ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ನೀರಜ್ ಚೋಪ್ರಾ ಕ್ಲಾಸಿಕ್-2025 ಅಂತಾರಾಷ್ಟ್ರೀಯ ಜಾವೆಲಿನ್ ಕೂಟದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪಾಲ್ಗೊಂಡು ಕೂಟವನ್ನು ವೀಕ್ಷಿಸಿದರು.
ಈ ಸಂದಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ ಪರಮೇಶ್ವರ್, ಸೇರಿ ಹಲವು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೀರಜ್ ಚೋಪ್ರಾ, ಅಥ್ಲೆಟಿಕ್ಸ್ ಬಹಳ ಸುಂದರವಾದ ಕ್ರೀಡೆ. ರಾಷ್ಟ್ರೀಯ, ರಾಜ್ಯಕೂಟಗಳಲ್ಲಿ ಮಕ್ಕಳು ಪಾಲ್ಗೊಳ್ಳಬೇಕು. ಪಾಲಕರು, ಶಿಕ್ಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬರಬೇಕು. ಜಿಗಿತ, ಓಟ, ಎಸೆತೆಗಳ ಕುರಿತು ತಿಳವಳಿಕೆ ಮಕ್ಕಳಿಗೆ ನೀಡಬೇಕು. ಆಗ ಈ ಕ್ರೀಡೆಗಳಲ್ಲಿಯೂ ಆಸಕ್ತಿ ಬೆಳೆಯುತ್ತದೆ. ಅದರಿಂದ ಕ್ರೀಡೆಯೂ ಬೆಳೆಯುತ್ತದೆ. ಬೆಂಗಳೂರು ಜನ ಕ್ರೀಡಾಪ್ರಿಯರು ಎಂದು ಹೇಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ