ಹೊಸದಿಗಂತ ವರದಿ ಬನವಾಸಿ:
ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಸಮೀಪದ ಗುಡ್ನಾಪೂರ ಕೆರೆ ಸಂಪೂರ್ಣವಾಗಿ ತುಂಬಿದೆ.
ಕೆರೆ ತುಂಬಿರುವುದರಿಂದ ದಡದಲ್ಲಿರುವ ಐತಿಹಾಸಿಕ ಶ್ರೀ ಬಂಗಾರೇಶ್ವರ ದೇವಸ್ಥಾನ ಜಲಾವೃತವಾಗಿದ್ದು ಇಲ್ಲಿನ ಶಿವಲಿಂಗವು ಸಂಪೂರ್ಣವಾಗಿ ಮುಳುಗಿದೆ. ಭಕ್ತರು ನೀರಿನಲ್ಲಿ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ.