ಹೊಸದಿಗಂತ ವರದಿ ಚಿಕ್ಕಮಗಳೂರು:
ನಗರದ ಫರ್ನೀಚರ್ ಅಂಗಡಿಯಲ್ಲಿ ಬಾಲ ಕಾರ್ಮಿಕನಾಗಿ ದುಡಿಯುತ್ತಿದ್ದ16 ವರ್ಷದ ಬಾಲಕನನ್ನು ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತರ ನೇತೃತ್ವದ ತಂಡ ದಾಳಿ ನಡೆಸಿ ರಕ್ಷಿಸಿದೆ. ಆತನನ್ನು ಬಾಲಮಂದಿರಕ್ಕೆ ಗುರುವಾರ ದಾಖಲಿಸಲಾಗಿದೆ.
ಸಹರಾ ಶಾದಿಮಹಲ್ ಸಮೀಪದ ಅಕ್ಸಾ ಫರ್ನಿಚರ್ ಪೀಠೋಪಕರಣ ಅಂಗಡಿಯಲ್ಲಿ ಅನೇಕ ತಿಂಗ ಳಿನಿಂದ ಉತ್ತರ ಪ್ರದೇಶದ ಬಾಲಕ ಕಾರ್ಮಿಕನಾಗಿದ್ದನು. ಈ ಸಂಬಂಧ ಸ್ಥಳೀಯ ಸಾರ್ವಜನಿಕರ ದೂರಿನ ಅನುಸಾರ ಗುರುವಾರ ಅಂಗಡಿ ದಾಳಿ ನಡೆಸಿದ ಕಾರ್ಮಿಕ ಇಲಾಖೆ ತಂಡ ಅಂಗಡಿ ಮಾಲೀಕರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ.
ಈ ಕುರಿತು ಮಾತನಾಡಿದ ಕಾರ್ಮಿಕ ಆಯುಕ್ತ ಸುಭಾಶ್ ಮಹಮದ್ ಫರಮಾನ್ ಎಂಬ ಬಾಲಕ ಮೂಲಃತ ಉತ್ತರ ಪ್ರದೇಶ ರಾಜ್ಯ ದವನು. ಅಕ್ಕನ ಮದುವೆಯ ಬಳಿಕ ನಗರದಲ್ಲೇ ನೆಲೆಸಿದ್ದು ವಿದ್ಯಾಭ್ಯಾಸಕ್ಕೆ ತೆರಳದ ಹಿನ್ನೆಲೆಯಲ್ಲಿ ಭಾವನೊಂದಿಗೆ ಫರ್ನಿಚರ್ ಅಂಗಡಿಯಲ್ಲಿ ಬಾಲ ಕಾರ್ಮಿಕನಾಗಿ ದುಡಿ ಯುತ್ತಿದ್ದನು ಎನ್ನಲಾಗಿದೆ.
ಸ್ಥಳೀಯ ನಿವಾಸಿಗಳ ಪ್ರಕಾರ ಅನೇಕ ತಿಂಗಳಿನಿಂದ ಇದೇ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು ಬಾಲಕ ಭವಿಷ್ಯ ಹಾಳಾಗದಂತೆ ಸ್ಥಳೀಯರು ದೂರಿನನ್ವಯ ದಾಳಿ ನಡೆಸಿ ಬಾಲಕನಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಅಂಗಡಿ ಮಾಲೀಕನಿಗೆ ೨೦ ಸಾವಿರ ದಂಡ ವಿಧಿಸಲಾಗಿದ್ದು ಬಾಲಕನಿಗೆ ೧೮ ವರ್ಷ ಪೂರ್ಣಗೊಳ್ಳುವರೆಗೆ ಪುರ್ವಸತಿ ಕೇಂದ್ರದಲ್ಲಿರಿಸಲು ಸೂಚಿಸಲಾಗಿದೆ ಎಂದರು.
ಶೀಘ್ರದಲ್ಲೇ ಬಾಲಕನ ಕುಟುಂಬವನ್ನು ಸಂಪರ್ಕಿಸಿ ಮುಂದಿನ ಭವಿಷ್ಯದ ರೂಪರೇಷೆ ಬಗ್ಗೆ ಚರ್ಚಿಸ ಲಾಗುವುದೆಂದು ಆಯುಕ್ತರು ತಿಳಿಸಿದರು. ಅಂಗಡಿ ಮಾಲೀಕನಿಗೆ ದಂಡ ವಿಧಿಸುವ ಜೊತೆಗೆ ಮುಂದೆ ಬಾಲ ಕಾರ್ಮಿಕರಿಂದ ದುಡಿಸಿಕೊಳ್ಳುವ ಪ್ರಕರಣಗಳು ಕಂಡುಬಂದಲ್ಲಿ ಕಾನೂನಾತ್ಮಕ ಶಿಸ್ತು ಕ್ರಮ ಕೈಗೊಳ್ಳಲಾ ಗು ವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಪ್ರವೀಣ್ಕುಮಾರ್, ಪ್ರಭಾಕರ್, ಕಾವ್ಯ ಮತ್ತು ಸ್ಥಳೀಯರು ಹಾಜರಿದ್ದರು.