Relationship | ಈ ರೀತಿ ಮಾಡ್ತಾ ಇದ್ರೆ ಸಂಗಾತಿ ನಿಮಗೆ ಮೋಸ ಮಾಡ್ತಾ ಇದ್ದಾನೆ ಎಂದರ್ಥ! ಬೇಗ ಎಚ್ಚೆತ್ತುಕೊಳ್ಳಿ

ಇತ್ತೀಚಿನ ದಿನಗಳಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿರುವ ಹಿನ್ನಲೆಯಲ್ಲಿ ವಿವಾಹೇತರ ಸಂಬಂಧಗಳು (extramarital affairs) ಅಥವಾ ಪ್ರೇಮದಲ್ಲಿ ವಂಚನೆ ಮಾಡುವ ಪ್ರಸಂಗಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ, ಪ್ರೀತಿ ಸಂಬಂಧದಲ್ಲಿರುವ ಯುವಕ-ಯುವತಿಯರು ಹೆಚ್ಚು ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾದ ಅವಶ್ಯಕತೆ ಇದೆ. ಈ ವಿಷಯದಲ್ಲಿ ಬಹುತೇಕ ಬಾಯ್‌ಫ್ರೆಂಡ್‌ ಮೋಸ ಮಾಡುತ್ತಿದ್ದಾರೆ ಎಂಬ ಅನುಮಾನ ಎಚ್ಚರಿಕೆಯೊಂದಿಗೇ ಆರಂಭವಾಗುತ್ತದೆ. ಹಾಗಾದರೆ, ನಿಮ್ಮ ಸಂಗಾತಿ ನಿಮ್ಮ ನಂಬಿಕೆಗೆ ಪೆಟ್ಟು ಕೊಡುತ್ತಿದ್ದಾನೆ ಎಂಬುದನ್ನು ಹೇಗೆ ಗುರುತಿಸಬಹುದು?

How to Spot a Cheater Early - Infidelity

ಫೋನ್ ಮತ್ತು ಲ್ಯಾಪ್‌ಟಾಪ್ ಬಗ್ಗೆ ರಹಸ್ಯ
ನಿಮ್ಮ ಬಾಯ್‌ಫ್ರೆಂಡ್‌ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ ಬಳಸುತ್ತಿರುವಾಗ ಅದನ್ನು ನೋಡಲು ಅವಕಾಶ ನೀಡದಿದ್ದರೆ ಅಥವಾ ಸದ್ಯ ಸೀಕ್ರಸಿ ಹೆಚ್ಚಾದರೆ, ಅದು ಶಂಕಾಸ್ಪದ. ಅಲ್ಲಿ ಏನನ್ನಾದರೂ ಮರೆಮಾಚಲಾಗುತ್ತಿದೆಯೆಂಬ ಸಂಕೇತ.

ದೈಹಿಕ ಪ್ರೀತಿಯಲ್ಲಿ ಹಠಾತ್ ಕಡಿತ
ಚುಂಬನೆ, ಹತ್ತಿರತೆ ಅಥವಾ ಶಾರೀರಿಕ ಸಂಪರ್ಕದ ಆಸಕ್ತಿ ತೀರಾ ಕಡಿಮೆಯಾಗಿದೆಯೆಂದರೆ, ಅವನು ಈ ಅಗತ್ಯಗಳನ್ನು ಬೇರೆಡೆ ಪೂರೈಸಿಕೊಳ್ಳುತ್ತಿದ್ದಾನೆ ಎನ್ನುವ ಸಾಧ್ಯತೆ ಇದೆ.

15 Signs of Cheating, According to Therapists

ತೀವ್ರ ವಿಮರ್ಶಾತ್ಮಕ ಮನಸ್ಥಿತಿ
ಹಳೆಯ ಸ್ನೇಹಭಾವದ ಬದಲು, ನಿಮ್ಮ ಮಾತು, ಕೆಲಸಗಳ ಬಗ್ಗೆ ವೈಯಕ್ತಿಕವಾಗಿ ವಿಮರ್ಶೆ ಮಾಡುವ ಪ್ರವೃತ್ತಿ ಹೆಚ್ಚಾದರೆ, ಇದು ಬಾಯ್‌ಫ್ರೆಂಡ್‌ನ Guilty Behavior ಗೆ ಸೂಚನೆ.

ನಡವಳಿಕೆಯಲ್ಲಿ ಬದಲಾವಣೆ
ಹೊಸ ಉಡುಪು ಶೈಲಿ, ಹೊಸ ಮನೋಭಾವನೆ, ಹೊಸ ಆಸಕ್ತಿಗಳು… ಇವೆಲ್ಲವೂ ಬೇರೆ ಯಾರನ್ನಾದರೂ ಮೆಚ್ಚಿಸಲು ಅಥವಾ ಆಕರ್ಷಿಸಲು ತಕ್ಷಣ ತಾವು ಬದಲಾಗುತ್ತಿರುವದನ್ನು ಸೂಚಿಸುತ್ತವೆ.

Moving Forward After Cheating on Your Partner: Steps to Take | Therapy Central

ಸುಳ್ಳು ಹೇಳುವುದು
ಮೋಸ ಮಾಡುವವರು ತಮ್ಮ ನಿಜವನ್ನು ಮರೆಮಾಚಲು ಸುಳ್ಳು ಹೇಳುತ್ತಾರೆ. ಸಮಯ, ಸ್ಥಳ, ಸ್ನೇಹಿತರ ಬಗ್ಗೆ ತಪ್ಪು ಮಾಹಿತಿಯನ್ನೂ ನೀಡಬಹುದು.

ಯಾವುದೇ ಸಂಬಂಧ ನಂಬಿಕೆಯ ಮೇಲೆ ನಿಂತಿರಬೇಕು. ಆದರೆ ಈ ರೀತಿಯ ಬೆಳವಣಿಗೆಗಳು ನಿಮ್ಮ ಸಂಬಂಧದಲ್ಲಿ ಸಂಭವಿಸುತ್ತಿದ್ದರೆ, ಗಂಭೀರವಾಗಿ ಪರಿಗಣಿಸಿ. ನೈಜವಾಗಿ ಪ್ರಶ್ನಿಸಿ, ಸಂಭಾಷಣೆ ಮಾಡಿ ಅಥವಾ ನಿಮ್ಮ ಭದ್ರತೆಗೆ ಮುನ್ನೆಚ್ಚರಿಕೆ ವಹಿಸಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!