ಬೆಳಗ್ಗೆ ಆಫೀಸ್ ಗೆ ಹೋಗೋ ಅರ್ಜೆಂಟ್ ನಲ್ಲಿದ್ದೀರಾ? ಏನು ತಿಂಡಿ ಮಾಡಬೇಕು ಅಂತ ಗೊತ್ತಾಗ್ತಿಲ್ವ? ಇವತ್ತು ನಿಮಗೊಂದು ಸಿಂಪಲ್ ಸ್ಯಾಂಡ್‌ವಿಚ್ ರೆಸಿಪಿ ಹೇಳಿಕೊಡ್ತೀವಿ..
ಬೇಕಾಗುವ ಪದಾರ್ಥಗಳು:
2 ಬ್ರೆಡ್ ಸ್ಲೈಸ್
2 ಟೀ ಚಮಚ ಬೆಣ್ಣೆ
1 ಚಮಚ ಪೀನಟ್ ಬಟರ್
1 ಚಮಚ ಸ್ಟ್ರಾಬೆರಿ ಜೆಲ್ಲಿ (ಅಥವಾ ನಿಮ್ಮ ಆಯ್ಕೆಯ ಯಾವುದೇ ಫ್ಲೇವರ್)
ಮಾಡುವ ವಿಧಾನ:
ಮೊದಲಿಗೆ ಒಂದು ಬ್ರೆಡ್ ಸ್ಲೈಸ್ ತೆಗೆದುಕೊಂಡು, ಒಂದು ಬದಿಯಲ್ಲಿ ಪೀನಟ್ ಬಟರ್ ಅನ್ನು ಸಮವಾಗಿ ಹರಡಿ. ಇನ್ನೊಂದು ಬ್ರೆಡ್ ಸ್ಲೈಸ್ ತೆಗೆದುಕೊಂಡು ನಿಮ್ಮ ನೆಚ್ಚಿನ ಜೆಲ್ಲಿಯನ್ನು ಸ್ಪ್ರೆಡ್ ಮಾಡಿ.
ಈಗ ಎರಡೂ ಬ್ರೆಡ್‌ಗಳನ್ನು ಒಟ್ಟಿಗೆ ಇರಿಸಿ ಸ್ಯಾಂಡ್‌ವಿಚ್ ಅನ್ನು ರೆಡಿ ಮಾಡಿ. ಒಂದು ಪ್ಯಾನ್ ಬಿಸಿ ಮಾಡಿ ಸ್ಯಾಂಡ್‌ವಿಚ್‌ನ ಎರಡೂ ಬದಿಗಳಲ್ಲಿ ಬೆಣ್ಣೆ ಹಚ್ಚಿ ಪ್ಯಾನ್ ಮೇಲೆ ಹಾಕಿ ಎರಡು ಬದಿ ಗೋಲ್ಡನ್ ಬ್ರೌನ್ ಆಗುವವರೆಗೆ ರೋಸ್ಟ್ ಮಾಡಿದರೆ ಪೀನಟ್ ಬಟರ್ ಅಂಡ್ ಜೆಲ್ಲಿ ಸ್ಯಾಂಡ್‌ವಿಚ್ ರೆಡಿ.