Cooking Tips | ಅಡುಗೆ ಮಾಡುವಾಗ ಲೋಳೆಯಾಗುವ ಬೆಂಡೆಕಾಯಿ ಸಮಸ್ಯೆಗೆ ಪರಿಹಾರ ಇಲ್ಲಿದೆ!

ಬೆಂಡೆಕಾಯಿ ಭಾರತೀಯ ಅಡುಗೆ ಮನೆಗಳಲ್ಲಿ ಬಹುಪಾಲು ಜನರ ಮೆಚ್ಚುಗೆಗೆ ಪಾತ್ರವಾದ ತರಕಾರಿ. ಸಾಂಬಾರು, ಪಲ್ಯ, ಮೊಸರು ಬಜ್ಜಿ ಅಥವಾ ಭಿಂಡಿ ಫ್ರೈ ಆಗಲಿ – ಇದನ್ನು ಹಲವಾರು ರೀತಿಯಲ್ಲಿ ತಿನ್ನಲಾಗುತ್ತದೆ. ಆದರೆ, ಅಡುಗೆ ಮಾಡುವಾಗ ಈ ತರಕಾರಿ ‘ಲೋಳೆಯಾಗುವುದು’ ಒಂದು ದೊಡ್ಡ ಸಮಸ್ಯೆ. ಇದರಿಂದ ಹಲವರು ಬೆಂಡೆಕಾಯಿ ಅಡುಗೆ ಮಾಡುವುದೇ ಇಷ್ಟಪಡುವುದಿಲ್ಲ. ಆದರೆ, ಕೆಲ ಸರಳ ಟಿಪ್ಸ್ ಅನುಸರಿಸಿ ಈ ಲೋಳೆಯ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬಹುದು.

Okra in a pile on a farmers market Okra in a pile on a farmers market sticky bhindi stock pictures, royalty-free photos & images

ಮೃದುವಾದ ಬೆಂಡೆಕಾಯಿ ಆರಿಸೋದು ಮುಖ್ಯ
ಮಾರುಕಟ್ಟೆಯಿಂದ ಬೆಂಡೆಕಾಯಿ ಖರೀದಿಸುವಾಗ ಬಲಿತಿಲ್ಲದ ಮೃದುವಾದ ಬೆಂಡೆಕಾಯಿಯನ್ನು ಆರಿಸಿ. ಬಲಿತ ಬೆಂಡೆಕಾಯಿಯಲ್ಲಿ ತೇವಾಂಶ ಮತ್ತು ಲೋಳೆಯ ಅಂಶ ಹೆಚ್ಚಿರುತ್ತವೆ. ಬೆರಳಿನಿಂದ ಒತ್ತಿ ಮೃದುವಾಗಿದೆಯೇ ಎಂದು ಪರೀಕ್ಷಿಸಿ ಖರೀದಿ ಮಾಡುವುದು ಉತ್ತಮ.

ಒಣಗಿಸದ ಬಿಂಡಿಗೆ ಲೋಳೆ ಗ್ಯಾರಂಟಿ!
ತೇವಾಂಶವಿರುವ ಬೆಂಡೆಕಾಯಿ ಹೆಚ್ಚು ಲೋಳೆಯಾಗುತ್ತದೆ. ಹೀಗಾಗಿ ತೊಳೆದ ನಂತರ ಸ್ವಚ್ಛ ಟವಲ್‌ನಲ್ಲಿ ಅಥವಾ ಹಾಳೆಯ ಮೇಲೆ ಚೆನ್ನಾಗಿ ಒಣಗಿಸಿ ಅಡುಗೆಗೆ ಬಳಸಬೇಕು.

Bhindi fry. Farm fresh raw okra slices in a wooden bowl. Close up of chopped Lady Fingers or Okra. Copy space. Cut vegetables. Green healthy veg. Bhindi fry. Farm fresh raw okra slices in a wooden bowl. Close up of chopped Lady Fingers or Okra. Copy space. Cut vegetables. Green healthy veg. bhindi FRY stock pictures, royalty-free photos & images

ಮೊಸರು ಅಥವಾ ನಿಂಬೆ ರಸದಿಂದ ಲೋಳೆ ಕಡಿಮೆ
ಹುರಿಯುವಾಗ ಒಂದು ಚಮಚ ಮೊಸರು ಅಥವಾ ಸ್ವಲ್ಪ ನಿಂಬೆ ರಸವನ್ನು ಬೆಂಡೆಕಾಯಿಗೆ ಸೇರಿಸಿ. ಇದರಿಂದ ಲೋಳೆಯನ್ನು ಕಡಿಮೆ ಮಾಡಬಹುದು.

ಕಡಲೇ ಹಿಟ್ಟು ಹುರಿಯುವ ಮೊದಲು ಸೇರಿಸಿ
ಬೆಂಡೆಕಾಯಿಗೆ ಒಂದು ಚಮಚ ಕಡಲೇ ಹಿಟ್ಟನ್ನು ಮಿಶ್ರಣ ಮಾಡಿ ನಂತರ ಹುರಿಯುವುದು ಸಹ ಲೋಳೆಯ ನಿಯಂತ್ರಣಕ್ಕೆ ಪರಿಣಾಮಕಾರಿ. ಹಿಟ್ಟು ತೇವಾಂಶವನ್ನು ಹೀರಿಕೊಳ್ಳುತ್ತದೆ.

Bhindi Masala, stir-fried okra with Indian spices. Ladyfinger fry. Copy space. Bhendi ki sabzi. Bhindi Masala, stir-fried okra with Indian spices. Ladyfinger fry. Copy space. Bhendi ki sabzi. bhindi FRY stock pictures, royalty-free photos & images

ವಿನೆಗರ್ ದ್ರಾವಣದಲ್ಲಿ ನೆನೆಸುವುದು
ಒಂದು ಕಪ್ ನೀರಿಗೆ 1/4 ಕಪ್ ವಿನೆಗರ್ ಸೇರಿಸಿ ದ್ರಾವಣ ತಯಾರಿಸಿ. ಬೆಂಡೆಕಾಯಿಯನ್ನು ಕೆಲ ನಿಮಿಷ ಆ ದ್ರಾವಣದಲ್ಲಿ ನೆನೆಸಿದ ನಂತರ ಒಣಗಿಸಿ ಬಳಸಿ. ಇದು ಲೋಳೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಪ್ಯಾನ್ ಮುಚ್ಚಬೇಡಿ
ಅಡುಗೆ ಮಾಡುವಾಗ ಪ್ಯಾನ್ ಮುಚ್ಚಿದರೆ ಹಬೆ ಉಂಟಾಗಿ ತೇವಾಂಶ ಹೆಚ್ಚಾಗುತ್ತದೆ. ಹೀಗಾಗಿ, ಲೋಳೆಯ ತೊಂದರೆ ತಪ್ಪಿಸಲು ಪ್ಯಾನ್ ಮುಚ್ಚದೇ ಅಡುಗೆ ಮಾಡಿ.

Dahi Bhindi or Okra in Yogurt Gravy, served in a bowl or karahi, selective focus Dahi Bhindi or Okra in Yogurt Gravy, served in a bowl or karahi, selective focus bhindi dahi fry stock pictures, royalty-free photos & images

ಕೊನೆಗೆ ಉಪ್ಪು ಸೇರಿಸಿ
ಅಡುಗೆ ಪ್ರಾರಂಭದಲ್ಲೆ ಉಪ್ಪು ಹಾಕುವುದರಿಂದ ತೇವಾಂಶ ಹೆಚ್ಚಾಗಿ ಲೋಳೆಯ ಪ್ರಮಾಣ ಹೆಚ್ಚಾಗಬಹುದು. ಆದ್ದರಿಂದ, ಬೆಂಡೆಕಾಯಿ ಚೆನ್ನಾಗಿ ಬೇಯಿಸಿದ ನಂತರ ಮಾತ್ರ ಉಪ್ಪು ಸೇರಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!