ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ತಾವು ಪ್ರತಿನಿಧಿಸುವ ಮಂಡ್ಯ ಜಿಲ್ಲೆಗೆ 25 ಸಾವಿರ ಕೋಟಿ ರೂ. ಅನುದಾನ ಕೊಡಿಸಲಿ’ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸವಾಲು ಹಾಕಿದ್ದಾರೆ.
ಲೋಕಸಭೆಯಲ್ಲಿ ತಾವು ಪ್ರತಿನಿಧಿಸುವ ಜಿಲ್ಲೆಗೆ ಕುಮಾರಸ್ವಾಮಿ ಅವರು ಪ್ರಮುಖ ಕಾರ್ಯಕ್ರಮ ತಂದರೆ ನಾವು ಅವರನ್ನು ಪ್ರಶಂಸಿಸುತ್ತೇವೆ ಮತ್ತು ಸ್ವಾಗತಿಸುತ್ತೇವೆ ಎಂದು ಹೇಳಿದರು.
ಕೇಂದ್ರ ಸಚಿವರಾಗಿ ಮಂಡ್ಯ ಆಟೊರಿಕ್ಷಾ ನಿಲ್ದಾಣ ನಿರ್ಮಾಣಕ್ಕೆ ರೂ.30 ಲಕ್ಷ ಅನುದಾನ ಕೊಟ್ಟಿದ್ದಾರೆ. ಸಂಸದರಿಗೆ ರೂ.5 ಕೋಟಿ ಅನುದಾನ ಬರುತ್ತದೆ, ಅದರಲ್ಲಿ ನೀಡಿದ್ದಾರೆ. ಈ ಕೆಲಸವನ್ನು ಹಿಂದಿನ ಸಂಸದೆ ಸುಮಲತಾ ಕೂಡ ಮಾಡಿದ್ದರು. ಎಲ್ಲರೂ ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು.
‘ನಮಗೂ, ಅವರಿಗೂ, ಶಾಸಕ, ಸಂಸದರಿಗೂ ನಿಧಿ ಬರುತ್ತದೆ. ಅದನ್ನು ಎಲ್ಲರೂ ಖರ್ಚು ಮಾಡುತ್ತಾರೆ. ಆದರೆ, ಕುಮಾರಸ್ವಾಮಿ ದೊಡ್ಡ ಮಂತ್ರಿ ಆಗಿದ್ದಾರೆ. ರಾಜ್ಯಕ್ಕೆ ಬರಬೇಕಾದ ತೆರಿಗೆ ಬಾಕಿಯನ್ನು ಕೊಡಿಸಲಿ. ಅದನ್ನು ಬಿಟ್ಟು ಸಹಜವಾಗಿಯೇ ಬರುವ ಲೋಕಸಭಾ ಸದಸ್ಯರ ನಿಧಿ ತರುವುದರಲ್ಲೇನು ವಿಶೇಷವಿದೆ?’ ಎಂದು ಟೀಕಿಸಿದರು.