April 24, 2026
Friday, April 24, 2026
spot_img

ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR: ಈ ಬಾರಿ ಏನು ಮಾಡಿದ್ರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಈ ಹಿಂದೆ ಮಚ್ಚು ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ರಜತ್ ಇದೀಗ ಮೈಸೂರಿನ ಪಾರಂಪರಿಕ ಕಟ್ಟಡದ ಬಳಿ ವಿಲನ್ ಪಾತ್ರದಲ್ಲಿ ಸಿಗರೇಟ್ ಹಿಡಿದು ಫೋಟೋಶೂಟ್ ಮಾಡಿದ್ದಕ್ಕೆ ಮೈಸೂರಿನ ಲಕ್ಷ್ಮಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಜತ್ ವಿಲನ್ ಪಾತ್ರದಲ್ಲಿ ಕಾರ್ ನಲ್ಲಿ ಎಂಟ್ರಿಕೊಟ್ಟು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಮೈಸೂರಿನ ಹಳೆ ಡಿಸಿ ಕಚೇರಿಯ ಬಳಿ ಪಾರಂಪರಿಕ ಕಟ್ಟಡದ ಬಳಿ ಫೋಟೋ ಶೂಟ್ ಮಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ಇದೀಗ ಕನ್ನಡಪರ ಹೋರಾಟಗಾರರು ಮೈಸೂರಿನ ಲಕ್ಷ್ಮಿಪುರ ಪೊಲೀಸ್ ಠಾಣೆಗೆ ರಜತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !