ಮೇಷ
ನಿಮಗಿಂದು ಶುಭದಿನ. ಆತ್ಮೀಯರ ಜತೆ ಕಾಲ ಕಳೆಯುವ ಅವಕಾಶ. ವೃತ್ತಿಯ ಒತ್ತಡ ಇಂದು ಬಾಧಿಸದು. ಆರೋಗ್ಯ ಸುಸ್ಥಿರ.
ವೃಷಭ
ಅನವಶ್ಯವಾಗಿ ಚಿಂತಿಸಿ ಬೇಸರಿಸುತ್ತೀರಿ. ನಿಮ್ಮಲ್ಲಿ ಇಲ್ಲದಿರುವುದರ ಬಗ್ಗೆ ಕೊರಗುವುದು ಬಿಟ್ಟು ಇರುವುದರ ಬಗ್ಗೆ ಸಂತೋಷ ಪಡಿ.
ಮಿಥುನ
ಆತ್ಮೀಯರು ನಿಮ್ಮ ಜತೆ ಕಳೆಯಲು ಬಯಸುತ್ತಾರೆ. ಅವರಿಗೆ ನಿರಾಶೆ ಮಾಡಬೇಡಿ. ಕೆಲಸದ ಒತ್ತಡ ಇಂದಿನ ಮಟ್ಟಿಗೆ ಬದಿಗಿಡಿ.
ಕಟಕ
ಆಪ್ತರ ಜತೆಗಿನ ವಿರಸ ನೆಮ್ಮದಿ ಕೆಡಿಸಲಿದೆ. ಸಂಬಂಧ ಸರಿದಾರಿಗೆ ತರುವ ಹೊಣೆ ನಿಮ್ಮಲ್ಲೇ ಇದೆ. ಆಹಾರದಲ್ಲಿ ಹಿತಮಿತವಿರಲಿ.
ಸಿಂಹ
ಕೌಟುಂಬಿಕ ಪರಿಸರದಲ್ಲಿ ಉಲ್ಲಾಸ ಕಾಣುವಿರಿ. ಮಹತ್ವದ ಯೋಜನೆಯೊಂದಕ್ಕೆ ಸಿದ್ಧತೆಯಲ್ಲಿದ್ದರೆ ಪೂರಕ ಸ್ಥಿತಿ ಏರ್ಪಡಲಿದೆ.
ಕನ್ಯಾ
ಉದ್ಯೋಗಕ್ಕೆ ಸಂಬಂಧಿಸಿ ಶುಭ ಬೆಳವಣಿಗೆ ಉಂಟಾಗಲಿದೆ. ಮಾನಸಿಕ ಒತ್ತಡಕ್ಕೆ ಸಿಲುಕದಿರಿ. ಕ್ಷುಲ್ಲಕ ವಿಚಾರ ನಿರ್ಲಕ್ಷಿಸಿ.
ತುಲಾ
ಕ್ಲಿಷ್ಟಕರ ಸ್ಥಿತಿ ಉದ್ಭವಿಸಿದರೂ ಅದನ್ನು ನಿಭಾಯಿಸಲು ಶಕ್ತರಾಗುವಿರಿ. ಶಾಂತ ಮನಸ್ಥಿತಿ ಕಾಪಾಡಿ, ಆಪ್ತರ ತಪ್ಪು ಕ್ಷಮಿಸಿರಿ.
ವೃಶ್ಚಿಕ
ಹಳೆಯ ತಪ್ಪು ಮರುಕಳಿಸದಿರಿ. ಹೊಸ ದಾರಿಯಲ್ಲಿ ಮುನ್ನಡಿ ಇಡಿ. ಕುಟುಂಬಸ್ಥರ ಹಿತಾಸಕ್ತಿ ಕಾಪಾಡಿ. ಅದನ್ನು ನಿರ್ಲಕ್ಷಿಸಬೇಡಿ.
ಧನು
ಎಲ್ಲರನ್ನು ಜತೆಗೆ ಕೊಂಡೊಯ್ದು ಕೆಲಸ ನಿರ್ವಹಿಸಿ. ಸಾಲ ನೀಡಿ ಕೆಡಬೇಡಿ. ಹೊಟ್ಟೆಯ ಬಗ್ಗೆ ಎಚ್ಚರ ವಹಿಸಿ, ಹಿತಮಿತ ಆಹಾರ ಸೇವಿಸಿರಿ.
ಮಕರ
ಸಂಬಂಧದಲ್ಲಿ ಬಿಕ್ಕಟ್ಟು ಸಂಭವ. ಅದನ್ನು ದೀರ್ಘ ಎಳೆಯದಿರಿ. ಖರ್ಚು ನಿಯಂತ್ರಿಸಿ. ಅವಶ್ಯಕ್ಕಷ್ಟೇ ಧನ ವ್ಯಯಿಸಿ. ಬಂಧುಗಳ ಸಹಕಾರ.
ಕುಂಭ
ಹಣಕ್ಕೆ ಸಂಬಂಽಸಿದ ಸಮಸ್ಯೆ ಇತ್ಯರ್ಥ ಕಾಣಲಿದೆ. ಆಪ್ತರ ಕುರಿತಂತೆ ಹೊಂದಿರುವ ಅನುಮಾನ ನಿರಾಧಾರ. ಬಂಧುತ್ವ ಬೆಸೆಯಿರಿ.
ಮೀನ
ಇಲ್ಲದ ಚಿಂತೆಯನ್ನು ಹೊತ್ತುಕೊಂಡಿದ್ದೀರಿ. ಸರಿಯಾಗಿ ಚಿಂತೆ ಅನವಶ್ಯ ಎಂದು ಕಂಡು ಬರಲಿದೆ. ಆತ್ಮೀಯರ ಜತೆ ದಿನ ಕಳೆಯಿರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ