ನನ್ನ ಕ್ರಿಕೆಟ್ ವಿದಾಯದ ಹಿಂದಿದೆ ಈ ಇಬ್ಬರು ಆಟಗಾರರ ಪಾತ್ರ! ಹೊಸ ಬಾಂಬ್ ಸಿಡಿಸಿದ ಶಿಖರ್ ಧವನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದ ಕ್ರಿಕೆಟ್ ಲೋಕದಲ್ಲಿ ದೀರ್ಘಕಾಲ ಆರಂಭಿಕ ಬ್ಯಾಟರ್ ಆಗಿ ಮಿಂಚಿದ್ದ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಈಗ ಒಂದು ವರ್ಷವಾದರೂ, ಅವರ ವೃತ್ತಿಜೀವನದ ಅಂತ್ಯ ಹೇಗೆ ಮತ್ತು ಎಷ್ಟು ಶೀಘ್ರವಾಗಿ ಸಂಭವಿಸಿತು ಎಂಬ ಪ್ರಶ್ನೆ ಇಂದು ಕೂಡ ಗಮನ ಸೆಳೆಯುತ್ತಿದೆ. ತಾವು ಇಷ್ಟು ಬೇಗ ಕ್ರಿಕೆಟ್ ಬದುಕಿಗೆ ವಿದಾಯ ಹೇಳಬೇಕಾಗುತ್ತದೆ ಎಂಬ ಅಂದಾಜು ಶಿಖರ್‌ಗೂ ಇರಲಿಲ್ಲ.

2013ರಲ್ಲಿ ಆಸ್ಟ್ರೇಲಿಯಾದ ವಿರುದ್ಧದ ಟೆಸ್ಟ್ ಮೂಲಕ ಧವನ್ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅದ್ಬುತ ಬ್ಯಾಟಿಂಗ್‌ ಪ್ರದರ್ಶನದಿಂದ ಗಮನ ಸೆಳೆದ ಧವನ್, ಟೀಂ ಇಂಡಿಯಾದ ಆರಂಭಿಕ ಆಟಗಾರರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ, ದೇಶ ಕಂಡ ಅತ್ಯಂತ ಯಶಸ್ವಿ ಆರಂಭಿಕ ಜೋಡಿಗಳಲ್ಲಿ ಒಂದು ಎನಿಸಿಕೊಂಡಿತು.

ಆದರೆ ಕಳೆದ ವರ್ಷದ ಶುಭ್‌ಮನ್ ಗಿಲ್ ಹಾಗೂ ಇಶಾನ್ ಕಿಶನ್‌ ಅವರ ಉತ್ಕೃಷ್ಟ ಪ್ರದರ್ಶನದ ನಡುವೆಯೇ ಶಿಖರ್ ಧವನ್ ಅವರ ಕ್ರಿಕೆಟ್ ವೃತ್ತಿಜೀವನ ದಿಢೀರ್ ಅಂತ್ಯ ಕಂಡಿತು. ಖಾಸಗಿ ಮಾಧ್ಯಮ ಸಂದರ್ಶನದಲ್ಲಿ ಧವನ್ ಮಾತನಾಡಿದ್ದು, “ಇಶಾನ್ ಕಿಶನ್ ದ್ವಿಶತಕ ಸಿಡಿಸುತ್ತಿದ್ದಂತೆ ನನ್ನೊಳಗೆ ಕ್ರಿಕೆಟ್ ಬದುಕು ಕೊನೆಯಾಗುತ್ತಿದೆ ಎಂಬ ಭಾವನೆ ಮೂಡಿತು. ಇದಾದ ಮೇಲೆ ಯಾರನ್ನೂ ಸಂಪರ್ಕಿಸಲಿಲ್ಲ. ನಾನು ತಂಡದಿಂದ ಹೊರಗುಳಿದಿರುವ ಕುರಿತು ಬೇಸರವೂ ಇಲ್ಲ” ಎಂದಿದ್ದಾರೆ.

ಮತ್ತೊಂದು ಕಡೆ ಶುಭ್‌ಮನ್ ಗಿಲ್ ಆ ಸಮಯದಲ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರು. ಹೀಗಿದ್ದೂ ನಾನು ಏಕದಿನ ತಂಡದಲ್ಲಿದ್ದೆ. ಅಗ ನನಗೆ ಆಭಾಸವಾಗುತ್ತಿತ್ತು. ನನ್ನ ಕ್ರಿಕೆಟ್ ಬದುಕು ತುಂಬಾ ಜಾಸ್ತಿ ಸಮಯ ನಡೆಯುವುದಿಲ್ಲ ಎಂದು ಆದರೂ ಧವನ್ ತಮ್ಮ ವೃತ್ತಿಜೀವನದ ಬಗ್ಗೆ ಯಾವುದೇ ದುರಾಸೆ ಇಲ್ಲದೆ, ಇದೀಗ ಜೀವನವನ್ನು ಆನಂದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ 34 ಟೆಸ್ಟ್, 167 ಏಕದಿನ ಹಾಗೂ 68 ಟಿ20 ಪಂದ್ಯಗಳನ್ನಾಡಿದ ಧವನ್, ಭಾರತ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಆರಂಭಿಕರಲ್ಲೊಬ್ಬರಾಗಿದ್ದು, 2013ರ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಹಲವು ಐಸಿಸಿ ಟೂರ್ನಿಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!