ದಿನಭವಿಷ್ಯ: ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ

ಮೇಷ
ಫಲಪ್ರದ ದಿನ. ಉದ್ಯೋಗದಲ್ಲಿ ಶುಭ ಸುದ್ದಿ. ಆರ್ಥಿಕ ಪ್ರಗತಿ. ಸಂಗಾತಿ ಜತೆಗೆ ಭಿನ್ನಮತ ಸಂಭವ. ನಿವಾರಣೆಗೆ ಕೆಲ ದಿನ ಬೇಕಾದೀತು.
ವೃಷಭ
ಪ್ರೀತಿಯ ವಿಷಯ ದಲ್ಲಿ ಎಚ್ಚರದಿಂದಿರಿ. ನಿಮ್ಮ ಹೆಸರು ಕೆಡುವ ಸಾಧ್ಯತೆಯಿದೆ.  ಹಣದ ಕೊರತೆ ನೀಗಲಿದೆ. ಆದರೂ ಖರ್ಚೂ ಹೆಚ್ಚಳ.
ಮಿಥುನ
ಈ ದಿನ ನಿಮ್ಮ ಪಾಲಿಗೆ ಶುಭಸೂಚಕ. ಗುರಿ ಸಾಧನೆ. ಆದಾಯದಲ್ಲಿ ಹೆಚ್ಚಳ. ಬಂಧುತ್ವ ವೃದ್ಧಿ. ಚರ್ಮದ ಕುರಿತು ಕಾಳಜಿ ವಹಿಸಿ.
ಕಟಕ
ನಿಮ್ಮ ಪ್ರಗತಿಗೆ ಒಡ್ಡಿರುವ ಅಡ್ಡಿಗಳು  ಇಂದು ನಿವಾರಣೆ ಕಾಣುತ್ತವೆ. ವಿಷಮ ಪರಿಸ್ಥಿತಿ ತಿಳಿಯಾಗಲಿದೆ. ಕೌಟುಂಬಿಕ ನೆಮ್ಮದಿ.
ಸಿಂಹ
ನಿಮ್ಮ ಸಂವಹನ ಸಾಮರ್ಥ್ಯವನ್ನು ಚೆನ್ನಾಗಿ ಬಳಸಿಕೊಳ್ಳಿ. ಅದರಿಂದ ನಿಮ್ಮ ಗುರಿ ಸಾಧಿಸುವಿರಿ. ದಂಪತಿ ಮಧ್ಯೆ ಕಲಹ ಏರ್ಪಡಬಹುದು.
ಕನ್ಯಾ
ದೈಹಿಕ ನೋವು ಇದ್ದರೆ ಇಂದು ನಿವಾರಣೆ. ಸರಿಯಾದ ಆಹಾರ ಸೇವಿಸಿರಿ. ಬಂಧುಮಿತ್ರರಿಂದ ಧನಾಗಮ. ಸಾಂಸಾರಿಕ ಮನಸ್ತಾಪ ಪರಿಹಾರ.
ತುಲಾ
ಯಾವುದೋ ವಿಷಯದಲ್ಲಿ ಆಯ್ಕೆಯ ಗೊಂದಲ ಕಾಡಲಿದೆ. ನಿಮ್ಮನ್ನು ಕಾಡುತ್ತಿದ್ದ ದೈಹಿಕ ನೋವು ಶಮನ ಕಾಣಲಿದೆ.
ವೃಶ್ಚಿಕ
ಮಾನಸಿಕ ಒತ್ತಡ. ಇದರಿಂದ ಮುಖ್ಯ ವಿಷಯಕ್ಕೆ ಗಮನ ಕೊಡಲು ಅಸಾಧ್ಯ. ಆರೋಗ್ಯ ಕೆಡಿಸುವ ಆಹಾರದಿಂದ ದೂರವಿರಿ.
ಧನು
ಸಹದ್ಯೋಗಿಗಳ ಜತೆ ಮಾತಿನಲ್ಲಿ ಎಚ್ಚರವಿಡಿ. ಅಹಿತಕರ ಬೆಳವಣಿಗೆ ಸಂಭವಿಸಬಹುದು. ಖಾಸಗಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ಕೊಡಿ.
ಮಕರ
ಇತರರ ಸಲಹೆ ಕೇಳುವಷ್ಟಕ್ಕೇ ನಿಮ್ಮ ಕಾರ್ಯ ಮುಗಿಯದು. ಅದನ್ನು ಪಾಲಿಸಲೂ ಬೇಕು. ದೈಹಿಕ ಕ್ಷಮತೆ ಕಾಪಾಡಲು ಗಮನ ಕೊಡಿ.
ಕುಂಭ
ಸಂತೋಷದ ದಿನ. ನಿಮ್ಮ ಕಾರ್ಯಸಿದ್ಧಿ. ಉತ್ತಮ ಫಲಪ್ರಾಪ್ತಿ. ಎಲ್ಲರಿಂದ ಬೆಂಬಲ ಪಡೆಯುವಿರಿ. ಆರ್ಥಿಕ ಬಿಕ್ಕಟ್ಟು ನಿವಾರಣೆ.
ಮೀನ
ಆತ್ಮೀಯ ಸಂಬಂಧ ಉಳಿಸಲು ಆದ್ಯತೆ ಕೊಡಿ. ಅವರ ಭಾವನೆಗೆ ಸ್ಪಂದಿಸಿರಿ. ಆಹಾರದಲ್ಲಿ ಹಿತಮಿತ ಸಾಧಿಸಿ, ಆರೋಗ್ಯ ಕಾಪಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!