ನಿನ್ನೆ ರಾತ್ರಿ ಮಾಡಿರೋ ಚಪಾತಿ ಉಳಿದಿದ್ಯಾ? ಹಾಗಾದ್ರೆ ಬಿಸಾಕೋಕೆ ಹೋಗ್ಬೇಡಿ. ಈ ಉಳಿದಿರುವ ಚಪಾತಿಯಲ್ಲಿ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ರೋಲ್ ಮಾಡೋದನ್ನು ನಾವು ಹೇಳಿಕೊಡ್ತೀವಿ ನೋಡಿ.
ಬೇಕಾಗುವ ಪದಾರ್ಥಗಳು :
ಚಪಾತಿ
ಟೊಮೆಟೊ ಸಾಸ್
ಈರುಳ್ಳಿ
ಪನೀರ್
ಟೊಮೆಟೊ
ಸೌತೆಕಾಯಿ
ಕ್ಯಾಪ್ಸಿಕಂ
ಚೀಸ್
ಮೆಣಸು
ಉಪ್ಪು
ಬೆಣ್ಣೆ , ಟೋಸ್ಟ್ ಮಾಡಲು ( ಈ ಎಲ್ಲ ಪದಾರ್ಥಗಳು ನಿಮ್ಮ ರುಚಿ, ಹಾಗು ಅಗತ್ಯತೆಗೆ ಅನುಗುಣವಾಗಿ ಬಳಸಿಕೊಳ್ಳಿ)
ಮಾಡುವ ವಿಧಾನ
ಮೊದಲಿಗೆ, ಉಳಿದ ಚಪಾತಿಯನ್ನು ತೆಗೆದುಕೊಂಡು ನಾಲ್ಕು ಭಾಗಗಳಾಗಿ ತೆಗೆದುಕೊಂಡು (ಕತ್ತರಿಸುವುದು ಬೇಡ). ಒಂದು ಭಾಗದ ಮೇಲೆ ಟೊಮೆಟೊ ಸಾಸ್ ಮತ್ತು ಈರುಳ್ಳಿ ಹರಡಿ. ಎರಡನೇ ಭಾಗದಲ್ಲಿ ಪನೀರ್ ಸೇರಿಸಿ. ಮೂರನೇ ಭಾಗದಲ್ಲಿ ಟೊಮೆಟೊ, ಸೌತೆಕಾಯಿ ಮತ್ತು ಕ್ಯಾಪ್ಸಿಕಂ ಹಾಗೂ ನಾಲ್ಕನೇ ಭಾಗದ ಮೇಲೆ ಚೀಸ್ ಹರಡಿ. ಅದರ ಮೇಲೆ ಮೆಣಸನ್ನು ಇಟ್ಟು, ತ್ರಿಕೋನವನ್ನು ರೂಪಿಸಲು ಪ್ರತಿ ಕಾಲುಭಾಗವನ್ನು ಮಡಚಿ.
ಈಗ ಒಂದು ಪಾನ್ ಗೆ ಎಣ್ಣೆ ಅಥವಾ ಬೆಣ್ಣೆ ಹಾಕಿ ಚಪಾತಿಯ ಎರಡೂ ಬದಿಗಳನ್ನು ಟೋಸ್ಟ್ ಮಾಡಿದರೆ ಚಪಾತಿ ರೋಲ್ ರೆಡಿ.