ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟನೆಯಿಂದ ರಾಜಕೀಯಕ್ಕೆ ತೆರಳಿದ್ದ ಸ್ಮೃತಿ ಇರಾನಿ ಅವರು ಇದೀಗ ಮತ್ತೆ ಧಾರವಾಹಿಯತ್ತ ಮುಖಮಾಡಿದ್ದಾರೆ. ಟೆಲಿವಿಷನ್‌ನಲ್ಲಿ ಪ್ರಸಾರವಾದ ಕ್ಯೂ ಕಿ ಸಾಸ್ ಭಿ ಕಭಿ ಬಹು ಥಿ ಧಾರಾವಾಹಿ ಸ್ಮೃತಿ ಅವರಿಗೆ ಸಿಕ್ಕಾಪಟ್ಟೆ ಹೆಸರು ತಂದುಕೊಟ್ಟಿತ್ತು.
ಇದೀಗ ಅದೇ ಸೀರಿಯಲ್ ಮೂಲಕ ಸ್ಮೃತಿ ಕಮ್‌ಬ್ಯಾಕ್ ಮಾಡಲಿದ್ದಾರೆ. ಕ್ಯೂ ಕಿ ಸಾಸ್ ಭಿ ಕಭಿ ಬಹು ಥಿ ಸೀರಿಯಲ್ ಕೂಡ ಮತ್ತೆ ಬರುತ್ತಿದ್ದು, ಇದರಲ್ಲಿ ಸ್ಮೃತಿ ಪ್ರಮುಖ ಪಾತ್ರವೊಂದನ್ನು ಮಾಡುತ್ತಿದ್ದಾರೆ. ಈ ಬಾರಿಯೂ ಸ್ಮೃತಿ ಇರಾನಿ ಅವರು ತುಳಸಿ ಎಂಬ ಪಾತ್ರದಲ್ಲಿ ನಟಿಸಲಿದ್ದಾರೆ. ಅವರನ್ನು ಮತ್ತೆ ಕಿರುತೆರೆಯಲ್ಲಿ ನೋಡಲು ಫ್ಯಾನ್ಸ್ ಕಾತರರಾಗಿದ್ದಾರೆ.
ಕೆಲವು ದಿನಗಳ ಹಿಂದೆ ಸ್ಮೃತಿ ಇರಾನಿ ಅವರು ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಧಾರಾವಾಹಿಯ 25ನೇ ವರ್ಷವನ್ನು ಸಂಭ್ರಮಿಸಿದ್ದರು. ‘25 ವರ್ಷಗಳ ಹಿಂದೆ ಭಾರತದ ಮನೆಗಳಿಗೆ ಈ ಕಥೆ ತಲುಪಿತ್ತು. ಅಸಂಖ್ಯಾತ ಜನರ ಬದುಕಿನ ಭಾಗವೇ ಆಗಿತ್ತು. ಅದು ಕೇವಲ ಧಾರಾವಾಹಿ ಆಗಿರಲಿಲ್ಲ. ಅದು ಭಾವನೆ, ನೆನಪು ಮತ್ತು ಆಚರಣೆಯೇ ಆಯಿತು’ ಎಂದು ಸ್ಮೃತಿ ಇರಾನಿ ಪೋಸ್ಟ್ ಮಾಡಿದ್ದರು.