ಹೊಸದಿಗಂತ ಡಿಜಿಟಲ್ ಡೆಸ್ಕ್:
ಧಾರವಾಡ ಎಎಸ್‌ಪಿ ಸ್ವಯಂಪ್ರೇರಿತ ನಿವೃತ್ತಿಯನ್ನು ನಾವು ಅಕ್ಸೆಪ್ಟ್ ಮಾಡುವುದಿಲ್ಲ, ಅವರಿಗೆ ಮತ್ತೆ ಪೋಸ್ಟಿಂಗ್ ಕೊಡುತ್ತೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಧಾರವಾಡ ಎಎಸ್‌ಪಿ ನಾರಾಯಣ ಬರಮಣ್ಣಿಗೆ ಮತ್ತೆ ಪೋಸ್ಟಿಂಗ್ ಮಾಡುತ್ತೇವೆ. ನಾರಾಯಣ್ ಅವರ ಸ್ವಯಂಪ್ರೇರಿತ ನಿವೃತ್ತಿ ತೆಗೆದುಕೊಳ್ಳುವುದಿಲ್ಲ. ನಾನು ಹಾಗೂ ಹೆಚ್.ಕೆ ಪಾಟೀಲ್ ಅವರ ಜೊತೆ ಮಾತಾಡಿದ್ದೇವೆ. ಅವರು ಹಾಗೇನೂ ಮಾಡಲ್ಲ. ಅವರಿಗೆ ಪೋಸ್ಟಿಂಗ್ ಕೊಡ್ತೇವೆ ಎಂದಿದ್ದಾರೆ. ಇನ್ನು ಸಿಎಂ ಆವತ್ತು ಉದ್ದೇಶಪೂರ್ವಕವಾಗಿ ಹಾಗೆ ಮಾಡಲಿಲ್ಲ. ಆ ಸಂದರ್ಭಕ್ಕೆ ಸಿಎಂ ಹಾಗೆ ನಡೆದುಕೊಂಡಿದ್ದಾರೆ ಎಂದರು.