ಟ್ರಂಪ್, ನೆತನ್ಯಾಹು ವಿರುದ್ಧ ಫತ್ವಾ ಹೊರಡಿಸಿದ ಇರಾನ್ ಧರ್ಮಗುರು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಧರ್ಮಗುರು ನಾಸೆರ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಫತ್ವಾ ಹೊರಡಿಸಿದ್ದಾರೆ.

ನ್ಯೂಯಾರ್ಕ್ ಸನ್ ವರದಿಯ ಪ್ರಕಾರ, ಶಿಯಾ ಧರ್ಮಗುರು ನಾಸೆರ್ ಮಕರಿಮ್ ಶಿರಾಜಿ ಅವರು ಪ್ರಪಂಚದಾದ್ಯಂತದ ಇರುವ ಮುಸ್ಲಿಮರು ಒಂದಾಗುವಂತೆ ಕರೆ ನೀಢೀ ಫತ್ವಾ ಹೊರಡಿಸಿದ್ದಾರೆ.

ಜಾಗತಿಕ ಇಸ್ಲಾಮಿಕ್ ಸಮುದಾಯದ ನಾಯಕತ್ವಕ್ಕೆ ಬೆದರಿಕೆ ಒಡ್ಡುವ ಯಾವುದೇ ವ್ಯಕ್ತಿ ಅಥವಾ ಸರ್ಕಾರಕ್ಕೆ ಸೂಕ್ತ ಉತ್ತರ ನೀಡಲಾಗುವುದು . ಇರಾನ್‌ನ ಸರ್ವೋಚ್ಚ ನಾಯಕನನ್ನು ಬೆದರಿಸುವ ಅಥವಾ ಹತ್ಯೆ ಮಾಡಲು ಪ್ರಯತ್ನಿಸುವವರು ಅಲ್ಲಾಹನ ಕೋಪಕ್ಕೆ ಗುರಿಯಾಗುತ್ತಾರೆ. ಅಂತಹ ಕೃತ್ಯವನ್ನು ಅಲ್ಲಾಹನಿಗೆ ಮಾಡಿದ ಅವಮಾನವೆಂದು ಪರಿಗಣಿಸಲಾಗುತ್ತದೆ ಮತ್ತು ಅಲ್ಲಾಹನ ವಿರುದ್ಧದ ಯುದ್ಧವೆಂದು ಪರಿಗಣಿಸಲಾಗುತ್ತದೆ ಎಂದು ಫತ್ವಾದಲ್ಲಿ ಹೇಳಲಾಗಿದೆ.

ಇತ್ತೀಚಿನ ದಿನಗಳಲ್ಲಿ, ಅಮೆರಿಕ ಅಧ್ಯಕ್ಷ ಮತ್ತು ಇಸ್ರೇಲಿ ನಾಯಕರು ಇರಾನ್‌ನ ಸರ್ವೋಚ್ಚ ನಾಯಕನಿಗೆ ಪದೇ ಪದೇ ಬೆದರಿಕೆ ಹಾಕುತ್ತಿದ್ದಾರೆ. ಇರಾನ್‌ನ ಸರ್ವೋಚ್ಚ ನಾಯಕ ಅಥವಾ ಧಾರ್ಮಿಕ ನಾಯಕರನ್ನು ಹತ್ಯೆ ಮಾಡಲು ಯೋಜಿಸುವ ಯಾರಾದರೂ ಇಸ್ಲಾಮಿಕ್ ಕಾನೂನಿನಡಿಯಲ್ಲಿ ಅತ್ಯಂತ ಕಠಿಣ ಶಿಕ್ಷೆಗೆ ಅರ್ಹರಾಗಿರುತ್ತಾರೆ ಎಂದು ಫತ್ವಾದಲ್ಲಿ ತಿಳಿಸಲಾಗಿದೆ.

ಅಲ್ಲಾಹನು ಸರ್ವೋಚ್ಚ ನಾಯಕನನ್ನು ರಕ್ಷಿಸಲಿ. ಅಲ್ಲಾಹುವಿನ ಆಶೀರ್ವಾದ ಆತನ ಮೇಲೆ ಇರಲಿ. ಇಸ್ಲಾಮಿಕ್ ಏಕತೆಗೆ ಬೆದರಿಕೆ ಒಡ್ಡುವ ಯಾರನ್ನಾದರೂ ಅಲ್ಲಾಹನ ವಿರುದ್ಧ ಬಂಡಾಯವೆದ್ದವರೆಂದು ಪರಿಗಣಿಸಲಾಗುತ್ತದೆ ಎಂದು ಫತ್ವಾದಲ್ಲಿ ತಿಳಿಸಲಾಗಿದೆ.

ಶತ್ರುವಿಗೆ ಮುಸ್ಲಿಮರು ಅಥವಾ ಇಸ್ಲಾಮಿಕ್ ರಾಷ್ಟ್ರಗಳು ನೀಡುವ ಯಾವುದೇ ಸಹಕಾರ ಅಥವಾ ಬೆಂಬಲ ಹರಾಮ್ ಅಥವಾ ನಿಷಿದ್ಧ. ಪ್ರಪಂಚದಾದ್ಯಂತದ ಎಲ್ಲಾ ಮುಸ್ಲಿಮರು ಈ ಶತ್ರುಗಳು ತಮ್ಮ ಮಾತುಗಳು ಮತ್ತು ತಪ್ಪುಗಳಿಗೆ ವಿಷಾದಿಸುವಂತೆ ಮಾಡುವುದು ಮಾಡುವ ಅಗತ್ಯವಿದೆ ಎಂದು ಫತ್ವಾದಲ್ಲಿ ಹೇಳಲಾಗಿದೆ.

ಇಸ್ರೇಲ್ ಇರಾನ್‌ನ ಪರಮಾಣು ತಾಣಗಳ ಮೇಲೆ ದಾಳಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ, ಇರಾನ್ ಇಸ್ರೇಲ್‌ಗೆ ಸಾಕಷ್ಟು ಹಾನಿ ಮಾಡಿತ್ತು. ಅಮೆರಿಕ ಕೂಡ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧಕ್ಕೆ ಪ್ರವೇಶಿಸಿತ್ತು. ಅದು ಇರಾನ್‌ನ ಪರಮಾಣು ತಾಣಗಳ ಮೇಲೂ ದಾಳಿ ಮಾಡಿತ್ತು.

ಇರಾನ್ ಕೂಡ ಅಮೆರಿಕಕ್ಕೆ ಪ್ರತಿಕ್ರಿಯಿಸಿತ್ತು. ಇದರ ನಂತರ ಕದನ ವಿರಾಮಕ್ಕೆ ಒಪ್ಪಿಗೆ ಸಿಕ್ಕಿದ್ದರೂ, ಇರಾನ್ ಮತ್ತು ಇಸ್ರೇಲ್ ನಡುವೆ ಇನ್ನೂ ಉದ್ವಿಗ್ನತೆಯ ಪರಿಸ್ಥಿತಿ ಇದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!