Beauty Tips | ಚರ್ಮದ ಕಾಂತಿ ಹೆಚ್ಚಿಸುವ 3 ಸೂಪರ್‌ಫುಡ್‌ಗಳಿವು! ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಿ!

ಆರೋಗ್ಯದ ಬಗ್ಗೆ ಮಾತನಾಡುವಾಗ ಬಹುತೇಕ ಮಂದಿ ಹಣ್ಣುಗಳ ಸೇವನೆಯ ಮಹತ್ವವನ್ನು ಒಪ್ಪಿಕೊಳ್ಳುತ್ತಾರೆ. ಹಣ್ಣುಗಳು ನೈಸರ್ಗಿಕ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ, ಜೀರ್ಣಕ್ರಿಯೆ ಸುಧಾರಿಸಲು ಹಾಗೂ ದೇಹದ ಒಟ್ಟು ಆರೋಗ್ಯವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತವೆ. ಆದರೆ ಬಹುತೆಕ ಜನರಿಗೆ ಗೊತ್ತಿರದ ಸಂಗತಿಯೆಂದರೆ – ಹಣ್ಣುಗಳು ನಮ್ಮ ಚರ್ಮದ ಆರೋಗ್ಯಕ್ಕೂ ಅಷ್ಟೇ ಅತ್ಯಗತ್ಯ. ತ್ವಚೆಯನ್ನು ಹೊಳೆಯುವಂತೆ ಮತ್ತು ಯುವತ್ವ ಕಾಪಾಡಿಕೊಳ್ಳಲು, ಕೆಲವು ವಿಶಿಷ್ಟ ಹಣ್ಣುಗಳು ಅಪಾರವಾಗಿ ಸಹಕಾರಿಯಾಗುತ್ತವೆ.

ಆಧುನಿಕ ದಿನಚರಿಯಲ್ಲಿ ಮಾಲಿನ್ಯ, ಒತ್ತಡ ಮತ್ತು ತಪ್ಪಾದ ಆಹಾರ ಪದ್ಧತಿಗಳ ಪರಿಣಾಮವಾಗಿ ಚರ್ಮ ನಿಸ್ತೇಜವಾಗುವುದು ಸಾಮಾನ್ಯ. ಇದರಿಂದ ಚರ್ಮದ ಕಾಂತಿ ಕಡಿಮೆಯಾಗುವುದು, ಸುಕ್ಕುಗಳು, ಕಲೆಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಈ ಪರಿಸ್ಥಿತಿಯಲ್ಲಿ ಆಹಾರದಲ್ಲೇ ಪರಿಹಾರ ಹುಡುಕುವುದು ಹೆಚ್ಚು ಪರಿಣಾಮಕಾರಿಯಾಗಿದೆ. ಈ ಹಿನ್ನೆಲೆ ತ್ವಚೆಯ ಆರೋಗ್ಯವನ್ನು ಉತ್ತಮಗೊಳಿಸಬಲ್ಲ ಹಣ್ಣುಗಳ ವಿವರ ಇಲ್ಲಿದೆ:

ಆವಕಾಡೊ: ಚರ್ಮದ ಆರೈಕೆಯಲ್ಲಿ ಆವಕಾಡೊ ಒಂದು ಸೂಪರ್‌ಫುಡ್‌ ಎಂದು ಪರಿಗಣಿಸಲಾಗಿದೆ. ಇದು ವಿಟಮಿನ್ ಇ, ವಿಟಮಿನ್ ಸಿ ಮತ್ತು ಉತ್ತಮ ಕೊಬ್ಬುಗಳು ಸೇರಿದಂತೆ ಅನೇಕ ಪೋಷಕಾಂಶಗಳನ್ನು ಹೊಂದಿದ್ದು, ಚರ್ಮದ ತೇವಾಂಶವನ್ನು ಕಾಪಾಡುವಲ್ಲಿ ಮತ್ತು ಹಾನಿಯಿಂದ ರಕ್ಷಿಸುವಲ್ಲಿ ಸಹಾಯ ಮಾಡುತ್ತದೆ. ನಿಯಮಿತವಾಗಿ ಆವಕಾಡೊ ಸೇವನೆಯು ಮುಖದ ಸುಕ್ಕುಗಳನ್ನು ಕಡಿಮೆ ಮಾಡುವುದು, ಚರ್ಮವನ್ನು ಹೆಚ್ಚು ಮೃದುವಾಗಿ, ಕಾಂತಿಯುತವಾಗಿ ಮಾಡುತ್ತದೆ.

ಆವಕಾಡೊ ಒಂದು ಕಾಯಿ ಅಥವಾ ಮರದ ಹಣ್ಣೇ? ಸತ್ಯವನ್ನು ಅನ್ವೇಷಿಸಿ!

ಬೆರ್ರಿ ಹಣ್ಣುಗಳು: ಸ್ಟ್ರಾಬೆರಿ, ಬ್ಲ್ಯಾಕ್‌ಬೆರಿ, ಬ್ಲೂಬೆರಿ, ರಾಸ್ಪ್ಬೆರಿ ಹೀಗೆ ವಿವಿಧ ಬೆರ್ರಿ ಹಣ್ಣುಗಳು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ. ಇವು ಫ್ರೀ ರಾಡಿಕಲ್‌ಗಳನ್ನು ತಡೆದು, ಕಾಲಜನ್ ಉತ್ಪತ್ತಿಗೆ ಉತ್ತೇಜನ ನೀಡುತ್ತವೆ. ಕಾಲಜನ್ ಚರ್ಮದ ಬಿಗಿತ ಹಾಗೂ ತೂಕಸಮತೋಲನಕ್ಕೆ ಕಾರಣವಾಗಿದ್ದು, ಮೃದುವಾದ ತ್ವಚೆಗಾಗಿ ಅಗತ್ಯ.

ಬೆರ್ರಿಗಳನ್ನು ಹೇಗೆ ಸಂಗ್ರಹಿಸುವುದು

ಸಿಟ್ರಸ್ ಹಣ್ಣುಗಳು: ಕಿತ್ತಳೆ, ನಿಂಬೆ, ಕಿವಿ ಮತ್ತು ಟ್ಯಾಂಗರಿನ್ ಹೀಗೆ ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಯ ಅತ್ಯುತ್ತಮ ಮೂಲ. ಇವು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಿ, ಸುಕ್ಕುಗಳು, ಕಲೆಗಳು ಮತ್ತು ಕಪ್ಪು ರೇಖೆಗಳನ್ನು ತಡೆಯುವಲ್ಲಿ ನೆರವಾಗುತ್ತವೆ. ದಿನನಿತ್ಯ ಆಹಾರದಲ್ಲಿ ಈ ಹಣ್ಣುಗಳನ್ನು ಸೇರಿಸುವ ಮೂಲಕ, ನೈಸರ್ಗಿಕವಾಗಿ ಹೊಳೆಯುವ ಚರ್ಮವನ್ನು ಪಡೆಯುವುದು ಸುಲಭ.

ಸಿಟ್ರಸ್ ಹಣ್ಣುಗಳೊಂದಿಗೆ ನಿಮ್ಮ ಇಂದ್ರಿಯಗಳನ್ನು ಹೆಚ್ಚಿಸಿ - ಮೇಯೊ ಕ್ಲಿನಿಕ್ ಹೆಲ್ತ್  ಸಿಸ್ಟಮ್

ಹೆಚ್ಚಿನ ಹಣ ಖರ್ಚುಮಾಡದೇ ತ್ವಚೆಯ ಆರೋಗ್ಯವನ್ನು ಸುಧಾರಿಸಲು ಈ ಹಣ್ಣುಗಳ ಸೇವನೆಯು ಒಂದು ಸಾದಾ, ಆದರೆ ಪರಿಣಾಮಕಾರಿಯಾದ ಮಾರ್ಗವಾಗಿದೆ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!