ಚಿಕನ್ ಮತ್ತು ಮ್ಯಾಗಿ ಪ್ರಿಯರು ಮನೆಯಲ್ಲಿಯೇ ಸುಲಭವಾಗಿ ಚಿಕನ್ ಮ್ಯಾಗಿ ತಯಾರಿಸಬಹುದು. ವಿಶೇಷವೆಂದರೆ, ಇದು ಸಾಮಾನ್ಯ ಮ್ಯಾಗಿಗಿಂತ ವಿಭಿನ್ನವಾಗಿದ್ದು, ಕೊರಿಯನ್ ಶೈಲಿಯ ಸ್ಪೈಸಿ ಟಚ್ ಹೊಂದಿದೆ. ಭಾರತೀಯ ರುಚಿಗೆ ಹೊಂದುವಂತೆ ಕಡಿಮೆ ಸಮಯದಲ್ಲಿ ಸಿದ್ಧವಾಗುವ ಈ ಪಾಕವಿಧಾನ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಇಷ್ಟವಾಗುವುದು ಖಂಡಿತ.
ಕೋಳಿ ಮಾಂಸ – 100 ಗ್ರಾಂ
ಉಪ್ಪು – ರುಚಿಗೆ ತಕ್ಕಷ್ಟು
ಮೆಣಸಿನಕಾಯಿ ಪುಡಿ – 1 ಟೀಸ್ಪೂನ್
ಎಣ್ಣೆ – 3 ಟೀಸ್ಪೂನ್
ಮೊಸರು – 1 ಟೇಬಲ್ ಸ್ಪೂನ್
ಮ್ಯಾಗಿ ನೂಡಲ್ಸ್ – 2 ಪ್ಯಾಕೆಟ್‌ಗಳು
ಸ್ಪ್ರಿಂಗ್ ಈರುಳ್ಳಿ – 2 ಟೇಬಲ್ ಸ್ಪೂನ್ (ನುಣ್ಣಗೆ ಕತ್ತರಿಸಿದ)
ಬೆಳ್ಳುಳ್ಳಿ – 3 ಎಸಳು (ನುಣ್ಣಗೆ ಕತ್ತರಿಸಿದ)
ಜೀರಿಗೆ – 1 ಟೀಸ್ಪೂನ್
ಮ್ಯಾಗಿ ಮಸಾಲೆ – 2 ಪ್ಯಾಕೆಟ್‌ಗಳು
ಕೊರಿಯನ್ ರೆಡ್ ಚಿಲ್ಲಿ ಫ್ಲೇಕ್ಸ್ – 1 ಟೀಸ್ಪೂನ್ (ಐಚ್ಛಿಕ)
ಸೋಯಾ ಸಾಸ್ – 1 ಟೀಸ್ಪೂನ್ (ಐಚ್ಛಿಕ)
ಮೂಡಲಾಗಿ ಚಿಕನ್ ತುಂಡುಗಳನ್ನು ಉಪ್ಪು, ಮೆಣಸಿನ ಪುಡಿ, ಎಣ್ಣೆ ಮತ್ತು ಮೊಸರಿನಲ್ಲಿ ಮ್ಯಾರಿನೇಟ್ ಮಾಡಿ ೧೦ ನಿಮಿಷ ಇಟ್ಟು ನಂತರ ನಿಮ್ಮ ಇಚ್ಛಾನುಸಾರ ಅದನ್ನು ಬೇಯಿಸಬಹುದು ಅಥವಾ ಹುರಿಯಬಹುದು.
ಈಗ ಒಲೆ ಆನ್ ಮಾಡಿ ಒಂದು ಬಟ್ಟಲು ಇಟ್ಟು ಅದರಲ್ಲಿ ನೀರು ಸುರಿಯಿರಿ. ಅವು ಸ್ವಲ್ಪ ಬಿಸಿಯಾದ ನಂತರ ಮ್ಯಾಗಿ ಸೇರಿಸಿ. ಅದಕ್ಕೆ ಯಾವುದೇ ಮಸಾಲೆ ಸೇರಿಸಬೇಡಿ. ಅವು ಬೆಂದ ನಂತರ ನೀರಿನಿಂದ ತೆಗೆದು ಪಕ್ಕಕ್ಕೆ ಇರಿಸಿ.
ಈಗ ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದರಲ್ಲಿ ನುಣ್ಣಗೆ ಕತ್ತರಿಸಿದ ಸ್ಪ್ರಿಂಗ್ ಈರುಳ್ಳಿ ಮತ್ತು ಬೆಳ್ಳುಳ್ಳಿ ತುಂಡುಗಳನ್ನು ಸೇರಿಸಿ. ಮೆಣಸಿನ ಪುಡಿ, ಮೊದಲೇ ಹುರಿದ ಚಿಕನ್ ತುಂಡುಗಳು, ಮ್ಯಾಗಿ ಮಸಾಲಾ ಸೇರಿಸಿ ಮಿಶ್ರಣ ಮಾಡಿ.
ಸಣ್ಣ ಪ್ಯಾನ್‌ಗೆ ಎಣ್ಣೆ ಹಾಕಿ. ಜೀರಿಗೆ ಸೇರಿಸಿ ಹುರಿಯಿರಿ. ಈ ಎಣ್ಣೆ ಮಿಶ್ರಣ ಬಿಸಿಯಾಗಿರುವಾಗ, ನೀವು ಮೊದಲು ಬೆರೆಸಿದ ಸ್ಪ್ರಿಂಗ್ ಈರುಳ್ಳಿ ಮಿಶ್ರಣವನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿದ ಮ್ಯಾಗಿಯನ್ನು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿದರೆ ಕೊರಿಯನ್ ಶೈಲಿಯ ಚಿಕನ್ ಮ್ಯಾಗಿ ಸಿದ್ಧ.