SNACKS | ಈ ವೆದರ್‌ಗೆ ಪಾಲಕ್‌ ಪಕೋಡಾ, ಬಿಸಿ ಬಿಸಿ ಟೀ ಬೆಸ್ಟ್‌ ಕಾಂಬಿನೇಷನ್‌ ಅಲ್ವಾ??

ಸಾಮಾಗ್ರಿಗಳು

ಪಾಲಕ್ ಸೊಪ್ಪು – ದೊಡ್ಡ ಗೊಂಚಲು

ಈರುಳ್ಳಿ – ದೊಡ್ಡ ಗಾತ್ರದ ಎರಡು

ಶುಂಠಿ – 1 ಇಂಚು

ಹಸಿ ಮೆಣಸಿನಕಾಯಿ – 2

ಅಜವಾನ – 1 ಟೀಸ್ಪೂನ್

ಧನಿಯಾ ಪುಡಿ – 1 ಟೀಸ್ಪೂನ್

ಉಪ್ಪು – ರುಚಿಗೆ ತಕ್ಕಷ್ಟು

ಅರಿಶಿನ – ಒಂದು ಚಿಟಿಕೆ

ಖಾರದ ಪುಡಿ – 1 ಟೀಸ್ಪೂನ್

ಅಕ್ಕಿ ಹಿಟ್ಟು – ಕಾಲು ಕಪ್

ಕಡಲೆ ಹಿಟ್ಟು – 1 ಕಪ್

ಬಿಸಿ ಎಣ್ಣೆ – ಡೀಪ್​ ಫ್ರೈ ಮಾಡಲು ಬೇಕಾಗುವಷ್ಟು”

ಮಾಡುವ ವಿಧಾನ  

ಮೊದಲು ಪಾಲಕ್​ ಕಟ್​ ಮಾಡಬೇಕಾಗುತ್ತದೆ. ಪಕೋಡಾ ಮಿಶ್ರಣಕ್ಕೆ ಅಗಲವಾದ ಪಾಲಕ್​ ಎಲೆಗಳು ಹಾಗೆ ಇರಬೇಕಾಗುತ್ತದೆ. ಒಂದು ಪಾತ್ರೆಯಲ್ಲಿ ಕಟ್​ ಮಾಡಿ ಪಾಲಕ್​ ಎಲೆಗಳ ಜೊತೆಗೆ ಸಣ್ಣಗೆ ಹೆಚ್ಚಿದ ಈರುಳ್ಳಿ ಪೀಸ್​ಗಳು, ಶುಂಠಿ, ಹಸಿ ಮೆಣಸಿನಕಾಯಿ, ಜೀರಿಗೆ, ಧನಿಯಾ ಪುಡಿ, ಉಪ್ಪು, ಅರಿಶಿನ, ಖಾರದ ಪುಡಿ, ಅಜವಾನ, ಅಕ್ಕಿ ಹಿಟ್ಟು ಮತ್ತು ಕಡಲೆಬೇಳೆ ಹಿಟ್ಟು ಸೇರಿಸಿ ಎಲ್ಲವನ್ನೂ ಒಮ್ಮೆ ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ.

ನಂತರ ಹಿಟ್ಟಿನ ಮಿಶ್ರಣಕ್ಕೆ ಎರಡು ಟೀಸ್ಪೂನ್ ಎಣ್ಣೆಯನ್ನು ಹಾಕಿ. ಈ ಹಿಟ್ಟಿನ ಮಿಶ್ರಣವನ್ನು ಚಮಚದೊಂದಿಗೆ ಸರಿಯಾಗಿ ಕಲಸಿಕೊಳ್ಳಿ. ಒಲೆ ಆನ್ ಮಾಡಿ ಕಡಾಯಿ ಇಟ್ಟು, ಅದರೊಳಗೆ ಡೀಪ್​ ಫ್ರೈ ಮಾಡಲು ಬೇಕಾಗುವಷ್ಟು ಎಣ್ಣೆ ಹಾಕಿಕೊಂಡು ಬಿಸಿ ಮಾಡಬೇಕಾಗುತ್ತದೆ. ಎಣ್ಣೆ ಚೆನ್ನಾಗಿ ಬಿಸಿಯಾದ ಬಳಿಕ ಅದರೊಳಗೆ ಪಾಲಕ್​ ಪಕೋಡಾಗಳನ್ನು ಒಂದೊಂದಾಗಿ ಬಿಡಬೇಕಾಗುತ್ತದೆ. ಗೋಲ್ಡನ್‌ ಬ್ರೌನ್ ಆಗುವವರೆಗೂ ಕರಿದರೆ ಪಾಲಕ್‌ ಪಕೋಡಾ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!