ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಟೋದಡಿ ಸಿಲುಕಿ ಮೂರು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ರಾಮನಾಥಪುರಂನ ಚಿನ್ನ ಕಡೈ ಬೀದಿಯಲ್ಲಿ ನಡೆದಿದೆ.
ಮನೆಯ ಹೊರಗೆ ಆಟವಾಡುತ್ತಿದ್ದ ಮಗು ಅಚಾನಕ್ಕಾಗಿ ಆಟೋದಡಿ ಸಿಲುಕಿ ಉಸಿರುಚೆಲ್ಲಿದೆ.ಮೂರು ವರ್ಷದ ಬಾಲಕಿ ಮನೆಯಲ್ಲಿ ಆಟವಾಡುತ್ತಿದ್ದಳು, ಇದ್ದಕ್ಕಿದ್ದಂತೆ ಕಿರಿದಾದ ಬೀದಿಗೆ ಹೋಗಿದ್ದಾಳೆ.
ಅದೇ ಸಮಯದಲ್ಲಿ ಆಟೋ ಆ ಮಗುವಿನ ಮೇಲೆ ಹತ್ತಿದೆ. ಸ್ಥಳದಲ್ಲಿದ್ದ ಜನರು ಕಿರುಚಾಡುತ್ತಾ ಮಗುವಿನ ಕಡೆಗೆ ಧಾವಿಸುತ್ತಾರೆ. ಆಟೋ ಚಾಲಕ ಕೂಡಾ ಇಳಿದು ಮಗುವಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ಅಪಘಾತದಲ್ಲಿ ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ನಂತರ ಆಕೆಯ ಸಂಬಂಧಿಕರು ಆಟೋದಲ್ಲಿಯೇ ಸಮೀಪದ ಆಸ್ಪತ್ರೆಗೆ ಸಾಗಿಸುತ್ತಾರೆ. ಆದರೆ ಅಷ್ಟರಲ್ಲೇ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.