ಬೆಳಗಿನ ಉಪಾಹಾರಕ್ಕೆ ಪೋಷಕಾಂಶ ತುಂಬಿದ, ರುಚಿಕರ ಹಾಗೂ ಬೇಗನೆ ತಯಾರಾಗುವ ಮ್ಯಾಂಗೋ ಓವರ್‌ನೈಟ್ ಓಟ್ಸ್ ಅತ್ಯುತ್ತಮ ಆಯ್ಕೆ. ಹಸಿವು ತಣಿಸುವುದರ ಜೊತೆಗೆ ಆರೋಗ್ಯಕ್ಕೂ ಮಿತವಾಗಿ ಪೋಷಣೆಯನ್ನೂ ನೀಡುವ ಈ ರೆಸಿಪಿಯ ವಿಶೇಷವೆಂದರೆ, ಅದನ್ನು ರಾತ್ರಿ ತಯಾರಿಸಿ ಫ್ರಿಜ್‌ನಲ್ಲಿಟ್ಟು, ಬೆಳಿಗ್ಗೆ ತಾಜಾ ಮ್ಯಾಂಗೋ ತುಂಡುಗಳ ಜೊತೆ ಸವಿಯಬಹುದು.
ಬೇಕಾಗುವ ಪದಾರ್ಥಗಳು:
1/2 ಕಪ್ ಓಟ್ಸ್
1 ಚಮಚ ಚಿಯಾ ಬೀಜಗಳು
1/2 ಕಪ್ ಹಾಲು
1/4 ಕಪ್ ನೀರು
1/4 ಕಪ್ ಮೊಸರು
1/4 ಕಪ್ ತಾಜಾ ಮಾವಿನ ಪ್ಯೂರಿ
1/2 ಕಪ್ ಕತ್ತರಿಸಿದ ತಾಜಾ ಮಾವಿನಹಣ್ಣು
2 ಚಮಚ ದಾಳಿಂಬೆ ಬೀಜಗಳು, ಐಚ್ಛಿಕ
2 ಟೇಬಲ್ಸ್ಪೂನ್ ಗೋಡಂಬಿ ಅಥವಾ ಬಾದಾಮಿ
1/2 ಚಮಚ ಕುಂಬಳಕಾಯಿ ಬೀಜಗಳು ಅಥವಾ ಸೂರ್ಯಕಾಂತಿ ಬೀಜಗಳು, ಐಚ್ಛಿಕ
ಮಾಡುವ ವಿಧಾನ:
1/2 ಕಪ್ ಓಟ್ಸ್ ಮತ್ತು 1 ಚಮಚ ಚಿಯಾ ಬೀಜಗಳನ್ನು ಮಧ್ಯಮ ಗಾತ್ರದ ಪಾತ್ರೆಯಲ್ಲಿ ಹಾಕಿ ಅದಕ್ಕೆ 1/2 ಕಪ್ ಹಾಲು ಮತ್ತು 1/4 ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪಾತ್ರೆಯನ್ನು ಮುಚ್ಚಳದಿಂದ ಮುಚ್ಚಿ ಕನಿಷ್ಠ 2 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ರೆಫ್ರಿಜರೇಟರ್‌ನಲ್ಲಿ ಇಡಿ.
ಬೆಳಗ್ಗೆ ಅದಕ್ಕೆ 1/4 ಕಪ್ ಮೊಸರು ಮತ್ತು 1/4 ಕಪ್ ಮಾವಿನ ಪ್ಯೂರಿ ಬೆರೆಸಿ. ಕತ್ತರಿಸಿದ ತಾಜಾ ಮಾವಿನ ಹಣ್ಣನ್ನು ಸೇರಿಸಿ, ನಿಮ್ಮ ಆಯ್ಕೆಯ ಕೆಲವು ಬೀಜಗಳನ್ನು ಮತ್ತು ದಾಳಿಂಬೆ ಬೀಜಗಳನ್ನು ಅದರ ಮೇಲೆ ಹಾಕಿದರೆ ಮಾವಿನ ಹಣ್ಣಿನ ಓಟ್ಸ್ ಸಿದ್ಧ.