ದಿನಭವಿಷ್ಯ: ನಿಮ್ಮದು ಚಂಚಲಚಿತ್ತತೆಯ ಸ್ವಭಾವ, ಅದೇ ನಿಮ್ಮ ದೌರ್ಬಲ್ಯ ಆದೀತು ಜೋಕೆ!

ಮೇಷ.
ಒತ್ತಡ ತುಂಬಿದ ದಿನ. ವ್ಯವಹಾರದಲ್ಲಿ ಹೊಂದಾಣಿಕೆ ಮುಖ್ಯ. ಆಪ್ತರ ಬಗ್ಗೆ ದುರ್ಭಾವನೆ ಬಿಡಿ. ಇಲ್ಲವಾದರೆ  ಸಂಬಂಧ ಕೆಡಬಹುದು.
ವೃಷಭ
ನಿಮ್ಮ ಕೆಲಸದ ಬಗ್ಗೆ ದೃಢ ನಿಶ್ಚಯ ಇರಲಿ. ಪದೇಪದೇ ನಿಲುವು ಬದಲಿಸದಿರಿ. ಆಪ್ತರ ಕುರಿತಾದ ಸಂದೇಹ ನಿವಾರಿಸಿಕೊಳ್ಳಿ.
ಮಿಥುನ
ನಿಮ್ಮ ಶ್ರಮಕ್ಕೆ ಪೂರ್ಣ ಫಲ ಸಿಗದು. ಸಾಧಾರಣ ಪ್ರತಿ-ಲ.ಏಕಾಗ್ರಚಿತ್ತತೆ ಹಾಳಾದೀತು. ದೈಹಿಕ ನೋವು ಕಾಡುವುದು.
ಕಟಕ
ಇತರರ ಜತೆ ವ್ಯವಹರಿಸುವಾಗ ಸಹನೆ ಇರಲಿ.  ಸಂಯಮ ಕಳಕೊಂಡರೆ ನೆಮ್ಮದಿ ಹಾಳು. ಕೌಟುಂಬಿಕ ಮನಸ್ತಾಪ ಸಂಭವ.
ಸಿಂಹ
ಚಂಚಲಚಿತ್ತತೆ ನಿಮ್ಮ ದೌರ್ಬಲ್ಯ. ಅದನ್ನು ತೊಡೆಯಬೇಕು. ದೃಢತೆ ಪ್ರದರ್ಶಿಸಿ. ಯೋಜಿಸಿ, ಯೋಚಿಸಿ ಹಣವನ್ನು ಖರ್ಚು ಮಾಡಿ.
ಕನ್ಯಾ
ಅತಿ ಭಾವುಕರಾಗಿ ವರ್ತಿಸದಿರಿ. ನಿಮ್ಮ ನೋವಿನಿಂದ ಆಪ್ತರಿಗೆ ಸಂಕಟವಾದೀತು. ಮಾತಿನಲ್ಲಿ ನಯವಿರಲಿ. ಆರ್ಥಿಕ ಉನ್ನತಿ.
ತುಲಾ
ಏನೋ ಕೊರತೆ, ಕೊರಗು. ಎಲ್ಲ ಇದ್ದೂ ಸಂತೋಷ ಪಡಲಾಗದ ಮನಸ್ಥಿತಿ. ಧಾಮಿಕ, ಆಧ್ಯಾತ್ಮಿಕ ಚಿಂತನೆಯಿಂದ ನೆಮ್ಮದಿ ದೊರಕೀತು.
ವೃಶ್ಚಿಕ
ಹಣಕಾಸು ವ್ಯವಹಾರದಲ್ಲಿ ಎಚ್ಚರ ಇರಲಿ. ಧನಹಾನಿಯ ಸೂಚನೆಯಿದೆ.  ಕಾಡುತ್ತಿದ್ದ ಅನಾರೋಗ್ಯ  ನಿವಾರಣೆ, ದೈಹಿಕ ನಿರಾಳತೆ.
ಧನು
ನಿಮ್ಮ ಇಂದಿನ  ಕಾರ್ಯ ಸುಲಭದಲ್ಲಿ -ಲಿಸದು. ಬೆವರು ಹರಿಸಬೇಕಾದೀತು. ಕೌಟುಂಬಿಕ ಉದ್ವಿಗ್ನತೆ. ವಾಗ್ವಾದ ಮಾಡಬೇಡಿ.
ಮಕರ
ಬದಲಾವಣೆಗೆ ಒಗ್ಗಿಕೊಳ್ಳಲು ಕಲಿಯಿರಿ. ಅದನ್ನು ದೂರುತ್ತಾ ಕೂರದಿರಿ. ನಿಮ್ಮ ಅನುಚಿತ ಮಾತಿನಿಂದ ಸಂಬಂಧ ಕೆಡಬಹುದು.
ಕುಂಭ
ಇಂದಿನ ಕಾರ್ಯ ಸ-ಲವಾಗಲಿದೆ. ಗುರಿ ಈಡೇರಿಕೆ. ಕೌಟುಂಬಿಕ ಪರಿಸರ ಸೌಹಾರ್ದಕಾರಿ. ಆರ್ಥಿಕ ಸ್ಥಿರತೆ. ಒಟ್ಟಿನಲ್ಲಿ ನಿಮ್ಮ ಪಾಲಿಗೆ ಪೂರಕ ದಿನ.
ಮೀನ
ಹೆಚ್ಚುವರಿ ಒತ್ತಡ, ಹೊಣೆ ಎದುರಿಸುವಿರಿ. ಕೆಲ ವಿಷಯಗಳಲ್ಲಿ ಸಂಗಾತಿಯ ಅಸಹಕಾರ. ಕೌಟುಂಬಿಕ ವ್ಯವಹಾರದಲ್ಲಿ ಹೊಂದಾಣಿಕೆ ಅವಶ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!