ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಲೇಡಿಸ್ ಬಾರ್ಗಳಲ್ಲಿ ನಿಯಮ ಉಲ್ಲಂಘನೆಯಾಗುತ್ತಿವೆ ಎಂಬ ಆರೋಪಗಳು ಆಗಾಗ ಕೇಳಿಬರುತ್ತಿವೆ. ಈ ಹಿಂದೆ ಯುವತಿಯರು ಅರ್ಧಂಬರ್ಧ ಬಟ್ಟೆ ತೊಟ್ಟು ಸರ್ವಿಸ್ ಮಾಡುತ್ತಿರುವುದು ದಾಳಿ ವೇಳೆ ಬೆಳಕಿಗೆ ಬಂದಿತ್ತು. ಈಗ ನಿಯಮ ಉಲ್ಲಂಘನೆ ತಡೆಗೆ ಸಿಸಿಬಿ ಹೊಸ ನಿಯಮಕ್ಕೆ ಮುಂದಾಗಿದೆ.
ಹಲವಾರು ಬಾರಿ ದಾಳಿ ಮಾಡಿ ಎಚ್ಚರಿಕೆ ಕೊಟ್ಟರು ಏನು ಪ್ರಯೋಜನವಾಗದ ಹಿನ್ನೆಲೆ, ನಿಯಮಗಳ ಉಲ್ಲಂಘನೆಗೆ ಸಿಸಿಬಿ ಹೊಸ ರೂಲ್ಸ್ ಮಾಡಿದೆ. ಪ್ರತಿದಿನದ ಸಿಸಿಟಿವಿ ವಿಡಿಯೋ ತುಣುಕನ್ನು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕೆಂದು ಸೂಚಿಸಲಾಗಿದೆ.
ಪೆನ್ಡ್ರೈವ್ ಅಥವಾ ಸಿಡಿಗೆ ಹಾಕಿ ವಿಡಿಯೋ ನೀಡಬೇಕು. ಸಿಸಿಟಿವಿ ವೀಕ್ಷಣೆ ವೇಳೆ ತಪ್ಪು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.