ಹೊಸದಿಗಂತ ವರದಿ ಗದಗ :
ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದೇಶವಾಗಿದೆ. ಇದೊಂದು ಬಿಟ್ಟರೆ ನನಗೇನು ಗೊತ್ತಿಲ್ಲ ಈ ವಿಚಾರವಾಗಿ ಎನು? ಕೇಳಬೇಡಿ ಎಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದರು.
ಮೂರು ವರ್ಷಗಳ ಕಾಲ ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ ಇದನ್ನೇ ಹೇಳುತ್ತಾ ಬಂದಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಯವರಿಗೆ ಪ್ಯಾಕೇಜ್ ಡೀಲ್ ಎಂದು ವ್ಯಂಗ್ಯ ಮಾಡಿದ ಅವರು ಇಷ್ಟು ದಿನ ಗ್ಯಾರಂಟಿ ಕೊಡಲ್ಲ ಎನ್ನುತ್ತಿದ್ದರು ಈಗ ನಾವು ಗ್ಯಾರಂಟಿ ವಿರೋಧಿಗಳಲ್ಲ ಎನ್ನುತ್ತಿದ್ದಾರೆ.
ಯಾಕೆಂದರೆ ಜನ ಉಗಿತಾರೆ ಎಂದು ಬಿಜೆಪಿಯವರಿಗೆ ಗೊತ್ತಾಗಿದೆ. ಗ್ಯಾರಂಟಿ ಬಗ್ಗೆ ನಮ್ಮ ಶಾಸಕರು ಯಾರು ವಿರೋಧ ಮಾಡಿಲ್ಲ, ನಾವು ಹೇಳಿದ್ದೊಂದು ನೀವು ಬರೆಯೋದೊಂದು ರಾಯರೆಡ್ಡಿ ಗ್ಯಾರಂಟಿ ಬಗ್ಗೆ ವಿರೋಧ ಮಾಡಿಲ್ಲ ಯಾರೇನೇ ತಿಪ್ಪರಲಾಗ ಹಾಕಿದ್ರೂ ಐದು ವರ್ಷ ಗ್ಯಾರಂಟಿ ನಿಲ್ಲುವುದಿಲ್ಲ ಅಲ್ಲದೆ, ಪ್ರಣಾಳಿಕೆಯ ಉಪಾಧ್ಯಕ್ಷನಾಗಿರುವ ನನಗೆ ಹೆಮ್ಮೆ ಇದೆ ಎಂದಿದ್ದಾರೆ.