ಮನೆ ಬಾಗಿಲಲ್ಲಿ ಸಾಮಾನ್ಯವಾಗಿ ಕಾಣಸಿಗುವ ದಾಸವಾಳ ಹೂವು (Hibiscus Flower), ನೂರಾರು ವರ್ಷಗಳಿಂದ ಮನೆಮದ್ದುಗಳಲ್ಲಿ ಬಳಕೆಯಾಗುತ್ತಿರುವ ವಿಶಿಷ್ಟ ಔಷಧೀಯ ಗಿಡವಾಗಿದೆ. ನೈಸರ್ಗಿಕವಾಗಿ ದಾಸವಾಳ ಹೂವು ದೇಹದ ಉಷ್ಣತೆ ಕಡಿಮೆ ಮಾಡುವುದರಿಂದ ಆರಂಭಿಸಿ, ಕಿಡ್ನಿ ಸಮಸ್ಯೆ, ಮಧುಮೇಹ, ಗಾಯಗಳನ್ನು ಕಡಿಮೆ ಮಾಡುವುದು, ಕ್ಯಾನ್ಸರ್‌ನ ಉಪಶಮನದವರೆಗೆ ಹಲವಾರು ರೋಗಗಳಿಗೆ ಪರಿಹಾರ ನೀಡುತ್ತದೆ ಎಂಬ ನಂಬಿಕೆಯಿದೆ.
ದೇಹದ ಉಷ್ಣತೆ ಕಡಿಮೆ ಮಾಡುತ್ತದೆ: ಬಿಳಿ ಬಣ್ಣದ ದಾಸವಾಳದ ಎಲೆ ಅಥವಾ ಹೂವನ್ನು ನೀರಿನಲ್ಲಿ ಒದ್ದೆಮಾಡಿ ಬೆಲ್ಲ ಅಥವಾ ಹಾಲಿನೊಂದಿಗೆ ಸೇವಿಸಿದರೆ ದೇಹದ ತಾಪಮಾನ ತಕ್ಷಣವಾಗಿ ಇಳಿಯುತ್ತದೆ. ದೇಹ ಹೆಚ್ಚು ತಾಪಗೊಂಡು ಸುಸ್ತಾಗಿ ಕಾಣುವ ಸಂದರ್ಭದಲ್ಲಿಯೂ ಈ ಜ್ಯೂಸ್ ಅತ್ಯಂತ ಪರಿಣಾಮಕಾರಿ ಎಂದು ಆಯುರ್ವೇದ ತಜ್ಞರು ಅಭಿಪ್ರಾಯಪಡುತ್ತಾರೆ.
ಕ್ಯಾನ್ಸರ್‌ಗೆ ವಿರೋಧಿ ಗುಣ: ಕಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿರುವ ದಾಸವಾಳದ ಹೂವನ್ನು ಒಣಗಿಸಿ ಪುಡಿಯಾಗಿ ಸೇವಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಇನ್ನು, ಹೂ ಮತ್ತು ಎಲೆಗಳನ್ನು ಸುಟ್ಟು ಬಂದ ಬೂದಿಯನ್ನು ಹುಬ್ಬಿಗೆ ಲೇಪಿಸಿದರೆ ಹೆಚ್ಚು ಹೊಳಪು ನೀಡುತ್ತದೆ ಎಂಬ ನಂಬಿಕೆಯೂ ಇದೆ.
ಕೂದಲು ದಪ್ಪ ಹಾಗೂ ಉದ್ದವಾಗಿಸಲು ಸಹಕಾರಿ: ಕೂದಲು ಉದುರುವುದು ತಡೆಯಲು ಮತ್ತು ಉದ್ದ ಕೂದಲಿಗೆ ಸಹಕಾರಿಯಾಗುವಂತೆ ದಾಸವಾಳದ ಬೇರು ಮತ್ತು ಎಲೆಗಳನ್ನು ಬಳಸಿ ತೈಲ ತಯಾರಿಸಿ ಹಚ್ಚುವ ವಿಧಾನ ಪ್ರಾಚೀನ ಕಾಲದಿಂದಲೂ ಪ್ರಸಿದ್ಧವಾಗಿದೆ. ಈ ಹೂವಿನಲ್ಲಿ ವಿಟಮಿನ್ ಸಿ ಮತ್ತು ದೇಹ ಶುದ್ಧೀಕರಣಕ್ಕೆ ನೆರವಾಗುವ ಗುಣವಿದ್ದರೆ, ಜ್ಯೂಸ್ ರೂಪದಲ್ಲಿ ಸೇವನೆ ಮಾಡುವುದರಿಂದ ಕಿಡ್ನಿ ಸಮಸ್ಯೆ ಹಾಗೂ ದೇಹದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
ಕಿಡ್ನಿ ಹಾಗೂ ಮಧುಮೇಹ ಸಮಸ್ಯೆಗೆ ಉತ್ತಮ ಮನೆಮದ್ದು: ಮಧುಮೇಹ ಹಾಗೂ ಶೀತ ಕೆಮ್ಮು ತಲೆನೋವುಗಳಿಗೆ ತಕ್ಷಣದ ಪರಿಹಾರ ನೀಡುವಂತಹ ದಾಸವಾಳ ಹೂ, ಕಪ್ಪು ದಾಸವಾಳ ಅಥವಾ ಬಿಳಿ ದಾಸವಾಳದ ರೂಪದಲ್ಲಿ ಟೀ ರೂಪದಲ್ಲಿ ಸೇವನೆ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಜೊತೆಗೆ, ಕಣ್ಣಿನ ಆಯಾಸ, ತ್ವಚೆಯ ಕಾಂತಿ ಹೆಚ್ಚಿಸಲು, ಹಾಗೂ ಹೊಟ್ಟೆ ತೊಂದರೆಗಳಿಗೆ ಇದು ಶ್ರೇಷ್ಠ ಮನೆಮದ್ದು ಎಂಬುದಾಗಿ ಪುರಾತನ ವೈದ್ಯಕೀಯ ಪಠ್ಯಗಳು ಸೂಚಿಸುತ್ತವೆ.
ಆದಾಗ್ಯೂ, ಯಾವುದೇ ಹೂವು ಅಥವಾ ಗಿಡವನ್ನು ಔಷಧೀಯ ರೂಪದಲ್ಲಿ ಬಳಸುವ ಮುನ್ನ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಗತ್ಯ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಸಮಸ್ಯೆಗಾಗಿ ತಜ್ಞರನ್ನು ಸಂಪರ್ಕಿಸಿ.)