ಜನ ಗೊತ್ತಿದ್ದೋ ಗೊತ್ತಿಲ್ಲದೆಯೋ ಮೊದಲು ನೋಡೋದು ಹಲ್ಲುಗಳನ್ನು. ಹಲ್ಲುಗಳು ಕ್ಲೀನ್ ಇದ್ದರೆ ಮಾತ್ರ ಹೈಜಿನ್ ಆಗಿದ್ದಾರೆ ಎಂದು ಅಂದುಕೊಳ್ತಾರೆ. ಹಲ್ಲುಗಳ ಆರೋಗ್ಯ ಇಡೀ ದೇಹದ ಜೊತೆ ಕನೆಕ್ಷನ್ ಇಟ್ಟುಕೊಂಡಿದೆ. ಹಾಗಾಗಿ ಆರೋಗ್ಯಕರ ಹಲ್ಲುಗಳಿಗಾಗಿ ಈ ರೀತಿ ಹೈಜಿನ್ ಮೇಂಟೇನ್ ಮಾಡಿ..
ಹಲ್ಲುಗಳನ್ನು ದಿನದಲ್ಲಿ 2 ಬಾರಿ ಉಜ್ಜುವುದರಿಂದ ಹಲ್ಲಿನ ಸ್ವಚ್ಚತೆ ಕಾಪಾಡಬಹುದು. ಜೊತೆಗೆ ಹಲ್ಲಿನ ಸಂಧಿಗಳಲ್ಲಿ ಸಿಕ್ಕಿಕೊಳ್ಳುವ ಆಹಾರವು ಬಹು ಬೇಗ ಸ್ವಚ್ಚವಾಗುತ್ತದೆ.
ಯಾವುದೇ ಹಣ್ಣುಗಳನ್ನು ತಿನ್ನುವಾಗ ಅದು ನೈಸರ್ಗಿಕವಾಗಿ ಹೇಗಿರುತ್ತೋ ಹಾಗೇ ತಿನ್ನುವುದರಿಂದ ಹಲ್ಲುಗಳಿಗೆ ಒಳ್ಳೆಯದು. ಅದಕ್ಕೆ ಸಕ್ಕರೆ ಸೇರಿಸಿ ಜ್ಯೂಸ್ ಮಾಡಿ ಕುಡಿಯುವುದು ಹಲ್ಲುಗಳಿಗೆ ಒಳ್ಳೆಯದಲ್ಲ.
ಹಲ್ಲಿನ ಸಂಧಿಗಳಲ್ಲಿ ಆಹಾರ ಸಿಕ್ಕಿ ಹಾಕಿಕೊಂಡರೇ ಅದು ಕೆಲವೊಮ್ಮೆ ಹೊರಗೆ ಬರವುದಿಲ್ಲ. ಇಂತಹ ಸಮಯದಲ್ಲಿ ಯಾವುದೇ ಪಿನ್ನು, ಸೂಜಿ ಅಥವಾ ಚೂಪಾದ ವಸ್ತುಗಳನ್ನು ಬಳಸದೇ ದಾರಗಳನ್ನು ಬಳಸಬೇಕು. ಹಲ್ಲನ್ನು ಸ್ವಚ್ಚಗೊಳಿಸುವ ದಾರಗಳು ಮಾರ್ಕೆಟ್ನಲ್ಲಿ ಲಭ್ಯ ಇವೆ.
ತಂಪಾಗಿರುವ ಆಹಾರವನ್ನು ಸೇವಿಸುವುದು ಹಲ್ಲುಗಳಿಗೆ ಉತ್ತಮವಲ್ಲ. ವಸಡಿನಲ್ಲಿ ನೋವು ಕಾಣಿಸಬಹುದು. ಹೀಗಾಗಿ ಆದಷ್ಟು ಅತೀ ತಂಪಾಗಿರುವ ಆಹಾರದಿಂದ ನಾವು ದೂರವಿರಬೇಕು.
ದಿನಕ್ಕೆ 2 ಬಾರಿಗಿಂತ ಹೆಚ್ಚು ಬಾರಿ ಟೀ, ಕಾಫಿ ಸೇವನೆ ಮಾಡಿದರೆ ಅದು ಹಲ್ಲಿನ ಮೇಲೆ ಪರಿಣಾಮ ಬೀರುತ್ತದೆ. ಈ ಪಾನೀಯಗಳಲ್ಲಿ ಆಮ್ಲೀಯ ಗುಣ ಇರುವುದರಿಂದ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.
ಹಲ್ಲುಜ್ಜಲು ಬ್ರಶ್ ಅನ್ನು ಉಪಯೋಗಿಸುವಾಗ ನಿಧಾನವಾಗಿಯೇ ಉಜ್ಜಬೇಕು. ಹಲ್ಲು ಫಳ ಫಳ ಹೊಳೆಯುತ್ತಾವೆಂದು ಸ್ಪೀಡ್ ಆಗಿ ಉಜ್ಜಿದ್ರೆ ಹಲ್ಲಿನ ಮೇಲ್ಪದರ ಸವೆಯುತ್ತದೆ. ಹೀಗಾಗಿ ಹಲ್ಲಿನ ದೃಢತೆ ಕಡಿಮೆಯಾಗಿ ಬೇಗ ಉದುರಿ ಹೋಗಬಹುದು.
ಕೆಲವೊಬ್ಬರಿಗೆ ಉಗುರು ಕಚ್ಚುವುದು ಅಭ್ಯಾಸ ಇರುತ್ತದೆ. ಇದು ಹಲ್ಲಿನ ಅನಾರೋಗ್ಯಕ್ಕೆ ಕಾರಣ ಆಗುತ್ತೆ. ಹೇಗೆಂದರೆ ಉಗುರಿನಿಂದ ಸೂಕ್ಷ್ಮಾಣು ಜೀವಿಗಳು ನೇರ ಬಾಯಿಗೆ ಹೋಗಿ ಅಲ್ಲಿ ಹಲ್ಲಿನ ಮೇಲೆ ಪ್ರಭಾವ ಬೀರುತ್ತಾವೆ. ಇದರಿಂದ ಉಗುರು ಕಚ್ಚುವುದು ಇಂದೇ ಬಿಟ್ಟೆ ಬಿಡಿ.