ಮಧ್ಯಮ ವರ್ಗದ ಜನರಿಗೆ ಗುಡ್ ನ್ಯೂಸ್: ಕೇಂದ್ರ ಸರಕಾರದಿಂದ ಅಗತ್ಯ ವಸ್ತುಗಳ ಬೆಲೆ ಇಳಿಕೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರ ದೇಶದ ಜನರಿಗೆ ಸಿಹಿ ಸುದ್ದಿ ನೀಡಿದ್ದು, ಹಲವು ಅಗತ್ಯ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನ ಕಡಿಮೆ ಮಾಡಲು ಮುಂದಾಗಿದೆ.

ಆದಾಯ ತೆರಿಗೆಯ ಮಿತಿಯನ್ನು 12 ಲಕ್ಷ ರೂ.ಗೆ ಏರಿಸಿ ರಿಲೀಫ್‌ ನೀಡಿದ್ದ ಮೋದಿ ಸರ್ಕಾರ, ಇದೀಗ ಕೆಲವು ವಸ್ತುಗಳ ಬೆಲೆಯನ್ನೂ ಇಳಿಕೆ ಮಾಡುವ ಮೂಲಕ ಮತ್ತೊಂದು ಉಡುಗೊರೆ ನೀಡಲು ಸಜ್ಜಾಗಿದೆ.

ಹಲವು ವಸ್ತುಗಳ ಜಿಎಸ್‌ಟಿ ಇಳಿಕೆ ಮಾಡುವ ಮೂಲಕ, ಅವುಗಳ ಬೆಲೆ ಕಡಿಮೆಯಾಗುವಂತೆ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಶೇ. 12ರ ಜಿಎಸ್‌ಟಿ ಸ್ಲ್ಯಾಬ್‌ ಅನ್ನು ಸಂಪೂರ್ಣವಾಗಿ ತೆಗೆದು ಹಾಕುವುದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಆಲೋಚನೆಯಾಗಿದೆ. ಇದರಿಂದ ಈ ಸ್ಲ್ಯಾಬ್‌ನಲ್ಲಿರುವ ಹೆಚ್ಚಿನ ಉತ್ಪನ್ನಗಳು ಶೇಶೇ. 5ರ ಸ್ಲ್ಯಾಬ್‌ಗೆ ಬರಲಿದ್ದು, ದರ ಇಳಿಕೆಯಾಗಲಿದೆ. ಇದರ ಲಾಭ ನೇರವಾಗಿ ಜನರಿಗೆ ತಲುಪಲಿದೆ.

ಮಧ್ಯಮ ವರ್ಗ ಹಾಗೂ ಬಡವರು ಬಳಸುವ ವಸ್ತುಗಳು ಈ ಸ್ಲ್ಯಾಬ್‌ನಲ್ಲಿ ಇರುವುದರಿಂದ ದರ ಕಡಿಮೆಯಾಗಲಿದೆ. ಟೂತ್‌ಪೇಸ್ಟ್ ಮತ್ತು ಹಲ್ಲಿನ ಪುಡಿ, ಛತ್ರಿಗಳು, ಹೊಲಿಗೆ ಯಂತ್ರಗಳು, ಪ್ರೆಶರ್ ಕುಕ್ಕರ್‌ಗಳು ಮತ್ತು ಅಡುಗೆ ಪಾತ್ರೆಗಳು, ಎಲೆಕ್ಟ್ರಿಕ್ ಐರನ್‌ ಬಾಕ್ಸ್‌, ಗೀಸರ್‌ಗಳು, ಸಣ್ಣ ಸಾಮರ್ಥ್ಯದ ತೊಳೆಯುವ ಯಂತ್ರಗಳು, ಬೈಸಿಕಲ್‌ಗಳು, 1,000 ರೂಪಾಯಿಗಿಂತ ಹೆಚ್ಚು ಬೆಲೆಯ ರೆಡಿಮೇಡ್‌ ಬಟ್ಟೆಗಳು, 500 ರೂ. ನಿಂದ 1,000 ರೂಪಾಯಿವರೆಗಿನ ಬೆಲೆಯ ಪಾದರಕ್ಷೆಗಳು, ಸ್ಟೇಷನರಿ ವಸ್ತುಗಳು, ಲಸಿಕೆಗಳು, ಸೆರಾಮಿಕ್‌ ಟೈಲ್ಸ್‌ ಮತ್ತು ಕೃಷಿ ಉಪಕರಣಗಳು ಸೇರಿ ಮುಂತಾದ ವಸ್ತುಗಳು ಸದ್ಯ ಶೇ. 12 ಜಿಎಸ್‌ಟಿ ಸ್ಲ್ಯಾಬ್‌ನಲ್ಲಿವೆ.

ಶೇ. 12 ಜಿಎಸ್‌ಟಿ ಸ್ಲ್ಯಾಬ್‌ ಅನ್ನು ತೆಗೆದುಹಾಕಿದರೆ, ಇವುಗಳಲ್ಲಿ ಹೆಚ್ಚಿನವು ಶೇ. 5ರ ಸ್ಲ್ಯಾಬ್‌ಗೆ ಬರಲಿವೆ. ಈ ತೀರ್ಮಾನದಿಂದ ಸರ್ಕಾರದ ಮೇಲೆ ವಾರ್ಷಿಕ 40,000 ಕೋಟಿ ರೂ.ನಿಂದ 50,000 ಕೋಟಿ ರೂ. ಹೊರೆ ಬೀಳಬಹುದು ಎಂದು ಅಂದಾಜಿಸಲಾಗಿದೆ. ಇತ್ತೀಚಿನ ಸಂದರ್ಶನಗಳಲ್ಲಿಯೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಗ್ಗೆ ಸುಳಿವು ನೀಡಿದ್ದಾರೆ.

ಆದರೆ, ಇದನ್ನು ಜಿಎಸ್‌ಟಿ ಕೌನ್ಸಿಲ್‌ನಲ್ಲಿ ನಿರ್ಧರಿಸಬೇಕಿದ್ದು, ಇದಕ್ಕೆ ರಾಜ್ಯಗಳ ಒಪ್ಪಿಗೆ ಕೂಡ ಮುಖ್ಯ. ಸದ್ಯ ಕೆಲವು ರಾಜ್ಯಗಳು ಇದಕ್ಕೆ ಒಪ್ಪಿಲ್ಲ. ಪಂಜಾಬ್, ಕೇರಳ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ಕೇಂದ್ರದ ಈ ಚಿಂತನೆಗೆ ವಿರೋಧ ವ್ಯಕ್ತಪಡಿಸಿವೆ ಎಂದು ವರದಿಯಾಗಿದೆ. ಜುಲೈ ತಿಂಗಳ ಕೊನೆಯಲ್ಲಿ ನಡೆಯುವ 56ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗುವ ನಿರೀಕ್ಷೆ ಇದೆ.

ಈ ವಸ್ತುಗಳ ಬೆಲೆ ಇಳಿಕೆ!
1) ಟೂತ್‌ಪೇಸ್ಟ್, ಟೂತ್‌ಪೌಡರ್
2) ಛತ್ರಿಗಳು
3) ಹೊಲಿಗೆ ಯಂತ್ರಗಳು
4) ಪ್ರೆಶರ್ ಕುಕ್ಕರ್ ಮತ್ತು ಇತರ ಅಡುಗೆ ಸಲಕರಣೆಗಳು
5) ವಿದ್ಯುತ್ ಇಸ್ತ್ರಿ ಪೆಟ್ಟಿಗೆಗಳು
6) ಗೀಸರ್‌’ಗಳು
7) ಕಡಿಮೆ ಸಾಮರ್ಥ್ಯದ ತೊಳೆಯುವ ಯಂತ್ರಗಳು
8) ಸೈಕಲ್‌’ಗಳು
9) 1000 ರೂ.ಗಿಂತ ಹೆಚ್ಚಿನ ಬೆಲೆಯ ರೆಡಿಮೇಡ್ ಬಟ್ಟೆಗಳು
10) 500 ರಿಂದ 1000 ರೂ.ಗಳ ನಡುವಿನ ಬೆಲೆಯ ಪಾದದ ತಾಯತಗಳು
11) ಸ್ಟೇಷನರಿ ವಸ್ತುಗಳು
12) ಲಸಿಕೆಗಳು
13) ಸೆರಾಮಿಕ್ ಟೈಲ್ಸ್
14) ಕೃಷಿ ಉಪಕರಣಗಳು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!