ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್’ ರಿಯಾಲಿಟಿ ಶೋಗೆ ಕಿಚ್ಚ ಸುದೀಪ್ ಮತ್ತೊಮ್ಮೆ ಹೋಸ್ಟ್ ಆಗುತ್ತಿರುವುದು ಕನ್ಫರ್ಮ್ ಆಗಿದೆ. ಸೀಸನ್-12 ಮಾತ್ರವಲ್ಲ, ಮುಂದಿನ ನಾಲ್ಕು ಸೀಸನ್‌ಗಳವರೆಗೆ ಸಹ ಸುದೀಪ್ ನಿರೂಪಕರಾಗಿ ಮುಂದುವರೆಯಲಿದ್ದಾರೆ. ಆದರೆ, ಬಹುತೇಕ ಮಹಿಳಾ ಅಭಿಮಾನಿಗಳ ಮನಸ್ಸಿನಲ್ಲಿ ಇತ್ತಿಚೆಗೆ ಉದ್ಬವವಾದ ಪ್ರಶ್ನೆ ಒಂದಿದೆ – ಕಿಚ್ಚ ಸುದೀಪ್ ಯಾಕೆ ಯಾವಾಗಲೂ ನಿಂತುಕೊಂಡೇ ಹೋಸ್ಟ್ ಮಾಡ್ತಾರೆ ಅಂತ?
ಈ ವಿಚಾರವನ್ನು ಕೇಳಿರುವ ಪತ್ರಕರ್ತೆಯೊಬ್ಬರ ಪ್ರಶ್ನೆಗೆ ಸುದೀಪ್ ಸುದೀರ್ಘವಾಗಿ ಉತ್ತರ ನೀಡಿದ್ದಾರೆ. “ನಾನು ನಿಂತುಕೊಂಡೇ ಹೋಸ್ಟಿಂಗ್ ಮಾಡೋಕೆ ಕಾರಣ ಯಾವುದು ಎಂದರೆ, ಅದು ಕ್ಯಾಮೆರಾದ ಮೇಲೆ ಹೆಚ್ಚು ಇಂಪ್ಯಾಕ್ಟ್ ಸೃಷ್ಟಿಸುತ್ತದೆ. ನಾನು ಕುಳಿತುಕೊಂಡು ಹೋಸ್ಟ್ ಮಾಡಿದರೆ, ವೀಕ್ಷಕರಿಗೆ ಅದು ಬೋರಿಂಗ್ ಆಗಬಹುದು. ದೈಹಿಕ ಭಾಷೆಯು, ಎಕ್ಸ್‌ಪ್ರೆಷನ್‌ಗಳು, ವೇದಿಕೆಯ ಮೇಲಿನ ಚಲನೆ ಎಲ್ಲವೂ ನಿಂತು ಮಾತನಾಡುವಾಗ ಉತ್ತಮವಾಗಿ ಬರುತ್ತದೆ ” ಎಂದು ಸ್ಪಷ್ಟಪಡಿಸಿದ್ದಾರೆ.
ಅದರೊಂದಿಗೆ, ಕಲರ್ಸ್ ವಾಹಿನಿ ಚೇರ್ ಕೊಡಲಿಲ್ಲವೋ ಎಂಬ ಪ್ರಶ್ನೆಗೆ, ” ಹಾಗೇನೂ ಇಲ್ಲ. ನಾನು ಕುಳಿತುಕೊಳ್ಳಲಿ ಅಂತ ಚೇರ್ ಕೊಟ್ಟಿದ್ದರು. ಆದರೆ, ನಾನು ಅದರ ಮೇಲೆ ಕುಳಿತುಕೊಳ್ಳಲಿಲ್ಲ. ಅದ್ಯಾಕೋ ಸರಿ ಹೋಗಲ್ಲ ಅನಿಸುತ್ತದೆ. ಹಾಗಾಗಿಯೇ ಚೇರ್ ಪಕ್ಕದಲ್ಲಿಯೇ ಇರುತ್ತದೆ. ಅದರ ಪಕ್ಕ ನಿಂತುಕೊಂಡಿರುತ್ತೇನೆ. ಕೈ ಇಟ್ಟು ನಿಂತುಕೊಳ್ಳೋದು ಇದೆ. ಆದರೆ, ಚೇರ್ ಮೇಲೆ ಕುಳಿತುಕೊಂಡು ಹೋಸ್ಟಿಂಗ್ ಮಾಡೋಕೆ ಇಷ್ಟ ಆಗೋದಿಲ್ಲ. ಅದು ಚೆನ್ನಾಗಿಯೂ ಕಾಣಿಸೋದಿಲ್ಲ. ಹಾಗಾಗಿಯೇ ನಾನು ಚೇರ್ ಬಳಕೆ ಕೂಡ ಮಾಡೋದಿಲ್ಲ’ ಅಂತಲೇ ಸುದೀಪ್ ಹೇಳಿಕೊಂಡಿದ್ದಾರೆ.