FOOD | ಬಟಾಣಿ ಇಷ್ಟ ಇಲ್ಲ ಅನ್ನೋರು ಒಮ್ಮೆ ಪೀಸ್ ಪುಲಾವ್ ಟ್ರೈ ಮಾಡಿ! ಆಮೇಲೆ ಇದು ಫೇವರಿಟ್ ಆಗೋದು ಖಂಡಿತ

ಎಷ್ಟು ಜನಕ್ಕೆ ಬಟಾಣಿ ಇಷ್ಟವೋ ಗೊತ್ತಿಲ್ಲ, ಆದ್ರೆ ಪೀಸ್ ಪುಲಾವ್ ಅಂದ್ರೆ ಎಲ್ಲರಿಗೂ ಇಷ್ಟ! ಫಟಾಫಟ್ ಲಂಚ್ ಬೇಕಿದ್ರೆ, ಫ್ರೈಡ್ರೈಸ್ ಬಿಟ್ಟು ಈ ಪುಲಾವ್ ಒಮ್ಮೆ ಮಾಡಿ ನೋಡಿ… ಅಡಿಗೆ ಮನೆಯೇ ಖುಷಿ ಆಗುತ್ತೆ ಪಕ್ಕಾ!

ಬೇಕಾಗುವ ಪದಾರ್ಥಗಳು:

ಸೋನಾ ಮಸೂರಿ ಅಕ್ಕಿ – 1 ಕಪ್
ಹಸಿರು ಬಟಾಣಿ – 1 ಕಪ್
ಈರುಳ್ಳಿ – 1
ದಾಲ್ಚಿನ್ನಿ ತುಂಡು – 1′ ತುಂಡು
ಏಲಕ್ಕಿ – 1
ಬೇ ಎಲೆಗಳು – 1
ಲವಂಗ – 2
ಜೀರಿಗೆ – 1/4 ಟೀಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1/2 ಟೀಸ್ಪೂನ್
ಅರಿಶಿನ ಪುಡಿ – 1/4 ಟೀಸ್ಪೂನ್
ಗರಂ ಮಸಾಲ – 1 ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಹಸಿರು ಮೆಣಸಿನಕಾಯಿ – 2
ನೀರು – 2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ – ಸ್ವಲ್ಪ

ಮಾಡುವ ವಿಧಾನ:

ಅಕ್ಕಿಯನ್ನು ತೊಳೆದು 15 ನಿಮಿಷ ನೆನೆಸಿ. ಈಗ ಪ್ರೆಶರ್ ಕುಕ್ಕರ್‌ನಲ್ಲಿ 2 ಟೀಸ್ಪೂನ್ ಎಣ್ಣೆ, ಬೇ ಎಲೆಗಳು, ಲವಂಗ, ದಾಲ್ಚಿನ್ನಿ, ಏಲಕ್ಕಿ ಮತ್ತು ಜೀರಿಗೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಈರುಳ್ಳಿ, ನಂತರ ಹಸಿಮೆಣಸು, ಅರಿಶಿನ ಪುಡಿ ಸೇರಿಸಿ ಫ್ರೈ ಮಾಡಿ.

ಈಗ ಹಸಿ ಬಟಾಣಿ, ಅಕ್ಕಿ, ಗರಂ ಮಸಾಲ, ಕೊತ್ತಂಬರಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದಕ್ಕೆ ನೀರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು 1 ಚಮಚ ಎಣ್ಣೆ ಸೇರಿಸಿ ಮುಚ್ಚಳ ಮುಚ್ಚಿ 3 ಸೀಟಿ ಬರುವವರೆಗೆ ಪ್ರೆಶರ್ ಕುಕ್ ಮಾಡಿದರೆ ಪೀಸ್ ಪುಲಾವ್ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!