ಮೇಷ.
ವೃತ್ತಿಯಲ್ಲಿ ಎಲ್ಲ ಸುಸೂತ್ರ. ಹಾಗಾಗಿ ವಿಶ್ವಾಸ ಅಧಿಕ. ಮೇಲಧಿಕಾರಿಗಳ ಪ್ರಶಂಸೆ. ಸಂಬಂಧದಲ್ಲಿ ಬಿರುಕು ಮೂಡದಂತೆ ಎಚ್ಚರ ವಹಿಸಿರಿ.
ವೃಷಭ
ನಿಮ್ಮ ಬದುಕಿನ ಮೇಲೆ ತಕ್ಷಣ ಪರಿಣಾಮ ಬೀರಬಲ್ಲ ವಿಷಯದತ್ತ ಹೆಚ್ಚು ಗಮನ ಹರಿಸಿ. ಬೇರೆಲ್ಲ ವಿಚಾರ ಬದಿಗೆ ಸರಿಸಿ. ದೃಢ ನಿಲುವಿರಲಿ.
ಮಿಥುನ
ನಿಮಗೆ ಸಂಬಂಧ ಪಡದ ವಿಚಾರದಲ್ಲೂ ಏಕೆ ಚಿಂತೆ ಮಾಡುವಿರಿ? ವೈಯಕ್ತಿಕ ಹಿತಾಸಕ್ತಿಗೆ ಗಮನ ಕೊಡಿ. ಆಪ್ತರ ಜತೆ ಸಮಾಲೋಚಿಸಿ.
ಕಟಕ
ಶುಭಪ್ರದ ಸಂಕೇತ ಇಂದು ತೋರಿ ಬರಲಿದೆ. ಸದ್ಯದಲ್ಲೆ ನಿಮ್ಮ ಮುಖ್ಯ ಚಿಂತೆಯೊಂದು ಪರಿಹಾರ ಕಾಣಲಿದೆ. ಪೂರಕ ಸನ್ನಿವೇಶ ಸೃಷ್ಟಿ.
ಸಿಂಹ
ಯಾವುದೇ ಕೊರತೆ ಇಂದು ಬಾಽಸದು.ನೀವು ಇಚ್ಛಿಸಿದಂತೆ ಸಾಗುವುದು. ಆದರೂ ನಿಮಲ್ಲಿ ಅಸಂತೃಪ್ತಿ. ಹೇಳಲಾಗದ ಬೇಸರ ಕಾಡುವುದು.
ಕನ್ಯಾ
ಒತ್ತಡ ಹಾಗೂ ಬಸವಳಿಕೆ. ಬಯಸಿದ ಕಾರ್ಯ ಹದ ತಪ್ಪಿ ಹೋದೀತು. ಸಂಬಂಧದಲ್ಲಿ ಋಣಾತ್ಮಕ ಚಿಂತನೆ ನುಸುಳಬಹುದು.
ತುಲಾ
ಸಂವಹನ ಕಲೆಯಲ್ಲಿ ನೀವು ನಿಪುಣರು. ಇದು ನಿಮಗೆ ಹೆಚ್ಚು ನೆರವಿಗೆ ಬರಲಿದೆ. ಅನಿರೀಕ್ಷಿತ ಕ್ಷೇತ್ರದಿಂದ ಧನಲಾಭ ಉಂಟಾಗಬಹುದು.
ವೃಶ್ಚಿಕ
ನಿಮ್ಮ ಭೀತಿ, ಆತಂಕ ಹೋಗಲಾಡಿಸಲು ಪ್ರಯತ್ನ ಪಡಿ. ಭಾವನೆ ಹಂಚಿಕೊಳ್ಳಿ. ನಿಮ್ಮನ್ನು ಪೂರ್ಣವಾಗಿ ಅರಿತವರ ನೆರವು ಪಡಕೊಳ್ಳದಿರಿ.
ಧನು
ನೀವು ಉದ್ದೇಶಿಸಿದ ಕಾರ್ಯ ಇಂದು ಸಾಧ್ಯ ಆಗದಿರಬಹುದು. ಹತಾಶೆ ಬೇಡ, ನಾಳೆಯೆಂಬುದು ಇದ್ದೇ ಇದೆ. ಮರಳಿ ಪ್ರಯತ್ನವ ಮಾಡಿರಿ.
ಮಕರ
ವಿವಾದದಿಂದ ದೂರವಿರಿ. ನೀವು ಬಯಸದಿದ್ದರೂ ಕೆಲವರು ತಮ್ಮ ಬಿಕ್ಕಟ್ಟಿನಲ್ಲಿ ನಿಮ್ಮನ್ನು ಎಳೆಯಬಹುದು. ಕೌಟುಂಬಿಕ ಒತ್ತಡ.
ಕುಂಭ
ವೃತ್ತಿಯಲ್ಲಿ ಕೆಲವು ಅನುಚಿತ ಬೆಳವಣಿಗೆ ಸಂಭವ. ಆರೋಗ್ಯದ ಬಗ್ಗೆ ಗಮನ ಕೊಡಿ. ಅತಿಯಾಗಿ ಸಿಹಿ ಪದಾರ್ಥ ಸೇವಿಸದಿರಿ.
ಮೀನ
ದೈನಂದಿನ ಕಾರ್ಯದ ಮಧ್ಯೆಯೂ ನೀವು ಇಂದು ಹೆಚ್ಚು ಸಂತೋಷ ಅನುಭವಿಸುವಿರಿ. ಅದಕ್ಕೆ ನಿಮ್ಮ ಮನಸ್ಥಿತಿಯಲ್ಲಿ ಆದ ಬದಲಾವಣೆ ಕಾರಣ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ