HEALTH | ವೆಜಿಟೇರಿಯನ್ಸ್‌ಗೂ ಸಿಕ್ಕಾಪಟ್ಟೆ ಪ್ರೋಟೀನ್‌ ಆಪ್ಷನ್ಸ್‌ ಇದೆ, ಯಾವುದು ನೋಡಿ..

ಟೀನ್ ದೇಹಕ್ಕೆ ತುಂಬಾ ಮುಖ್ಯವಾದ ಪೋಷಕಾಂಶವಾಗಿದೆ. ಇದು ಸ್ನಾಯುಗಳನ್ನು ಬಲವಾಗಿಡಲು, ದೇಹವನ್ನು ಬಲವಾಗಿ, ಆರೋಗ್ಯವಾಗಿಡಲು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಬರೀ ಚಿಕನ್‌, ಮಟನ್‌, ಮೀನು, ಮೊಟ್ಟೆಯಲ್ಲೇ ಇರುತ್ತದೆ ಎಂದು ಹೇಳೋಕಾಗೋದಿಲ್ಲ. ವೆಜ್‌ನಲ್ಲಿಯೂ ಸಾಕಷ್ಟು ಆಪ್ಷನ್‌ ಇದೆ. ಯಾವುದು ನೋಡಿ…

ಕ್ವಿನೋವಾದಲ್ಲಿ ಅಪರ್ಯಾಪ್ತ ಕೊಬ್ಬುಗಳು, ರಂಜಕ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮ್ಯಾಂಗನೀಸ್, ತಾಮ್ರ, ಸತು, ಬಿ6, ನಿಯಾಸಿನ್, ಥಯಾಮಿನ್ ಮತ್ತು ವಿಟಮಿನ್ ಇ ದೇಹಕ್ಕೆ ಸಂಪೂರ್ಣ ಆರೋಗ್ಯ ಒದಗಿಸುತ್ತದೆ.

ಓಟ್ಸ್​ನಲ್ಲಿ ಪ್ರೋಟೀನ್‌ ಸಮೃದ್ಧವಾಗಿದೆ. ಓಟ್ಸ್ ಅನ್ನು ಎಲ್ಲಾ ರೀತಿಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ‘ಸೂಪರ್‌ಫುಡ್’ ಆಗಿದೆ. ಓಟ್ಸ್​ನಲ್ಲಿ ಕಾರ್ಬೋಹೈಡ್ರೇಟ್‌ಗಳು, ಫೈಬರ್, ಮ್ಯಾಂಗನೀಸ್, ರಂಜಕ, ತಾಮ್ರ, ಕಬ್ಬಿಣ, ಸೆಲೆನಿಯಮ್, ಮೆಗ್ನೀಸಿಯಮ್ ಹಾಗೂ ಸತು ಸಮೃದ್ಧವಾಗಿದೆ.

ತೂಕ ಇಳಿಸಿಕೊಳ್ಳಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಯಸುವವರಿಗೆ ಸಬ್ಜಾ ಬೀಜಗಳು ಉತ್ತಮ ಆಹಾರವಾಗಿ. ಸಬ್ಜಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಪ್ರೋಟೀನ್ ಜೊತೆಗೆ ಫೈಬರ್ ಹೊಂದಿದೆ.

ತರಕಾರಿಗಳು ಮತ್ತು ಹಣ್ಣುಗಳಲ್ಲಿ ಪ್ರೋಟೀನ್‌ನ ಶೇಕಡಾವಾರು ಕಡಿಮೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದ್ರೆ, ಬ್ರೊಕೊಲಿ, ಆಲೂಗಡ್ಡೆ ಹಾಗೂ ಪಾಲಕ್ ಇತ್ಯಾದಿ ಆಹಾರಗಳಲ್ಲಿ ಪ್ರೋಟೀನ್‌ ಸಮೃದ್ಧವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!