ಟಿಎಂಸಿ ಮಹಿಳಾ ನಾಯಕಿಯ ಗೂಂಡಾಗಿರಿ: ಸಿಪಿಐಎಂನ ವೃದ್ಧ ನಾಯಕನ ಮೇಲೆ ಹಲ್ಲೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿ ಜನನಿಬಿಡ ಮಾರುಕಟ್ಟೆಯಲ್ಲಿ ಟಿಎಂಸಿ ಮಹಿಳಾ ನಾಯಕಿ ಬೇಬಿ ಕೊಲಿ ಅವರು ಸಿಪಿಐಎಂನ ಹಿರಿಯ ನಾಯಕ ಅನಿಲ್ ದಾಸ್ ಅವರ ಮೇಲೆ ರಸ್ತೆ ಮಧ್ಯೆಯೇ ಹಿಗ್ಗಾಮುಗ್ಗಾ ಥಳಿಸಿ ಹಲ್ಲೆ ಮಾಡಿದಂತಹ ಘಟನೆ ನಡೆದಿದೆ.

ಈ ಅಮಾನುಷ ಘಟನೆಯನ್ನು ಅಲ್ಲೇ ಇದ್ದ ಜನ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟಿಎಂಸಿ ನಾಯಕಿ ಬೇಬಿ ಕೋಲಿಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸೋಮವಾರ ಬೆಳಗ್ಗೆ ಖರಗ್‌ಪುರದ ಖಾರಿಡಾ ಪ್ರದೇಶದಲ್ಲಿ ಸ್ಥಳೀಯ ನಿವಾಸಿಯೊಬ್ಬರಿಗೆ ಸೇರಿದ ಗೋಡೆಯನ್ನು ಅಕ್ರಮವಾಗಿ ಕೆಡವಿದ್ದರ ವಿರುದ್ಧ ಅನಿಲ್ ದಾಸ್ ಪ್ರತಿಭಟಿಸಿದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಬೇಬಿ ಕೋಲೆ ಮತ್ತು ಅವರ ಸಹಚರರು ಈ ಧ್ವಂಸ ಕಾರ್ಯವನ್ನು ನಡೆಸುತ್ತಿದ್ದರು ಎಂದು ವರದಿಯಾಗಿದೆ.

https://x.com/MeghUpdates/status/1939637724782411864?ref_src=twsrc%5Etfw%7Ctwcamp%5Etweetembed%7Ctwterm%5E1939637724782411864%7Ctwgr%5E18e2b7a150f11cebeecba2cf75f2cade5a08a48b%7Ctwcon%5Es1_&ref_url=https%3A%2F%2Fkannada.asianetnews.com%2Fcrime%2Ftmc-woman-leaders-baby-koli-brutally-beats-elderly-cpim-leader-anil-das%2Farticleshow-z39awc9

ಆಕೆ ಅನಿಲ್ ದಾಸ್‌ಗೆ ದೈಹಿಕ ಹಲ್ಲೆ ಮಾಡಿ ಅವರನ್ನು ನೆಲಕ್ಕೆ ಬೀಳಿಸಿ ಅವರ ಬಟ್ಟೆ ಹರಿದು ಹಾಕಿ ಅವರ ಮೇಲೆ, ಶಾಯಿ ಸಿಂಪಡಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇವೆಲ್ಲವೂ ಜನರ ಕಣ್ಣಮುಂದೆಯೇ ನಡೆಯುತ್ತಿದ್ದರೂ ಯಾರೋಬ್ಬರೂ ಕೂಟ ಅನಿಲ್ ದಾಸ್ ಅವರ ರಕ್ಷಣೆಗೆ ಧಾವಿಸದೇ ಮೂಕ ಪ್ರೇಕ್ಷಕರಂತೆ ಘಟನೆಯನ್ನು ನೋಡಿದ್ದಾರೆ.

ಈ ಹಲ್ಲೆಯ ವೇಳೆ ಅನಿಲ್ ದಾಸ್ ಅವರು ಹತ್ತಿರದ ಬಣ್ಣದ ಅಂಗಡಿಯೊಳಗೆ ಸಾಗಿ ಆಶ್ರಯ ಪಡೆಯಲು ಯತ್ನಿಸಿದರಾದರೂ ಈ ಮಹಿಳಾ ಗೂಂಡಾಗಳು ಅವರನ್ನು ಹಿಂಬಾಲಿಸಿ ಹೋಗಿ ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಬಣ್ಣದ ಡಬ್ಬಿಯನ್ನು ಎಸೆದಿದ್ದಾರೆ. ಇದರಿಂದ ಅವರಿಗೆ ಗಾಯಗಳಾಗಿವೆ. ಘಟನೆಯ ನಂತರ ಅನಿಲ್ ದಾಸ್ ಅವರು ಪೊಲೀಸ್ ಠಾಣೆಗೆ ತೆರಳಿ ಬೇಬಿ ಕೋಲೆ ಹಾಗೂ ಆಕೆಯ ಸಹಚರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ಭಾಗವಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!