ಮಳೆಗಾಲ ಅಂದ್ರೆ ಮನಸ್ಸಿಗೆ ತಣ್ಣನೆಯ ಅನುಭವ. ಮಂಜು, ಮಳೆಹನಿ, ಹಸಿರು ಗಿರಿಗಳನ್ನು ನೋಡುವ ಸಂತೋಷವೇ ಬೇರೆ. ಇಂತಹ ಪ್ರಾಕೃತಿಕ ಶೋಭೆಯ ಸವಿಯನ್ನು ಅರಿಯಲು ಮಳೆಗಾಲದಲ್ಲಿ ಪ್ರವಾಸ ತೀರ್ಥಕ್ಷೇತ್ರದಷ್ಟೇ ಆದ್ಯತೆ ಪಡೆಯುತ್ತದೆ. ಇಂದಿನ ಲೇಖನದಲ್ಲಿ, ಮಳೆಗಾಲದ ಮ್ಯಾಜಿಕ್ ನೋಡಲು ಅಪ್ರತಿಮ ಪ್ರವಾಸ ತಾಣಗಳು ಇಲ್ಲಿವೆ.
ಆಗುಂಬೆ – ಕರ್ನಾಟಕದ ಚಿರಾಪುಂಜಿ
ಬೆಂಗಳೂರಿನಿಂದ 350 ಕಿಮೀ ದೂರವಿರುವ ಆಗುಂಬೆ, ಮಳೆಗಾಲದಲ್ಲಿ ಸಂಪೂರ್ಣ ಹಸಿರಿನಲ್ಲಿ ಮುಳುಗಿರುತ್ತದೆ. ಇಲ್ಲಿನ ದಟ್ಟಾರಣ್ಯಗಳು, ಜೋಗಿಗುಂಡಿ, ಬರ್ಕಣ ಜಲಪಾತಗಳು ಪ್ರಕೃತಿಯ ನೈಸರ್ಗಿಕ ವೈಭವವನ್ನೇ ತೋರಿಸುತ್ತವೆ. ಧೋ ಎಂದು ಸುರಿಯುವ ಮಳೆಯ ನಡುವೆ ಇಲ್ಲಿಗೆ ಭೇಟಿ ನೀಡುವುದು ನಿಜಕ್ಕೂ ಮಾಯಾ ಅನುಭವ.
ಸಕಲೇಶಪುರ – ಮಳೆಗಾಲದ ಪೈಂಟಿಂಗ್
ಸಕಲೇಶಪುರ ಸುತ್ತಲಿನ ಕಾಫಿ ತೋಟಗಳು, ಬಿಸಿಲೆ ಘಾಟ್, ಮಂಜರಾಬಾದ್ ಕೋಟೆ ಮಳೆಗಾಲದಲ್ಲಿ ಹೊಸ ರೂಪ ಪಡೆಯುತ್ತವೆ. ಬೆಂಗಳೂರಿನಿಂದ 220 ಕಿಮೀ ದೂರದಲ್ಲಿ ಇರುವ ಈ ಸ್ಥಳ ಪ್ರವಾಸಿಗರಿಗೆ ಅದ್ಭುತ ಅನುಭವವನ್ನು ನೀಡುತ್ತದೆ.
ಶಿವನಸಮುದ್ರ – ಜಲಪಾತಗಳ ವೈಭವ
ಮಳೆಗಾಲದಲ್ಲಿ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಭೋರ್ಗರೆಯುವ ಶಬ್ದದೊಂದಿಗೆ ಕಾಣಿಸಿಕೊಳ್ಳುವ ದೃಶ್ಯ ನಿಜಕ್ಕೂ ಮನ ಮೇಳೈಸುತ್ತದೆ. ಬೆಂಗಳೂರಿನಿಂದ ಕೇವಲ 135 ಕಿಮೀ ದೂರದಲ್ಲಿರುವ ಈ ಸ್ಥಳ, ಒಂದು ದಿನದ ಟ್ರಿಪ್‌ಗೇ ಪರ್ಫೆಕ್ಟ್.
ಕೂರ್ಗ್ – ಮಳೆಹನಿಗಳ ಹಸಿರು ತಂಗಾಳಿ
ಕೂರ್ಗ್ ಅಥವಾ ಮಡಿಕೇರಿ, ಪ್ರಕೃತಿಪ್ರಿಯರ ಸ್ವರ್ಗ. 260 ಕಿಮೀ ದೂರದಲ್ಲಿರುವ ಈ ತಾಣ ಮಳೆಗಾಲದಲ್ಲಿ ಕಾಫಿ ತೋಟಗಳ ಸುಗಂಧ, ಮಂಜು, ಜಲಪಾತಗಳು ರೋಮಾಂಚನದಿಂದ ತುಂಬಿರುತ್ತದೆ. ಅಬ್ಬೆ ಫಾಲ್ಸ್, ಇರುಪ್ಪು ಫಾಲ್ಸ್ ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.
ಚಿಕ್ಕಮಗಳೂರು – ಹಸಿರಿನ ರಾಜಧಾನಿ
ಚಿಕ್ಕಮಗಳೂರು ವರ್ಷದಾದ್ಯಂತ ಸುಂದರವಾದರೂ, ಮಳೆಗಾಲದಲ್ಲಿ ಇಲ್ಲಿನ ಹೆಬ್ಬೆ ಫಾಲ್ಸ್, ಮುಳ್ಳಯ್ಯನಗಿರಿ ಬೆಟ್ಟಗಳು ನಿಜಕ್ಕೂ ಲೈವ್ ಪೇಂಟಿಂಗ್‌ನಂತೆ ಕಾಣಿಸುತ್ತವೆ. 240 ಕಿಮೀ ದೂರದಲ್ಲಿರುವ ಈ ತಾಣ ಪ್ರಕೃತಿಯನ್ನು ನೆನೆಯಲು ಸೂಕ್ತವಾದ ಸ್ಥಳ.
ಕಬಿನಿ ವನ್ಯಜೀವಿ ಅಭಯಾರಣ್ಯ – ಮಳೆಯ ನಡುವೆ ಸಫಾರಿ
ಮಳೆಗಾಲದಲ್ಲಿ ಕಬಿನಿ ನದಿ ಉಕ್ಕಿ ಹರಿಯುತ್ತದೆ. ಇಲ್ಲಿ ಸಫಾರಿ ಮಾಡುವ ಅನುಭವವೇ ಬೇರೆ. ಆನೆ, ಹುಲಿ, ಜಿಂಕೆ ಮತ್ತು ಹಲವಾರು ಪಕ್ಷಿಗಳ ವೀಕ್ಷಣೆಗೆ ಇದು ಪರ್ಫೆಕ್ಟ್ ಜಾಗ. ಆದರೆ ಹೆಚ್ಚು ಮಳೆಯಿದ್ದರೆ ಸುರಕ್ಷತೆಗೆ ಪ್ರಾಮುಖ್ಯತೆ ನೀಡಬೇಕು.
ಮಳೆಗಾಲದಲ್ಲಿ ಪ್ರಯಾಣ ನಿಸ್ಸಂದೇಹವಾಗಿ ಅದ್ಭುತ ಅನುಭವ. ಆದರೆ ಸುರಕ್ಷತೆ, ಹವಾಮಾನ ಮತ್ತು ರಸ್ತೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕು. ಪ್ರಕೃತಿಯ ಮ್ಯಾಜಿಕ್ ನೋಡಿ, ಹಸಿರು ಜಗತ್ತಿನಲ್ಲಿ ತಲ್ಲೀನವಾಗೋ ಸಮಯ ಇದು!