ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು ಕೂದಲು ಉದುರುವುದು. ಈ ಸಮಸ್ಯೆಗೆ ಬಹುತೇಕರು ಪರಿಹಾರ ಹುಡುಕುತ್ತಿದ್ದಾರೆ ಆದ್ರೆ ಯಾವ್ದು ಮಾಡಬೇಕು ಬಿಡಬೇಕು ಅನ್ನೋದು ಗೊತ್ತಾಗುತ್ತಿಲ್ಲ. ಕೇವಲ ಎಣ್ಣೆ ಹಚ್ಚುವುದು, ಶಾಂಪೂ ಬದಲಾಯಿಸುವುದರಿಂದ ಮಾತ್ರ ಸಮಸ್ಯೆ ಪರಿಹಾರವಾಗದು. ಕೂದಲು ಉದುರುವುದನ್ನು ತಡೆದು, ಹೊಸ ಕೂದಲು ಬೆಳವಣಿಗೆಯಾಗಲು ಆಹಾರ ಕ್ರಮದಿಂದ ಹಿಡಿದು ಮನೆಮದ್ದುಗಳವರೆಗೆ ಸಹಾಯವಾಗಬಹುದು. ಈ ಕೆಲವು ಪರಿಣಾಮಕಾರಿ ಮನೆಮದ್ದುಗಳನ್ನು ನೀವು ಪಾಲಿಸಿ ನೋಡಿ.
ಪೋಷಕಾಂಶಗಳಿರುವ ಆಹಾರ ಸೇವನೆ ಮಾಡಿ
ನಮ್ಮ ಆಹಾರ ಕ್ರಮವು ನೇರವಾಗಿ ಕೂದಲು ಹಾಗೂ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಿಟಮಿನ್ B5, ಐರನ್, ಪ್ರೋಟೀನ್‌ಗಳು, ಒಮೆಗಾ-3 ಕೊಬ್ಬು ಆಮ್ಲಗಳಿರುವ ಆಹಾರಗಳು ಕೂದಲು ಬೆಳವಣಿಗೆಗೆ ನೆರವಾಗುತ್ತವೆ. ಮೊಟ್ಟೆ, ಮೊಸರು, ಸೊಪ್ಪು ತರಕಾರಿ, ಬಾದಾಮಿ, ಮೆಂತೆ ಹೀಗೆ ಅನೇಕ ಆಹಾರಗಳನ್ನು ನಿಯಮಿತವಾಗಿ ಸೇವನೆ ಮಾಡಿದರೆ ಕೂದಲು ಉದುರುವ ಪ್ರಮಾಣ ಕಡಿಮೆಯಾಗಬಹುದು.
ಕ್ಯಾಸ್ಟರ್ ಆಯಿಲ್ ಮತ್ತು ಮೆಂತ್ಯಬೀಜದ ಎಣ್ಣೆ
ಕೂದಲು ಉದುರುವುದನ್ನು ತಡೆಯಲು ಅತ್ಯಂತ ಪರಿಣಾಮಕಾರಿ ವಿಧಾನವೆಂದರೆ ಕ್ಯಾಸ್ಟರ್ ಆಯಿಲ್ ಬಳಸುವುದು. ನಾಲ್ಕು ಚಮಚ ಕ್ಯಾಸ್ಟರ್ ಎಣ್ಣೆ ತೆಗೆದುಕೊಂಡು, ಅದರಲ್ಲಿ ಸ್ವಲ್ಪ ಮೆಂತ್ಯ ಬೀಜ ಸೇರಿಸಿ ಕುದಿಸಿ. ಈ ಎಣ್ಣೆ ತಣ್ಣಗಾದ ಮೇಲೆ, ರಾತ್ರಿ ಮಲಗುವ ಮೊದಲು ನೆತ್ತಿಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ. ಬೆಳಗ್ಗೆ ಶಾಂಪೂ ಬಳಸಿ ತೊಳೆಯಿರಿ. ಇದರ ಫಲಿತಾಂಶ ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ.
ಎಳ್ಳೆಣ್ಣೆ ಮತ್ತು ಕರಿಬೇವಿನ ಎಲೆಗಳ ಮಿಶ್ರಣ
ನೀವು ಕ್ಯಾಸ್ಟರ್ ಆಯಿಲ್ ಬಳಸಲಿಚ್ಚಿಸದಿದ್ದರೆ, ನಾಲ್ಕು ಚಮಚ ಎಳ್ಳೆಣ್ಣೆ ತೆಗೆದುಕೊಂಡು ಅದರಲ್ಲಿ ಕರಿಬೇವಿನ ಎಲೆ ಹಾಕಿ ಚೆನ್ನಾಗಿ ಬಿಸಿ ಮಾಡಿ. ಎಣ್ಣೆ ತಣ್ಣಗಾದ ಮೇಲೆ ನೆತ್ತಿಗೆ ಹಚ್ಚಿ ಅರ್ಧ ಗಂಟೆ ಹಾಗೆಯೇ ಬಿಡಿ. ನಂತರ ಶಾಂಪೂ ಬಳಸಿ ತೊಳೆಯಿರಿ. ಈ ವಿಧಾನ ಹೊಸ ಕೂದಲು ಬೆಳವಣಿಗೆಗೆ ಸಹಾಯಮಾಡುತ್ತದೆ.
ಬೆಲ್ಲ ಮತ್ತು ಎಳ್ಳೆಣ್ಣೆಯ ಮಿಶ್ರಣ
ಎಳ್ಳೆಣ್ಣೆಯಲ್ಲಿ ಸ್ವಲ್ಪ ಬೆಲ್ಲ ಹಾಕಿ ಬಿಸಿ ಮಾಡಿ. ತಣ್ಣಗಾದ ಮೇಲೆ ಈ ಎಣ್ಣೆಯನ್ನು ತಲೆಗೆ ಹಚ್ಚಿ. ಅರ್ಧ ಗಂಟೆ ನಂತರ ಶಾಂಪೂ ಬಳಸಿ ತೊಳೆಯಿರಿ. ಈ ಮಿಶ್ರಣ ಕೂದಲು ಉದುರುವುದನ್ನು ತಡೆಯುವ ಜೊತೆಗೆ ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ಕೂದಲು ಉದುರುವ ಸಮಸ್ಯೆಗೆ ರಾಸಾಯನಿಕ ಉತ್ಪನ್ನಗಳ ಬದಲು ಮನೆಮದ್ದುಗಳನ್ನು ಬಳಸುವುದು ಹೆಚ್ಚು ಸುರಕ್ಷಿತ ಹಾಗೂ ಪರಿಣಾಮಕಾರಿ. ಸರಿಯಾದ ಆಹಾರ ಕ್ರಮ, ನಿಯಮಿತ ಎಣ್ಣೆ ಹಚ್ಚುವುದು ಮತ್ತು ಸರಳ ಮನೆಮದ್ದುಗಳ ಬಳಕೆ ಕೂದಲು ಪುನಃ ಬೆಳೆಯಲು ಸಹಾಯಮಾಡಬಹುದು. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)