Railway Night Traveling Rules | ರೈಲಿನಲ್ಲಿ ರಾತ್ರಿ ಪ್ರಯಾಣ ಮಾಡ್ತೀರಾ? ಹಾಗಿದ್ರೆ ಈ ರೂಲ್ಸ್ ನಿಮಗೆ ಗೊತ್ತಿರಲೇ ಬೇಕು!

ಭಾರತದಲ್ಲಿ ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಅವರ ಅನುಕೂಲತೆ, ಭದ್ರತೆ ಮತ್ತು ಆರಾಮಕ್ಕಾಗಿ ಭಾರತೀಯ ರೈಲ್ವೆ ಹಲವು ಮಹತ್ವದ ನಿಯಮಗಳನ್ನು ಜಾರಿಗೊಳಿಸಿದೆ. ವಿಶೇಷವಾಗಿ ರಾತ್ರಿ ವೇಳೆ ಪ್ರಯಾಣಿಸುವವರಿಗೆ ಈ ನಿಯಮಗಳು ಅನುಸರಿಸಲು ಕಡ್ಡಾಯ. ಇಲ್ಲದಿದ್ದರೆ ದಂಡ ಹಾಗೂ ಕಾನೂನು ಕ್ರಮ ಎದುರಾಗಬಹುದು.

ರಾತ್ರಿ ಸಮಯಕ್ಕೆ ಅನ್ವಯಿಸುವ ಪ್ರಮುಖ ನಿಯಮಗಳು

ರೈಲ್ವೆ ಇಲಾಖೆ ಸಂಜೆಯ 10 ಗಂಟೆಯ ನಂತರ ಪ್ರಯಾಣಿಕರು ಶಿಸ್ತುಪಾಲನೆ ಮಾಡಬೇಕು ಎಂದು ನಿಗದಿಪಡಿಸಿದೆ. ಈ ನಿಯಮಗಳು ನಗುವಂತಿದ್ದರೂ ಸಹ ಅನುಸರಿಸುವುದು ಬೇರೆಯವರ ವಿಶ್ರಾಂತಿಗೆ ಸಹಾಯ ಮಾಡುತ್ತದೆ:

ರಾತ್ರಿ 10 ಗಂಟೆಯ ನಂತರ ಟಿಟಿಇ (TTE) ಯಾವುದೇ ಪ್ರಯಾಣಿಕರ ಟಿಕೆಟ್ ಪರಿಶೀಲನೆ ಮಾಡಲು ಬರುವಂತಿಲ್ಲ.

ನೈಟ್ ಲೈಟ್‌ಗಳ ಹೊರತು ಬೇರೆಯ ಎಲ್ಲಾ ದೀಪಗಳನ್ನು ಆರಿಸಲಾಗುತ್ತದೆ.

ಸಂಗೀತ ಅಥವಾ ಜೋರಾಗಿ ಮಾತುಕತೆ ನಿಷೇಧ – ಇಯರ್‌ಫೋನ್ ಇಲ್ಲದೆ ಹಾಡು ಕೇಳುವುದು ಅಥವಾ ಗ್ರೂಪ್ ಚರ್ಚೆಗಳು ನಿಷಿದ್ಧ.

ಮಧ್ಯದ ಬಂಕ್‌ ತೆರೆದರೆ ಕೆಳಗಿನ ಬಂಕ್‌ ಪ್ರಯಾಣಿಕರು ಆಕ್ಷೇಪಿಸಲು ಸಾಧ್ಯವಿಲ್ಲ.

ರಾತ್ರಿ 10 ಗಂಟೆಯ ನಂತರ IRCTC ಆಹಾರ ನೀಡುವುದಿಲ್ಲ. ಆದರೆ ಇ-ಕ್ಯಾಟರಿಂಗ್‌ನಿಂದ ಮುಂಗಡ ಆಹಾರ ಆರ್ಡರ್ ಮಾಡಬಹುದು.

ಲಗೇಜ್‌ ನಿಯಮಗಳ ಬಗ್ಗೆ ಸಹ ಎಚ್ಚರಿಕೆ ಅವಶ್ಯಕ
ಪ್ರತಿ ದರ್ಜೆಯ ಕೋಚ್‌ಗೆ ತಕ್ಕಮಟ್ಟದಲ್ಲಿ ಉಚಿತ ಲಗೇಜ್ ಮಿತಿ ಇರುತ್ತದೆ:

ಎಸಿ ಕೋಚ್‌: 70 ಕೆಜಿ ಉಚಿತ, ಹೆಚ್ಚಿದರೆ ಶುಲ್ಕ ವಸೂಲಾಗುತ್ತದೆ.

ಸ್ಲೀಪರ್ ಕ್ಲಾಸ್‌: 40 ಕೆಜಿ ಉಚಿತ.

ಎರಡನೇ ಕ್ಲಾಸ್‌: 35 ಕೆಜಿ ಉಚಿತ.

ಹೆಚ್ಚುವರಿ ಸಾಮಾನುಗಳನ್ನೂ ತೆಗೆದುಕೊಂಡು ಹೋಗಬಹುದು, ಆದರೆ ಆಯಾ ಪ್ರಮಾಣದ ಮೇಲೆ ಶುಲ್ಕ ವಿಧಿಸಲಾಗುತ್ತದೆ.

ಈ ನಂಬರ್‌ ಸೇವ್ ಮಾಡಿ
ರೈಲಿನಲ್ಲಿ ಪ್ರಯಾಣಿಸುವಾಗ ತಕ್ಷಣ ನೆರವು ಬೇಕಾದರೆ, ಈ ವಾಟ್ಸ್‌ಅ್ಯಪ್ ನಂಬರ್‌ (9881193322) ಗೆ “HI” ಎಂದು ಮೆಸೇಜ್ ಕಳಿಸಿ. ಬಳಿಕ ಲಭ್ಯವಾಗುವ ಮೆನುಗಳ ಮೂಲಕ ನೀವು:

PNR ಸ್ಟೇಟಸ್ ಪರಿಶೀಲನೆ

ಫುಡ್ ಆರ್ಡರ್

ರೈಲಿನ ಲೈವ್ ಲೋಕಶನ್

ಟಿಕೆಟ್ ರಿಟರ್ನ್

“Rail Madad” ಸೆಕ್ಷನ್ ಮೂಲಕ ದೂರು ಸಲ್ಲಿಸುವ ಅವಕಾಶವಿದೆ. ಇವುಗಳನ್ನು ಬಳಸಿಕೊಂಡು ತಕ್ಷಣ ರೈಲ್ವೆ ಪೊಲೀಸರು ಅಥವಾ ಸಿಬ್ಬಂದಿ ಸಂಪರ್ಕಿಸಬಹುದು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!