ಸೀಕ್ವೆಲ್ ಗೆ ಮುಂದಾದ ಕಲ್ಟ್ ಕ್ಲಾಸಿಕ್ ಸಿನಿಮಾ ‘Andaz Apna Apna’! ಆಮಿರ್ ಖಾನ್ ಕೊಟ್ರು ಗುಡ್ ನ್ಯೂಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ನ 1994 ರ ಕಲ್ಟ್ ಕ್ಲಾಸಿಕ್‌ ಅಂದಾಜ್ ಅಪ್ನಾ ಅಪ್ನಾ ಇದೀಗ ಸೀಕ್ವೆಲ್ ಗೆ ಮುಂದಾಗಿದೆ. ಅಮಿರ್ ಖಾನ್‌ ಈ ಬಹು ನಿರೀಕ್ಷಿತ ಪ್ರಾಜೆಕ್ಟ್‌ ಬಗ್ಗೆ ಅಧಿಕೃತವಾಗಿ ಧೃಡಪಡಿಸಿದ್ದು, ಚಿತ್ರದ ಸ್ಕ್ರಿಪ್ಟ್‌ ಹಂತದಲ್ಲಿ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಚಿತ್ರಕಥೆ ಮೇಜಿನ ಮೇಲೆ – ರಾಜ್‌ಕುಮಾರ್ ಸಂತೋಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಆಮಿರ್ ಖಾನ್ ಮಾತನಾಡುತ್ತಾ, ಅಂದಾಜ್ ಅಪ್ನಾ ಅಪ್ನಾ 2 ಪ್ರಸ್ತುತ ಚಿತ್ರಕಥೆಯ ಹಂತದಲ್ಲಿದೆ ಎಂದರು. ಈ ಪ್ರಾಜೆಕ್ಟ್‌ಗೆ ಮೂಲ ಚಿತ್ರ ನಿರ್ದೇಶಕ ರಾಜ್‌ಕುಮಾರ್ ಸಂತೋಷಿಯವರೇ ಮತ್ತೊಮ್ಮೆ ಕಮ್ಯಾಂಡ್ ಹಿಡಿದಿದ್ದಾರೆ. ಎಲ್ಲವೂ ಯೋಜನೆಯಂತೆ ನಡೆದರೆ, ಈ ಸಿನೆಮಾ ಶೀಘ್ರದಲ್ಲೇ ಸೆಟ್ಟೇರಲಿದೆ ಎಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಅಮಿರ್ ಖಾನ್‌ ಫ್ಯಾನ್ಸ್ ಗಳಿಗೆ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅದು ಏನಂದ್ರೆ, ಅಮಿರ್ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಜೊತೆಗೆ ನಟನೆ ಮಾಡುವ ಕುರಿತು ಚರ್ಚೆ ಕೂಡಾ ನಡೆಯುತ್ತಿದೆ ಅಂತ ಹೇಳಿದ್ದಾರೆ. ‘ಒಂದು ಬಲವಾದ ಸ್ಕ್ರಿಪ್ಟ್‌ ಸಿಕ್ಕರೆ,  ಏನಾದರೂ ಹೊಸದಾಗಿ ಹಾಗೂ ಪ್ರಭಾವ ಬೀರುವ ರೀತಿಯಲ್ಲಿ ಮೂವರೂ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಬಹುದು’ ಎಂದು ಅಮಿರ್ ಹೇಳಿದ್ದಾರೆ.

ಶಾರುಖ್ ಮತ್ತು ಸಲ್ಮಾನ್ ಕೆಲ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿರುವುದನ್ನು ಗಮನಿಸಬಹುದು. ಆದರೆ, ಅಮಿರ್ ಅವರ ಬಗ್ಗೆ ಹೇಳುವುದಾದರೆ, ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಆದರೆ ಇದೀಗ, ರಜನೀಕಾಂತ್ ನಟನೆಯ ಕೂಲಿ ಸಿನಿಮಾದಲ್ಲಿ ಗೆಸ್ಟ್ ರೋಲ್ ಮಾಡಿದ್ದಾರೆ ಎಂಬುದೇ ದೊಡ್ಡ ಸುದ್ದಿ.

2022ರ ಲಾಲ್ ಸಿಂಗ್ ಚಡ್ಡಾ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದ ಬಳಿಕ, ಆಮಿರ್ ಮೂವರು ವರ್ಷಗಳ ಬ್ರೇಕ್ ನಂತರ, ಜೂನ್ 20ರಂದು ಬಿಡುಗಡೆಯಾದ ಸೀತಾರೆ ಜಮೀನ್ ಪರ್ ಚಿತ್ರದ ಮೂಲಕ ಅವರು ಮತ್ತೆ ಬೆಳ್ಳಿತೆರೆಗೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದಾಜ್ ಅಪ್ನಾ ಅಪ್ನಾ 2 ಸುದ್ದಿ ಅಭಿಮಾನಿಗಳಲ್ಲಿ ಮತ್ತಷ್ಟು ನಿರೀಕ್ಷೆ ಹುಟ್ಟುಹಾಕುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!