ಹಾಸನದಲ್ಲಿ ಹೃದಯಾಘಾತ ಸರಣಿ ಸಾವಿನ ಕುರಿತು ಎಚ್.ಡಿ ರೇವಣ್ಣ ಹೇಳಿದ್ದೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಇಂದು ಹಾಸನ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು ಹೃದಯಾಘಾತಕ್ಕೆ 5 ಜನರು ಬಲಿಯಾಗಿದ್ದಾರೆ.

ಇತ್ತ ಕಳೆದ 46 ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಜನರು ಹೃದಯಘಾತದಿಂದ ಸಾವನಪ್ಪಿದ್ದಾರೆ. ಇದೀಗ ಹಾಸನದಲ್ಲಿ ಈ ಒಂದು ಸರಣಿ ಸಾರಿಗೆ ಅತಿಯಾದ ಮಾಂಸ ಸೇವನೆ ಕಾರಣ ಎಂದು ಶಾಸಕ ಎಚ್.ಡಿ ರೇವಣ್ಣ ಹೇಳಿದ್ದಾರೆ.

ಹೃದಯಾಘಾರದಿಂದ ಸರಣಿ ಸಾವುಗಳಿಗೆ ಮಾಂಸಹಾರ ಸೇವನೆಯೇ ಕಾರಣ ಎಂದು ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಎಚ್.ಡಿ ರೇವಣ್ಣ ಹೇಳಿಕೆ ನೀಡಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಗಳ ಸಂಖ್ಯೆ ಹೆಚ್ಚಾಗಿದೆ. ಆದಾಯ ಬರುತ್ತೆ ಎಂದು ಹೆಚ್ಚಿನ ಸಂಖ್ಯೆಯಲ್ಲಿ ಬಾರ್ ತೆರೆದಿದ್ದಾರೆ. ಬಾರ್ ನಲ್ಲಿ ಕುಡಿದು ಅನಾಹುತವಾಗುತ್ತಿದೆ ಎಂದು ಕಿಡಿಕಾರಿದರು. ವೈದ್ಯರ ಜೊತೆ ಶಾಸಕ ಎಚ್.ಡಿ ರೇವಣ್ಣ ಈ ಎಲ್ಲಾ ಅಂಶಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!