ನಟ ಮಹೇಶ್ ಬಾಬು ಅವರ ವಿರುದ್ಧ ವಂಚನೆ ಆರೋಪ: ನೊಟೀಸ್ ಜಾರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಟ ಮಹೇಶ್ ಬಾಬು ಅವರ ವಿರುದ್ಧ ವಂಚನೆ ಆರೋಪ ಬಂದಿದ್ದು, ನೊಟೀಸ್ ಸಹ ನೀಡಲಾಗಿದೆ.

ಮಹೇಶ್ ಬಾಬು ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ, ನಟಿಸುತ್ತಲೇ ಇರುತ್ತಾರೆ. ಅವರೇ ಒಮ್ಮೆ ಹೇಳಿಕೊಂಡಿದ್ದಂತೆ ಕೋವಿಡ್ ಸಮಯದಲ್ಲಿ ಕೇವಲ ಜಾಹೀರಾತುಗಳಲ್ಲಿ ನಟಿಸಿ ಒಂದು ದೊಡ್ಡ ಪ್ರಾಪರ್ಟಿ ಖರೀದಿಸಿ ಒಂದು ಮನೆಯನ್ನೂ ಕಟ್ಟಿಸಿದ್ದರಂತೆ. ಆದರೆ ಈಗ ಜಾಹೀರಾತೊಂದರಿಂದಲೇ ಮಹೇಶ್ ಬಾಬು ಮೇಲೆ ವಂಚನೆ ಆರೋಪ ಬಂದಿದೆ.

ಸಾಯಿ ಸೂರ್ಯ ಡೆವೆಲಪರ್ಸ್ ಹೆಸರಿನ ರಿಯಲ್ ಎಸ್ಟೇಟ್ ಸಂಸ್ಥೆಗೆ ಮಹೇಶ್ ಬಾಬು ರಾಯಭಾರಿ ಆಗಿದ್ದರು. ಸಾಯಿ ಸೂರ್ಯ ಡೆವೆಲಪರ್ಸ್​ ನವರು ಮಹೇಶ್ ಬಾಬು ಅವರ ಚಿತ್ರ ಬಳಸಿ ಕೆಲವು ಅನಧಿಕೃತ ಸ್ಥಳಗಳನ್ನು ಗ್ರಾಹಕರಿಗೆ ಮಾರಾಟ ಮಾಡಿದ್ದು, ಸೂಕ್ತ ದಾಖಲೆ ಇಲ್ಲದ, ನಿಬಂಧನೆಗಳಿಗೆ ಒಳಪಟ್ಟ ಸ್ಥಳಗಳನ್ನು ಗ್ರಾಹಕರಿಗೆ ಸಾಯಿ ಸೂರ್ಯ ಡೆವೆಲಪರ್ಸ್ ಮಾರಾಟ ಮಾಡಿದ್ದು, ಆ ಲೇಔಟ್​​ನ ಜಾಹೀರಾತಿಗೆ ಮಹೇಶ್ ಬಾಬು ಚಿತ್ರವನ್ನು ಸಂಸ್ಥೆ ಬಳಸಿದ ಆರೋಪವಿದೆ.

ಹೈದರಾಬಾದ್ ಬಳಿಯ ಬಾಲಾಪುರ ಹಳ್ಳಿ ವ್ಯಾಪ್ತಿಯಲ್ಲಿ ಲೇಔಟ್ ಮಾಡಿದ್ದ ಸಾಯಿ ಸೂರ್ಯ ಡೆವೆಲಪರ್ಸ್ ಹಲವಾರು ಮಂದಿ ಗ್ರಾಹಕರಿಗೆ ಪ್ರತಿ ಸೈಟಿಗೆ ಸುಮಾರು 35 ಲಕ್ಷದಂತೆ ಹಲವಾರು ಸೈಟುಗಳನ್ನು ಮಾರಾಟ ಮಾಡಿತ್ತು.

ಗ್ರಾಹಕರ ವೇದಿಕೆ, ಇಡಿ ಸೇರಿದಂತೆ ಇನ್ನೂ ಕೆಲವು ಕಡೆಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಇಡಿ ತನಿಖೆಯಿಂದ ಗೊತ್ತಾಗಿರುವಂತೆ ಸಾಯಿ ಸೂರ್ಯ ಡೆವೆಲಪರ್ಸ್​ನವರು ಮಹೇಶ್ ಬಾಬುಗೆ 5.90 ಕೋಟಿ ರೂಪಾಯಿ ಸಂಭಾವನೆಯನ್ನು ನೀಡಲಾಗಿದೆ. ಇದೀಗ ಇಡಿ ಮಹೇಶ್ ಬಾಬುಗೆ ನೊಟೀಸ್ ಜಾರಿ ಮಾಡಿದ್ದು, ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಮಹೇಶ್ ಬಾಬು ಮುಂದಿನ ದಿನಗಳಲ್ಲಿ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!