ಆರೋಗ್ಯಕರ ಸಂಜೆಯ ತಿಂಡಿಗೆ ಮಖಾನಾ ಚಾಟ್ ಒಳ್ಳೆಯ ಆಯ್ಕೆ. ಸಪ್ಪೆ ಮಖನಾಗೆ ಮಸಾಲೆ, ಟೊಮ್ಯಾಟೊ, ಈರುಳ್ಳಿ, ಹಸಿಮೆಣಸು ಸೇರಿಸಿ ತಯಾರಾಗುವ ಈ ಚಾಟ್ ಬೇಗನೆ ತಯಾರಾಗುತ್ತೆ. ಮಖಾನಾ ಹೆಚ್ಚು ಫೈಬರ್ ಮತ್ತು ಪ್ರೋಟೀನ್ಅನ್ನು ಹೊಂದಿರುವುದರಿಂದ ಇದು ಆರೋಗ್ಯಕ್ಕೂ ಹಿತಕರ.
ಬೇಕಾಗುವ ಪದಾರ್ಥಗಳು:
1½ ಕಪ್ ಮಖಾನಾ
½ ಟೀಸ್ಪೂನ್ ಮೆಣಸಿನ ಪುಡಿ
½ ಟೀಸ್ಪೂನ್ ಆಮ್ಚೂರ್ ಪುಡಿ
1 ಚಮಚ ಚಾಟ್ ಮಸಾಲ
¼ ಟೀಸ್ಪೂನ್ ಉಪ್ಪು
2 ಚಮಚ ಟೊಮೆಟೊ , ಕತ್ತರಿಸಿದ್ದು
2 ಚಮಚ ಈರುಳ್ಳಿ , ಕತ್ತರಿಸಿದ್ದು
2 ಚಮಚ ಸೌತೆಕಾಯಿ , ಕತ್ತರಿಸಿದ್ದು
2 ಚಮಚ ಹಸಿರು ಚಟ್ನಿ
2 ಚಮಚ ಹುಣಸೆ ಚಟ್ನಿ
2 ಚಮಚ ಕೊತ್ತಂಬರಿ ಸೊಪ್ಪು , ಕತ್ತರಿಸಿದ್ದು
2 ಚಮಚ ಕಡಲೆಕಾಯಿ
ಮಾಡುವ ವಿಧಾನ:
ಮೊದಲು 1½ ಕಪ್ ಮಖಾನಾವನ್ನು ಕಡಿಮೆ ಉರಿಯಲ್ಲಿ ಗರಿಗರಿಯಾಗುವವರೆಗೆ ಹುರಿಯಿರಿ. ಈಗ ಒಂದು ಬಟ್ಟಲಿನಲ್ಲಿ ½ ಟೀಸ್ಪೂನ್ ಮೆಣಸಿನ ಪುಡಿ, ½ ಟೀಸ್ಪೂನ್ ಆಮ್ಚೂರ್ ಪುಡಿ, 1 ಟೀಸ್ಪೂನ್ ಚಾಟ್ ಮಸಾಲ ಮತ್ತು ¼ ಟೀಸ್ಪೂನ್ ಉಪ್ಪು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
ಇದಕ್ಕೆ ಕತ್ತರಿಸಿದ ಟೊಮೆಟೊ, ಈರುಳ್ಳಿ, ಸೌತೆಕಾಯಿ, ಹಸಿರು ಚಟ್ನಿ ಮತ್ತು ಹುಣಸೆ ಚಟ್ನಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಹುರಿದ ಮಖಾನಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಗೆ ಕೊತ್ತಂಬರಿ ಸೊಪ್ಪು ಮತ್ತು ಕಡಲೆಕಾಯಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಮಖಾನಾ ಚಾಟ್ ರೆಡಿ.