ಹೊಸದಿಗಂತ ಡಿಜಿಟಲ್ ಡೆಸ್ಕ್:
“ನಾನು ಮತ್ತು ಡಿಕೆ ಶಿವಕುಮಾರ್ ಒಟ್ಟಾಗಿಯೇ ಇದ್ದೇವೆ. ನಮ್ಮ ಸರ್ಕಾರ ಬಂಡೆಯಂತೆ ನಿಲ್ಲಲಿದೆ, 5 ವರ್ಷ ಪೂರ್ತಿಯಾಗಿ ಆಡಳಿತ ನೀಡುತ್ತೇವೆ” ಎಂಬ ದೃಢ ನಿಲುವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಪುನರುಚ್ಚರಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ಕ್ರಾಂತಿ ನಡೆಯಲಿದೆ ಎಂಬ ವದಂತಿ ಹಬ್ಬುತ್ತಿರುವ ವೇಳೆ, ಮೈಸೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆಶಿ ಮಾತನಾಡಿದ ಸಿಎಂ, “ನಮ್ಮಿಬ್ಬರ ಮಧ್ಯೆ ಅಂತರ ತಂದಿಡೋಕೆ ಪ್ರಯತ್ನ ಮಾಡಲಾಗುತ್ತಿದೆಯಾದರೂ ಅದು ಎಂದಿಗೂ ಸಾಧ್ಯವಿಲ್ಲ” ಎಂದರು.
ಬಿಜೆಪಿ ನಾಯಕ ಶ್ರೀರಾಮುಲು ಅವರತ್ತ ತಿರುಗೇಟು ನೀಡಿದ ಸಿದ್ದರಾಮಯ್ಯ, ಅವರು ಎಷ್ಟು ಚುನಾವಣೆ ಸೋತಿದ್ದಾರೆ ಎಂಬುದನ್ನು ಹಿಂದೊಮ್ಮೆ ಲೆಕ್ಕಹಾಕಿ ನೋಡಿ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು ಎಂದು ಕಿಡಿಕಾರಿದರು.
ಈ ನಡುವೆ ದಸರಾ ಉದ್ಘಾಟನೆ ನಾನೇ ಮಾಡುತ್ತೇನೆ ಎಂಬ ಮಾಧ್ಯಮಗಳಿಗೆ ಅನುಮಾನವಿದೆಯಲ್ಲಾ? ಹಾಗಾದರೆ, ಅದು ನಿಜ ಎಂದು ಹೇಳುವ ಮೂಲಕ, ಈ ಬಾರಿ ಸಿದ್ದರಾಮಯ್ಯ ದಸರಾ ಉದ್ಘಾಟನೆ ಮಾಡುವುದಿಲ್ಲ ಎಂಬ ಬಿಜೆಪಿಯ ಅಶೋಕ್ ಹೇಳಿಕೆಗೆ ತೀವ್ರ ತಿರುಗೇಟು ನೀಡಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರ ಕುರಿತು ಮಾತನಾಡಿದ ಸಿಎಂ, ಅವರು ಪಕ್ಷದ ಉಸ್ತುವಾರಿ; ಶಾಸಕರ ಕಷ್ಟ–ಸುಖ ಕೇಳುವುದು, ಸಲಹೆ ನೀಡುವುದು ಅವರ ಕೆಲಸ. ಇದರಲ್ಲಿ ಅನಾವಶ್ಯಕ ರಾಜಕೀಯ ವ್ಯಾಖ್ಯಾನ ಮಾಡುವುದು ಒಳ್ಳೆಯದಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಈ ಹೇಳಿಕೆಗಳು ಕಾಂಗ್ರೆಸ್ ನಾಯಕರ ಮಧ್ಯೆ ಬಿರುಕು ಇರುವಂತಿಲ್ಲ ಎಂಬುದನ್ನು ತಿಳಿಸುವ ಪ್ರಯತ್ನವಷ್ಟೇ ಅಲ್ಲ, ಬಿಜೆಪಿಯ ವದಂತಿಗಳ ವಿರುದ್ಧವೂ ಸ್ಪಷ್ಟ ತಿರುಗೇಟು ನೀಡಿದಂತಾಗಿದೆ.