ಏಕಾಏಕಿ 26 ಸಾವಿರ ಅಡಿ ಕೆಳಗೆ ಕುಸಿದ ವಿಮಾನ: ವಿಮಾನದಲ್ಲೇ ವಿಲ್ ಬರೆದ ಪ್ರಯಾಣಿಕರು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜಪಾನ್ ಏರ್ಲೈನ್ಸ್ ಬೋಯಿಂಗ್ 737 ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಪರಿಣಾಮ 36 ಸಾವಿರ ಅಡಿಯಿಂದ 26 ಸಾವಿರ ಅಡಿಗೆ ಇಳಿದ ಘಟನೆ ವರದಿಯಾಗಿದೆ. ಏಕಾಏಕಿ ವಿಮಾನ ಕೆಳಗಿಳಿದ ಹಿನ್ನೆಲೆ ಆಮ್ಲಜನಕ ಮಟ್ಟ ಏರುಪೇರಾದ್ದರಿಂದ ಪ್ರಯಾಣಿಕರು ಕೂಡಲೇ ಆಕ್ಸಿಜನ್ ಮಾಸ್ಕ್​ ಧರಿಸಬೇಕಾಯಿತು.

ಜಪಾನ್‌ನಲ್ಲಿ ವಿಮಾನವೊಂದು ತುರ್ತು ಲ್ಯಾಂಡಿಂಗ್‌ಗೂ ಮೊದಲು 26 ಸಾವಿರ ಅಡಿಗೆ ಹಠಾತ್ ಕುಸಿದ ಪರಿಣಾಮ ಪ್ರಯಾಣಿಕರಿಗೆ ಇನ್ನೇನು ಸತ್ತೇ ಹೋದೆವು ಎಂಬಂತಹ ಅನುಭವ ಆಗಿದ್ದು, ಸಾವಿಗೆ ಹೆದರಿ ವಿಮಾನದಲ್ಲಿದ್ದ ಪ್ರಯಾಣಿಕರು ವಿಮಾನದಲ್ಲೇ ಕುಳಿತು ಡಿಜಿಟಲ್ ವಿಲ್ ಬರೆದಿದ್ದಾರೆ. ಆದರೆ ಅದೃಷ್ಟವಶಾತ್ ಅವರೆಲ್ಲರೂ ಪಾರಾಗಿ ಬಂದಿದ್ದು, ಈ ಕತೆಯನ್ನು ತಮ್ಮ ಪ್ರೀತಿ ಪಾತ್ರ ಮುಂದೆ ಹೇಳಿಕೊಂಡಿದ್ದಾರೆ.

26 ಸಾವಿರ ಅಡಿ ಎತ್ತರಕ್ಕೆ ವಿಮಾನ ಹಠಾತ್ ಕುಸಿದ ಪರಿಣಾಮ ವಿಮಾನ ಪ್ರಯಾಣಿಕರೆಲ್ಲರೂ ತಾವು ಕ್ಷಣದಲ್ಲೇ ಸತ್ತೇ ಹೋದೆವು ಎಂದು ಭಯಭೀತರಾಗಿದ್ದಾರೆ. ಆದರೆ ಘಟನೆ ನಡೆದ ಕೆಲ ಕ್ಷಣದಲ್ಲಿ ವಿಮಾನ ತುರ್ತು ಭೂಸ್ಪರ್ಶವಾಗಿದ್ದು ವಿಮಾನದಲ್ಲಿದ್ದ ಎಲ್ಲರೂ ಪಾರಾಗಿ ಬಂದಿದ್ದು, ಆ ಭಯಾನಕ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

https://x.com/shanghaidaily/status/1939865369826746697?ref_src=twsrc%5Etfw%7Ctwcamp%5Etweetembed%7Ctwterm%5E1939865369826746697%7Ctwgr%5Ed270665fce4176d06b2e7aa3353b4aac541137d2%7Ctwcon%5Es1_&ref_url=https%3A%2F%2Fwww.indiatoday.in%2Fworld%2Fstory%2Fjapan-airlines-flight-pressure-drop-passengers-write-out-wills-boeing-plummets-sharply-china-tokya-plane-2749395-2025-07-02

ಕೆಲವರು ತಮ್ಮ ಆಕ್ಸಿಜನ್ ಮಾಸ್ಕ್‌ಗಳು ಬೀಳುವುದು, ವಿಮಾನದಲ್ಲಿರುವ ಸಿಬ್ಬಂದಿ ಕೂಗಾಡುವುದು ಮಾಡಿದರೆ ಇನ್ನು ಕೆಲವು ಪ್ರಯಾಣಿಕರು ತಮ್ಮ ವ್ಹೀಲ್ ಬರೆಯುವುದಲ್ಲದೇ ತಮ್ಮ ಬ್ಯಾಂಕ್ ಪಿನ್‌ಗಳನ್ನು ತಮ್ಮ ಆಪ್ತರೊಂದಿಗೆ ಹಂಚಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಅಂದಹಾಗೆ ಶಾಂಘೈನಿಂದ ಟೋಕಿಯೋಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಈ ವಿಮಾನವೂ ಶಾಂಘೈನ ಪುಡಾಂಗ್ ವಿಮಾನ ನಿಲ್ದಾಣದಿಂದ )ಹೊರಟು ನರಿಟಾ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ ವಿಮಾನ ಇದ್ದಕ್ಕಿದ್ದಂತೆ 26 ಸಾವಿರ ಅಡಿಗೆ ಕುಸಿದಿದೆ. ಕೂಡಲೇ ವಿಮಾನದ ಕ್ಯಾಪ್ಟನ್ ಹಾಗೂ ಸಿಬ್ಬಂದಿ ತುರ್ತು ಕ್ರಮ ಕೈಗೊಂಡು ವಿಮಾನದ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ.

191 ಪ್ರಯಾಣಿಕರಿದ್ದ ವಿಮಾನವೂ ಕೇವಲ 10 ನಿಮಿಷದಲ್ಲಿ 36 ಸಾವಿರ ಅಡಿ ಎತ್ತರದಿಂದ 26 ಸಾವಿರ ಅಡಿಗೆ ಕುಸಿದಿದೆ. ಈ ವೇಳೆ ವಿಮಾನ ಪ್ರಯಾಣಿಕರಿಗೆ ಒಂದು ಕ್ಷಣ ಸಾವೇ ಕಣ್ಣಮುಂದೆ ಬಂದಂತಾಗಿದ್ದು, ಕೂಗಾಟ ಕಿರುಚಾಟ ಜೋರಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!