಟ್ಟವನ್ನು ನಿಯಂತ್ರಿಸುತ್ತದೆ. ಹೆರಿಗೆಯ ನಂತರದ ಪುನಶ್ಚೇತನ ಆಹಾರವಾಗಿ ಇದರ ಸೂಪ್ ತುಂಬಾ ಜನಪ್ರಿಯ.
ಕಿಮ್ಚಿ – ಪ್ರೋಬಯಾಟಿಕ್ ಶಕ್ತಿ ಕೇಂದ್ರ
ಹುದುಗಿಸಿದ ಎಲೆಕೋಸಿನಿಂದ ತಯಾರಾಗುವ ಕಿಮ್ಚಿ ಕೊರಿಯಾದ ರಾಷ್ಟ್ರೀಯ ಆಹಾರವಾಗಿದ್ದು, ಕರುಳಿನ ಆರೋಗ್ಯಕ್ಕೆ ಅತ್ಯಂತ ಉಪಯುಕ್ತ. ಉತ್ತಮ ಜೀರ್ಣಕ್ರಿಯೆ ಚರ್ಮದ ಮೇಲೆ ಪಾಸಿಟಿವ್ ಪರಿಣಾಮ ಬೀರುತ್ತದೆ. ಮೊಡವೆ, ದಪ್ಪ ಚರ್ಮ, ಮತ್ತು ಉರಿಯೂತ ಇವುಗಳನ್ನು ತಗ್ಗಿಸಲು ಸಹಾಯ ಮಾಡುವ ಈ ಅಂಶ, ಕೊರಿಯನ್ ಮಹಿಳೆಯರ ಚರ್ಮದ ನಯಗೊಳಿಸಲೂ ಕಾರಣ ಎಂದರೆ ತಪ್ಪಾಗಲಾರದು.
ಗ್ರೀನ್ ಟೀ
ಗ್ರೀನ್ ಟೀ ಉತ್ಕರ್ಷಣ ವಿರೋಧಿ (antioxidants) ಅಂಶಗಳಿಂದ ತುಂಬಿರುತ್ತಿದ್ದು, ಚರ್ಮದ ಯೌವನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿರುವ ಕ್ಯಾಟೆಚಿನ್ ಅಂಶ ಚಯಾಪಚಯವನ್ನು ಗತಿಯೊಳಗೊಳಿಸಿ ತೂಕ ಇಳಿಕೆಗೆ ಸಹ ಕಾರಣವಾಗುತ್ತದೆ. ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಇದು ಪೂರಕ.
ಸಿಹಿ ಗೆಣಸು – ವಿಟಮಿನ್ ಎ ಸಂಪತ್ತು
ಬೀಟಾ ಕ್ಯಾರೋಟಿನ್‌ನ ಸಮೃದ್ಧ ಮೂಲವಾದ ಸಿಹಿ ಗೆಣಸು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದ್ದು, ರಕ್ತದ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ. ಚರ್ಮಕ್ಕೆ ಕಂಫರ್ಟ್ ಆಹಾರವಾದ ಈ ಗೆಣಸು, ತಾಜಾ ಹೊಳಪನ್ನು ನಿಮ್ಮ ಚರ್ಮಕ್ಕೆ ನೀಡುತ್ತದೆ.
ಟೋಫು (tofu )
ಟೋಫು ನೈಸರ್ಗಿಕ ಪ್ರೋಟೀನ್ ಮತ್ತು ಐಸೋಫ್ಲೇವೋನ್‌ಗಳಿಂದ ಕೂಡಿದ್ದು, ಹಾರ್ಮೋನು ಸಮತೋಲನ ಮತ್ತು ಕಾಲಜನ್ ಉತ್ಪಾದನೆಗೆ ಸಹಕಾರಿಯಾಗಿದೆ. ಇದರ ಸೇವನೆ ಚರ್ಮದ ಆಕಾರ ಮತ್ತು ನಯತೆ ಕಾಪಾಡುವಲ್ಲಿ ಸಹಕಾರಿಯಾಗಿದೆ.
ಆಹಾರ ಶೈಲಿಯಲ್ಲಿಯೇ ಸೌಂದರ್ಯವಿದೆ!
ಕೊರಿಯನ್ ಮಹಿಳೆಯರ ಈ ಆಹಾರ ಪದ್ಧತಿಯು ನಮ್ಮ ಪಾಲಿಗೆ ಕೂಡ ಪ್ರೇರಣೆಯಾಗಿದೆ. ಮಾರುಕಟ್ಟೆ ಉತ್ಪನ್ನಗಳಿಗಿಂತ ನೈಸರ್ಗಿಕ ಪದಾರ್ಥಗಳು ದೀರ್ಘಕಾಲಿಕ ಪರಿಣಾಮ ನೀಡುತ್ತವೆ ಎಂಬುದಕ್ಕೆ ಇದು ಉದಾಹರಣೆ.