ಉಡುಪಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವಕ್ಕೆ ಸಿಎಂಗೆ ವಿಶೇಷ ಆಹ್ವಾನ: ಈ ಬಾರಿಯಾದ್ರೂ ಬರ್ತಾರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪುತ್ತಿಗೆ ಮಠದ ಪರವಾಗಿ ವಿಶೇಷ ಆಹ್ವಾನ ನೀಡಲಾಗಿದೆ.

ಪರ್ಯಾಯ ಪೀಠವನ್ನು ವಹಿಸಿಕೊಂಡಿರುವ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಶ್ರೀ ಕೃಷ್ಣ ಹಾಗೂ ಮುಖ್ಯಪ್ರಾಣರ ಪ್ರಸಾದದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಆಹ್ವಾನವನ್ನು ಕಳುಹಿಸಿದ್ದಾರೆ.

ಆಗಸ್ಟ್ 1ರಿಂದ ಸೆಪ್ಟೆಂಬರ್ 15ರ ವರೆಗೆ ನಡೆಯಲಿರುವ 48 ದಿನಗಳ ಮಂಡಲ ಉತ್ಸವದ ಆರಂಭಕ್ಕೆ ಉಡುಪಿ ಪುತ್ತಿಗೆ ಮಠದ ಬೆಂಗಳೂರು ಶಾಖೆಯ ಎ.ಬಿ. ಕುಂಜಾರ್ ಹಾಗೂ ಕಾರ್ಯದರ್ಶಿ ರತೀಶ್ ತಂತ್ರಿಯವರು ಸಿಎಂಗೆ ಈ ಆಹ್ವಾನ ನೀಡಿದ್ದಾರೆ.

ಆದರೆ ದಶಕಗಳ ಹಿಂದೆ ನಡೆದ ಕನಕಗೋಪುರ ವಿವಾದದಲ್ಲಿ ಸಿದ್ದರಾಮಯ್ಯ ಅವರು ಶ್ರೀ ಕೃಷ್ಣ ಮಠದ ವಿರುದ್ಧ ಪ್ರತಿಭಟನೆಗೆ ನೇತೃತ್ವ ವಹಿಸಿದ್ದ ಹಿನ್ನೆಲೆ, ಇದುವರೆಗೆ ಅವರು ಮಠದೊಂದಿಗೆ ಭಾಂದವ್ಯ ಕಾಯ್ದುಕೊಂಡಿಲ್ಲ. ಈ ಹಿಂದೆ ಕೂಡ ಮಠದಿಂದ ಸಿಎಂಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಆಹ್ವಾನ ನೀಡಲಾಗಿದ್ದರೂ, ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲೂ ಸಿದ್ದರಾಮಯ್ಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಿರಲಿಲ್ಲ.

ಈ ಹಿನ್ನೆಲೆಯಲ್ಲಿ ಈ ಬಾರಿಯ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಸಿಎಂ ಸಿದ್ದರಾಮಯ್ಯ ಅವರು ಮಠದ ಆಹ್ವಾನಕ್ಕೆ ಸ್ಪಂದಿಸುತ್ತಾರೇ ಅಥವಾ ಹಿಂದಿನಂತೆ ಅಂತರ ಕಾಯ್ದುಕೊಳ್ಳುತ್ತಾರೇ ಎಂಬುದು ರಾಜ್ಯ ರಾಜಕೀಯ ಮತ್ತು ಧಾರ್ಮಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!