ಫ್ಯಾಷನ್ ಶೋವೊಂದು ನಡೆಯುತ್ತಿದ್ದರೆ ಆ ಸ್ಟೇಜ್ ಗೆ ಮೆರುಗು ನೀಡುವವರು ಮಾಡೆಲ್‌ಗಳೇ. ಆಕರ್ಷಕ ಉಡುಗೆ, ವಿಭಿನ್ನ ಕೇಶ ವಿನ್ಯಾಸ ಮತ್ತು ಗಂಭೀರ ಮುಖಭಾವ ಅವರ ವೈಶಿಷ್ಟ್ಯ. ಆದರೆ ಬಹುತೇಕ ಫ್ಯಾಷನ್ ಶೋಗಳಲ್ಲಿ ಅವರು ರ‍್ಯಾಂಪ್ ವಾಕ್ ಮಾಡುವಾಗ ನಗುವುದಿಲ್ಲ. ಈ ನಗೆಯ ಕೊರತೆ ಹಲವರ ಗಮನ ಸೆಳೆಯುತ್ತದೆ. ಏಕೆ ಮಾಡೆಲ್‌ಗಳು ನಗದೇ ಗಂಭೀರ ಮುಖವನ್ನೇ ತೋರುತ್ತಾರೆ? ಇದರ ಹಿಂದೆ ಕಾರಣವೇನು ಎಂಬುದು ಈಗ ಬಹಳಷ್ಟು ಜನರ ಕುತೂಹಲವಾಗಿದೆ.
ಬಟ್ಟೆ ಮತ್ತು ವಿನ್ಯಾಸದ ಮೇಲೆ ಗಮನ ಸೆಳೆಯಲು
ಮಾಡೆಲ್‌ಗಳು ರ‍್ಯಾಂಪ್‌ನಲ್ಲಿ ತೊಡುವ ಉಡುಗೆಗಳು ಬಹುಷಃ ಪ್ರೇಕ್ಷಕರಿಗೆ ಹೊಸಡಾಗಿರುತ್ತವೆ. ವಿಚಿತ್ರ ವಿನ್ಯಾಸ, ವಿಶಿಷ್ಟ ಶೈಲಿ ಎಲ್ಲವೂ ಫ್ಯಾಷನ್ ಜಗತ್ತಿನಲ್ಲಿ ಹೊಸದಾಗಿರುತ್ತದೆ. ಈ ಉಡುಗೆಯನ್ನು ಹೇಗೆ ತೋರಿಸಬೇಕು ಎಂಬುದೂ ಒಂದು ಕಲೆ. ಮುಖದಲ್ಲಿ ನಗು ಇದ್ದರೆ ಪ್ರೇಕ್ಷಕರ ಗಮನ ತಕ್ಷಣವಾಗಿಯೇ ಆ ನಗುವಿನ ಕಡೆ ಹೋಗುತ್ತದೆ. ಹೀಗಾಗಿ, ಆಕರ್ಷಣೆ ಬಟ್ಟೆಗಿಂತ ಮುಖದತ್ತ ಸಾಗದಂತೆ ಮಾಡಲು ಗಂಭೀರತೆಯ ಜೊತೆ ವೇದಿಕೆಯಲ್ಲಿ ನಡೆಯುತ್ತಾರೆ.
ಫ್ಯಾಷನ್ ಶೋಗಳು ಸಾಮಾನ್ಯವಾಗಿ ಗಂಭೀರ ಮತ್ತು ಕ್ರಿಯೇಟಿವ್ ಆಗಿರುತ್ತವೆ. ಮಾಡೆಲ್‌ಗಳು ನಗುತ್ತಾ ರ‍್ಯಾಂಪ್ ವಾಕ್ ಮಾಡಿದರೆ, ಅದು ಶೋನ ತೀವ್ರತೆಗೆ ತೊಂದರೆ ನೀಡಬಹುದು. ವೇದಿಕೆಯ ಮೇಲೆ ಪ್ರತಿಯೊಬ್ಬರ ಸ್ಥಿತಿ, ಚಲನೆಗಳು ಎಲ್ಲವೂ ನಿಯಂತ್ರಿತವಾಗಿರಬೇಕು. ನಗು ಕೊಡುವುದರಿಂದ ಕೆಲವೊಮ್ಮೆ ತೀವ್ರತೆ ಕಳೆದುಕೊಳ್ಳಬಹುದು.
ರ‍್ಯಾಂಪ್‌ನಲ್ಲಿ ನಡೆವ ಮಾಡೆಲ್‌ಗಳು ತಮ್ಮನ್ನು crowd ನಲ್ಲಿ ವಿಭಿನ್ನವಾಗಿ ತೋರಿಸಿಕೊಳ್ಳಬೇಕೆಂದು ಆಶಿಸುತ್ತಾರೆ. ನಗು – ಸಾಮಾನ್ಯ ವ್ಯಕ್ತಿಯ ನೈಸರ್ಗಿಕ ಪ್ರತಿಕ್ರಿಯೆ. ಆದರೆ ಗಂಭೀರ ಮುಖವಾಡ, ಬೇರೆಯವರು ತಮ್ಮತ್ತ ನೋಡುವಂತೆ ತೋರುವ ಶೈಲಿ – ಇವು ಎಲ್ಲವೂ “ನಾನು ವಿಶಿಷ್ಟ” ಎಂಬ ಸಂದೇಶವನ್ನು ಸಾರಲು ಸಹಕಾರಿ.
ವೈಜ್ಞಾನಿಕವಾಗಿ ನೋಡಿ, ನಗು ಎಂದರೆ ಆತ್ಮೀಯತೆ. ಇದು ಎದುರಿನವನಲ್ಲಿ ಭದ್ರತೆ ಮತ್ತು ಸಮಾನತೆಯ ಭಾವನೆಯನ್ನು ಹುಟ್ಟಿಸುತ್ತದೆ. ಆದರೆ ರ‍್ಯಾಂಪ್‌ನಲ್ಲಿ ಮಾಡೆಲ್‌ಗಳು ಈ ಭಾವನೆ ಕೊಡಬಾರದು. ಅವರು ಮಾತನಾಡುವುದಕ್ಕೋ ಅಥವಾ ಸಂಪರ್ಕ ಸಾಧಿಸುವ ಉದ್ದೇಶವಿರಲ್ಲ. ಹೀಗಾಗಿ, ನಗುವುದನ್ನೇ ತಪ್ಪಿಸುತ್ತಾರೆ.
ಹೀಗಾಗಿ ಮಾಡೆಲ್‌ಗಳು ರ‍್ಯಾಂಪ್‌ನಲ್ಲಿ ನಗುವುದಿಲ್ಲ ಎಂದರೆ ಅದು ಅವರ ಗುಣವಲ್ಲ, ಅದು ಪ್ರಸ್ತುತಿಯ ಭಾಗ. ಅವರ ಚಲನೆಯಲ್ಲೂ, ತೊಡುಗೆಯಲ್ಲೂ, ಮುಖಭಾವದಲ್ಲೂ ಒಂದು ಉದ್ದೇಶ, ಶೈಲಿ ಮತ್ತು ಪ್ರಭಾವವಿರುತ್ತದೆ.