ಈಗಿನ ತ್ವಚಾ ಆರೈಕೆ ಪದ್ಧತಿಯಲ್ಲಿ ಬಹುತೇಕರು ರಾಸಾಯನಿಕ ಉತ್ಪನ್ನಗಳತ್ತ ಆಸಕ್ತರಾಗಿದ್ದಾರೆ. ಕಲೆ, ಮೊಡವೆ, ಡ್ರೈ ಸ್ಕಿನ್, ಪಿಗ್ಮೆಂಟೇಶನ್ ಸೇರಿದಂತೆ ಸಾಮಾನ್ಯ ಸಮಸ್ಯೆಗಳಿಗೆ ಬಗೆಹರಿವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ರೀಮ್‌ಗಳು, ಸಿರಮ್‌ಗಳು ವ್ಯಾಪಕವಾಗಿ ಬಳಕೆಯಲ್ಲಿವೆ. ಆದರೆ ಇವುಗಳನ್ನು ಬಳಸಿದ್ರು ನೆಮ್ಮದಿ ಸಿಗದೆ, ಎಫೆಕ್ಟ್ ಇಳಿಕೆಯಾಗುತ್ತದೆ ಎಂಬ ಅಸಹನೆಯ ದೂರುಗಳು ಹೆಚ್ಚಾಗಿವೆ.
ಈ ಹಿನ್ನೆಲೆಯಲ್ಲಿ ಚರ್ಮರೋಗ ತಜ್ಞರೊಬ್ಬರು ತುಪ್ಪ ಬಳಕೆಯ ಪರಿಣಾಮಕಾರಿ ಹಾಗೂ ಬಜೆಟ್ ಫ್ರೆಂಡ್ಲಿ ಮನೆಮದ್ದಿಯ ಪರಿಚಯ ನೀಡಿದ್ದು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗುತ್ತಿದೆ.
ಚರ್ಮದ ತೇವಾಂಶ ಕಾಪಾಡಲು ತುಪ್ಪ ಬೆಸ್ಟ್
ನೇರವಾಗಿ ಮುಖಕ್ಕೆ ತುಪ್ಪ ಹಚ್ಚುವುದರಿಂದ ತ್ವಚೆ ತೇವಾಂಶದಿಂದ ಕೂಡಿರುತ್ತದೆ. ಮುಖದ ನೈಸರ್ಗಿಕ ಹೊಳಪನ್ನು ಕಾಯ್ದುಕೊಳ್ಳಬಹುದು. ಪ್ರತಿದಿನ 10-15 ನಿಮಿಷ ತುಪ್ಪ ಹಚ್ಚಿ, ನಂತರ ಸಾಮಾನ್ಯ ನೀರಿನಿಂದ ತೊಳೆಯುವುದೇ ಸಾಕು.
ಮೈಬಣ್ಣ ಕಪ್ಪಾಗದಿರಲು
ವಯಸ್ಸು ಹೆಚ್ಚಾದಂತೆ ಸತ್ತ ಚರ್ಮಕೋಶಗಳು ಸಂಗ್ರಹವಾಗುತ್ತವೆ. ಇದರಿಂದ ಮೈಬಣ್ಣ ಕಡಿಮೆ ಆಗುವ ಸಾಧ್ಯತೆ ಇದೆ. ಇದನ್ನು ತಡೆಯಲು ಮೊಸರು ಹಾಗೂ ಕಡಲೆಹಿಟ್ಟಿನ ಪೇಸ್ಟ್ ಬಳಸಿ ಸ್ಕ್ರಬ್ ಮಾಡುವುದರಿಂದ ಸತ್ತ ಕೋಶಗಳು ಹೊರಗೆ ಹೋಗುತ್ತವೆ. ಇದರ ನಂತರ ತುಪ್ಪ ಹಚ್ಚುವುದು ಉತ್ತಮ.
ತುಪ್ಪದ ಜೊತೆಗೆ ಬಳಸಬಹುದಾದ ಪದಾರ್ಥಗಳು
ತುಪ್ಪದೊಂದಿಗೆ ತೆಂಗಿನ ಎಣ್ಣೆ, ಮೊಸರು ಮತ್ತು ಜೇನುತುಪ್ಪವನ್ನು ಬಳಸಬಹುದು. ಈ ಎಲ್ಲಾ ಪದಾರ್ಥಗಳು ತ್ವಚೆಗೆ ತೇವಾಂಶ ನೀಡುತ್ತವೆ ಹಾಗೂ ಮುಖ ಮೃದು, ಹೊಳಪಾಗಿರಲು ಸಹಾಯ ಮಾಡುತ್ತವೆ.
ಬೇಸಿಗೆಯಲ್ಲಿ ಸನ್‌ಸ್ಕ್ರೀನ್ ಮರೆಯಬೇಡಿ
ಬೇಸಿಗೆಯ ತೀವ್ರ ಬೆಳಕಿನಲ್ಲಿ ತ್ವಚೆಯ ರಕ್ಷಣೆಗೆ ಸನ್‌ಸ್ಕ್ರೀನ್ ಅತ್ಯಗತ್ಯ. ಟ್ಯಾನಿಂಗ್ ತಪ್ಪಿಸಲು ಇದು ಅಗತ್ಯವಾದ ಹೆಜ್ಜೆ. ತ್ವಚೆಯ ದಿನಚರಿಯಲ್ಲಿ ತುಪ್ಪ ಹಾಗೂ ಇತರ ಮನೆಮದ್ದುಗಳೊಂದಿಗೆ ಸನ್‌ಸ್ಕ್ರೀನ್ ಸೇರಿಸಿದರೆ ಸಂಪೂರ್ಣ ಆರೈಕೆ ದೊರೆಯುತ್ತದೆ.